ಆ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು….!

November 30, 2020
11:42 PM

ಇದೊಂದು ಅಭಿಪ್ರಾಯವನ್ನು ರೂರಲ್‌ ಮಿರರ್‌ ಪ್ರಕಟಿಸಲು ಆಸಕ್ತಿ ವಹಿಸಿದೆ. ಶ್ರದ್ಧೆ ಹಾಗೂ ಆ ಪ್ರಾಮಾಣಿಕತೆ ಇಡೀ ಸಮುದಾಯಕ್ಕೆ ಮಾದರಿಯಾಗಿದೆ ಕೂಡಾ.  ಬಾಳಿಲದ ವೈದ್ಯರ ಪತ್ನಿ ಬರೆದಿರುವ ಈ ಅಭಿಪ್ರಾಯ ಹೀಗಿದೆ……

Advertisement
Advertisement

ನಮ್ಮ ಬಾಳಿಲದ ಪಕ್ಕದ ಐವರ್ನಾಡಿನಲ್ಲಿ ಒಂದು ಪುಟ್ಟ ಕುಟುಂಬ.ಅಪ್ಪ,ಅಮ್ಮ,ಮಗಳು.  ಮಗಳು ಪೋಲಿಯೋ ಪೀಡಿತೆ  .ಕಾರಣಾಂತರಗಳಿಂದ ಆ ಕುಟುಂಬ ಪುತ್ತೂರಿನ ಪುರುಷರಕಟ್ಟೆಗೆ ಹೋಗಿ ನೆಲೆಸುತ್ತದೆ.

ಹಿಂದಿನಿಂದಲೂ ಬಾಳಿಲದ ಡಾಕ್ಟರ್ ಬಳಿಗೆ ಔಷಧಕ್ಕೆ ಬರುತ್ತಿದ್ದವರು ಊರು ಬದಲಾದರೂ ವೈದ್ಯರನ್ನು ಬದಲಿಸಿಲ್ಲ. ಈ ಮಧ್ಯೆ ಅಮ್ಮ ಕಿಡ್ನಿ ಸಮಸ್ಯೆಯಿಂದ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುತ್ತಾರೆ.ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಡುತ್ತಾರೆ. 

ಬಾಳಿಲದ ವೈದ್ಯರು ವಿಧಿವಶರಾದಾಗ ಕ್ಲಿನಿಕ್ ಗೆ ಬೇರೆ ವೈದ್ಯರು ಬರುತ್ತಾರಾ ಅಂತ ವಿಚಾರಿಸಿಕೊಳ್ತಾರೆ. ನಿರಾಶರಾಗ್ತಾರೆ. ಆಗ ಅವರು ಹೇಳುತ್ತಾರೆ, ನಾವು ಸ್ವಲ್ಪ ದುಡ್ಡು ಕೊಡಲು ಇದೆ ಡಾಕ್ಟರ್ ಗೆ, ಕೊಡ್ತೇವೆ ಅಂತ ಹೇಳಿದ್ದರು.

ಆ 6 ತಿಂಗಳ ಬಳಿಕ ಮೊನ್ನೆ ಕರೆ ಮಾಡಿ ತಿಳಿಸಿದರು. ನಾಳೆ ಬಂದು ದುಡ್ಡು ಕೊಡ್ತೇವೆ ಅಂತ. ತೊಂದರೆ ಇಲ್ಲಮ್ಮ , ನೀವು ಕೊಡ್ಬೇಕಾಗಿಲ್ಲ ಅಂತ ಹೇಳಿದ್ದಕ್ಕೆ. ಇಲ್ಲ, ಕೊಡುತ್ತೇವೆ ತಕೊಳ್ಬೇಕು ಅಂತ ಉತ್ತರ ನೀಡಿದ್ದರು.

Advertisement

ಮರುದಿನ ಆ ಹುಡುಗಿಯ ತಂದೆ ಬಂದು,  ಪಶ್ಚಾತ್ತಾಪದಿಂದ “ಆಜಿ ತಿಂಗಳಾಂಡ್ ಎಂದು ಹೇಳುತ್ತಾ 300 ರೂಪಾಯಿ ಕೊಟ್ಟಾಗ,  ಒಂದು ಮಾತೂ ಬಾರದ ಸ್ಥಿತಿಯಲ್ಲಿ ಧಾರಾಕಾರ ಕಣ್ಣೀರು ಸುರಿಸಬೇಕಾಯಿತು.

ನಿಜವಾಗಿಯೂ ಡಾಕ್ಟರ್ ಗೆ ಸಲ್ಲ ಬೇಕಾದ ಹಣ ಎಷ್ಟಿದೆಯೋ. ಸಲ್ಲಿಸಬೇಕಾದವರು ಎಷ್ಟು ಜನರಿದ್ದಾರೋ ತಿಳಿಯದು….? ಆದರೆ ತಾವಾಗಿ ಹೇಳಿ ತಂದು ಕೊಟ್ಟ ಆ 300  ರೂಪಾಯಿ ಮೌಲ್ಯಕ್ಕಿಂತಲೂ ಪ್ರಾಮಾಣಿಕತೆಗೆ ಬೆಲೆ ಕಟ್ಟಲಾಗದು. 

ಇಂತಹ ಪ್ರಾಮಾಣಿಕತೆಗೆ  ಮನಸಾರೆ ವಂದಿಸುತ್ತಾ ಪ್ರಾರ್ಥಿಸುತ್ತಿದ್ದೇನೆ, ಈ ಕುಟುಂಬ ನೆಮ್ಮದಿಯ ಸುಖ ಸಂತೋಷದ ಬದುಕು ಕಂಡು ಕೊಳ್ಳುವಂತಾಗಲಿ.

# ಚಿಕಿತ್ಸಾ ಬಾಳಿಲ

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಪ್ರಕರಣ | ಜನರು ಆತಂಕ ಪಡುವ ಅಗತ್ಯವಿಲ್ಲ | ಸಚಿವ ದಿನೇಶ್ ಗುಂಡೂರಾವ್
May 24, 2025
10:56 PM
by: The Rural Mirror ಸುದ್ದಿಜಾಲ
ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ರೆಡ್‌-ಎಲ್ಲೋ ಎಲರ್ಟ್‌ |
May 24, 2025
10:45 PM
by: The Rural Mirror ಸುದ್ದಿಜಾಲ
ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |
May 24, 2025
4:43 PM
by: ಮಹೇಶ್ ಪುಚ್ಚಪ್ಪಾಡಿ
ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ
May 24, 2025
11:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group