ಜಾನುವಾರುಗಳಿಗೆ ಗಂಟು ರೋಗ | ರೋಗ ಹರಡದಂತೆ ಹೋಮಿಯೋಪಥಿ ಔಷಧಿ ಸಹಕಾರಿ |

Advertisement
Advertisement
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಗಂಟು ರೋಗ ಕಾಣಿಸಿಕೊಂಡಿದೆ. ಇದಕ್ಕೆ ಹೋಮಿಯೋಪಥಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಬಲ್ಲ ಔಷಧಿಯ ಬಗ್ಗೆ ವೈದ್ಯ ಡಾ.ಆದಿತ್ಯ ಚಣಿಲ ಮಾಹಿತಿ ನೀಡಿದ್ದಾರೆ. ಅವರ ಬರಹದ ಯಥಾವತ್ತಾದ ರೂಪ ಇಲ್ಲಿದೆ…

ದ. ಕ ಜಿಲ್ಲೆಯನ್ನು ಸೇರಿಸಿ ದೇಶದ ಹಲವೆಡೆಯಲ್ಲಿ ಜಾನುವಾರುಗಲಿಗೆ ಗಂಟು ರೋಗ ಸಾಂಕ್ರಾಮಿಕವಾಗಿ ಹರಡುತ್ತಲೇ ಇದೆ. ಜಾನುವಾರುಗಳಿಗೆ ಬಂದ ಕಾಯಿಲೆಯು ಜನರ ನಿದ್ದೆ ಕೆಡಿಸಿದೆ. ಹೈನುಗಾರಿಕೆಯೆನ್ನೇ ಅಲವಂಬನೆ ಮಾಡಿರುವ ಕೃಷಿಕರಿಗೆ ಸಂಕಷ್ಟವಾಗಿದೆ. ಇದು ಜಾನುವಾರುಗಳಿಗೆ ಬರುವ ಕಾಯಿಲೆಯಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ ಎಂದು ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ದೃಢೀಕರಣ ಪಡಿಸಿದೆ.

Advertisement

Advertisement
Advertisement

ರೋಗ ಲಕ್ಷಣಗಳೇನು?:

 • ಜ್ವರ
 • ಜ್ವರಕ್ಕೆ ಸಂಬಂಧಿತವಾದ ಗಂಟು ನೋವು ,ಶೀತ ದಿನನಿತ್ಯದ ಚಟುವಟಿಕೆಯಾದ ಮಲ ,ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಮತ್ತು ಆಹಾರ ಸೇವನೆ ಕಡಿಮೆಯಾಗುತ್ತದೆ.
 •  ಬಾಯಿ ಮೂಗಿನಿಂದ ಲೊಳೆಯಂತಹ ದ್ರವ
 • ಕೆಲವೊಮ್ಮೆ ಕರುಗಳಲ್ಲಿ ಮಲವು ನೀರಿನಂತಾಗಿ (Diarrhoea)  ಇರುತ್ತದೆ. ಜ್ವರ ಇರುವ ಸಂಧರ್ಬದಲ್ಲಿ ರಾತ್ರಿಯಿಡೀ ಮಲಗದೆ ನಿಂತಿರುವ ಉದಾಹರಣೆಯೂ ಇದೆ.
 •  ಹಾಲು ನೀಡಿವಿಕೆ ಪ್ರಮಾಣದಲ್ಲಿ ಇಳಿಮುಖ.
 • ಶರೀರದಲ್ಲಿ ಅಲ್ಲಲ್ಲಿ ಸಿಡುಬಿನಂತಹ ಗುಳ್ಳೆಗಳು, ಗಂಟುಗಳು ಎದ್ದು ಒಡೆಯುವುದು.
 • ದನಗಳು ಶೇ.2ರಷ್ಟು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊದಲೂಬಹುದು.

ಒಂದು ಮುಖ್ಯವಾದ ವಿಷಯ ಏನೆಂದರೆ, ಹೇಗೆ ಕೋರೋನಾದ ಸಮಯದಲ್ಲಿ ಇಮ್ಯುನಿಟಿ ಹೆಚ್ಚಿಸುವಲ್ಲಿ ಹೋಮಿಯೋಪಥಿ ಯಶಸ್ವಿಯಾಯಿತು. ಹಾಗೆ ಹೋಮಿಯೋಪಥಿ ಈಗ ಜಾನುವಾರುಗಳ ಇಮ್ಯುನಿಟಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

Advertisement
Advertisement

ಕೆಲವು ವಿಷಯ ನಮಗೆ ಅರಿತಿರಬೇಕು:

Advertisement
Advertisement
 • ರೋಗ ಇರುವ ದನಗಳಿಂದ ಇಲ್ಲದಿರುವುದನ್ನು ಬೇರ್ಪಡಿಸಬೇಕು.
 • ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು.
 • ಸೋಂಕು ನಿವಾರಣಾ ಚಿಕಿತ್ಸೆ.
 •  ಹೆಚ್ಚಾಗಿ ಬಂದ 15-30 ದಿನದ ಒಳಗಡೆ ಸಂಪೂರ್ಣ ಗುಣ ಮುಖ ಆಗುತ್ತದೆ.

ಹೋಮಿಯೋಪಥಿ: ಇದುವರೆಗೆ ಹಲವಾರು ದನಕರುಗಳು ಹೋಮಿಯೋಪಥಿ ಔಷಧಿಯಿಂದ ಗುಣಮುಖವಾಗಿದ್ದು ಅದರೊಡನೆ ರೋಗ ಹರಡದ ರೀತಿಯಲ್ಲಿ ಇಮ್ಯುನಿಟಿ ಹೆಚ್ಚಿಸಲು ಸಹಕಾರಿಯಾಗಿದೆ. ಹೆಚ್ಚಿನ ದನಕರುಗಳು ಚಿಕಿತ್ಸೆಗೆ ಸ್ಪಂದಿಸಿದೆ.

ಬರಹ :
ಡಾ.ಆದಿತ್ಯ ಚಣಿಲ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜಾನುವಾರುಗಳಿಗೆ ಗಂಟು ರೋಗ | ರೋಗ ಹರಡದಂತೆ ಹೋಮಿಯೋಪಥಿ ಔಷಧಿ ಸಹಕಾರಿ |"

Leave a comment

Your email address will not be published.


*