ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಬಹಳಷ್ಟು ಪ್ರಯತ್ನ ಹಾಗೂ ಕೌಶಲ್ಯವು ಅಗತ್ಯವಾಗಿದೆ. ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಪ್ರಾಮಾಣಿಕವಾದ ಜನರು ಸಂತೋಷವಾಗಿರುತ್ತಾರೆ ಹಾಗೂ ಯಶಸ್ವಿಯಾಗುತ್ತಾರೆ ಎಂಬ ವಿಷಯ ಇಂದಿಗೂ ಪ್ರಸ್ತುತವಾಗಿದೆ.
ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ((“Honesty is a best policy”) ”) ಎಂಬ ನುಡಿಗಟ್ಟನ್ನು ಅಳವಡಿಸಿಕೊಂಡಿರುವ ಹಲವರನ್ನು ನೀವು ಕಂಡಿರಬಹುದು. ಪ್ರಾಮಾಣಿಕತೆಯು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ನೈತಿಕ ಗುಣವನ್ನು ಅಭಿವೃದ್ಧಿಪಡಿಸುತ್ತದೆ.
ಪ್ರಾಮಾಣಿಕತೆ ಶಿಸ್ತು,ಸತ್ಯ ಹಾಗೂ ನೈತಿಕ ಸಮಗ್ರತೆಗಳಂತಹ ಲಕ್ಷಣಗಳನ್ನುಅಭಿವೃದ್ಧಿಪಡಿಸಲು ಸಹಾಯಪಡಿಸುತ್ತದೆ. ಪ್ರಾಮಾಣಿಕತೆ ನಿಮ್ಮ ಒಡನಾಡಿಗಳ ಸಂಬಂಧ ಹಾಗೂ ವಿಶ್ವಾಸವನ್ನು ಬಲಪಡಿಸುತ್ತದೆ. ಪ್ರಾಮಾಣಿಕತೆಯು ಸ್ನೇಹ ಹಾಗೂ ಬಾಂಧವ್ಯಗಳನ್ನು ಶಾಶ್ವತಗೊಳಿಸುತ್ತದೆ.
ಟಾಟಾ ಸಮೂಹ ಸಂಸ್ಥೆಯ ಅಡಿಯಲ್ಲಿ ಹಲವಾರು ಕೈಗಾರಿಕೆಗಳನ್ನು ಟಾಟಾರವರು ಸ್ಥಾಪಿಸಿದರು. ಒಮ್ಮೆ ಇವರು ತಮ್ಮ ವಿವಿಧ ಕಂಪನಿಗಳ ಲೆಕ್ಕಪರಿಶೋಧಕರ ಒಂದು ಮುಖಾಮುಖಿ ಚರ್ಚೆ ನಡೆಸಿದರು ಸಂಪನ್ಮೂಲ ಹೆಚ್ಚಿಸಲು ಸಲಹೆ ಸೂಚನೆಗಳನ್ನು ನೀಡಲು ಕೇಳಿದರು. ಆಗ ಒಬ್ಬ ಹೇಳಿದ – ನಾವು ನಮ್ಮ ಲೆಕ್ಕಪತ್ರದಲ್ಲಿ ಹೀಗೊಂದು ವ್ಯತ್ಯಾಸ ಮಾಡಿದ್ದಾರೆ ಸಂಪನ್ಮೂಲ ಹೆಚ್ಚಿಸಲು ಸಾಧ್ಯ. ಆಗ ಟಾಟಾರವರು ಇದು ನ್ಯಾಯ ಸಮ್ಮತವಾಗಿದ್ದರೂ ನೈತಿಕವಾಗಿ ಸರಿಯಿದೆಯೇ ಎಂದು ವಿಚಾರಿಸಿ, ಈ ನಿರ್ಧಾರವನ್ನು ತಿರಸ್ಕರಿಸುತ್ತಾರೆ.
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕರಾದ ರಾಹುಲ್ ಡ್ರಾವಿಡ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೆ ನಾಮನಿರ್ದೇಶನ ಮಾಡಿತು. ಆದರೆ ಅವರು ಅದನ್ನು ನಯವಾಗಿ ತಿರಸ್ಕರಿಸಿದರು. ಅವರು ಗೌರವ ಪದವಿಗಿಂತ ಹೆಚ್ಚಾಗಿ ಸಂಶೋಧನೆಯ ಮೂಲಕ ಡಾಕ್ಟರೇಟ್ ಗಳಿಸಲು ಬಯಸಿದರು ಎಂಬ ಕಾರಣ ಬಹಳ ವಿಶಾಲವಾಗಿತ್ತು.
ಬಾಬಿ ಜೋನ್ಸ್ ಒಂದು ಶತಮಾನದ ಹಿಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗಾಲ್ಫ್ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದರು. ಅವರು ತಮ್ಮ ಪ್ರಾಮಾಣಿಕತೆ ಹಾಗೂ ಕ್ರೀಡಾಮನೋಭಾವಕ್ಕೆ ಹೆಸರಾಗಿದ್ದರು. 1925 ರ ಬೋಸ್ಟನ್ ಯುಎಸ್ ಓಪನ್ ನಲ್ಲಿ ಅವರು ತಮ್ಮ ಚೆಂಡನ್ನು11 ನೇ ರಂದ್ರದಲ್ಲಿ ಹೊಡೆದರು.
ಅದಾಗ್ಯೂ ಅವರು ತಮ್ಮ ಪಂದ್ಯದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಆದರೆ ಅವರು ಒಪ್ಪಲಿಲ್ಲ ಅವರು ದೃಢವಾಗಿಯೇ ಉಳಿದರು ಹಾಗೂ ಅದೇ ಅಂತರದಿಂದ ಪಂದ್ಯವನ್ನು ಕಳೆದುಕೊಂಡರು.
ಕ್ರೀಡಾಬರಹಗಾರರು ಅವರ ಪ್ರಾಮಾಣಿಕತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ನೀವು ವೈಫಲ್ಯಕ್ಕೆ ಹೆದರಬೇಡಿ ಹಾಗೂ ಪ್ರಾಮಾಣಿಕತೆಯಿಂದ ವರ್ತಿಸುವ ಜನರು ಸಂತೋಷದಿಂದ ಇರುತ್ತಾರೆ ಎಂಬ ನೀತಿಯನ್ನು ಈ ಸಣ್ಣ ಕಥೆಯು ತಿಳಿಸುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಜವಳಿ ಗಿರಣಿಗೆ ಹೋಗಿದ್ದರು. ಅವರು ತಮ್ಮ ಹೆಂಡತಿಗಾಗಿ ಕೆಲವು ಸೀರೆಗಳನ್ನು ತೋರಿಸಲು ಗಿರಣಿ ಮಾಲೀಕರನ್ನು ವಿನಂತಿಸಿದರು. ಮಾಲೀಕರು ಕೆಲವು ಸೊಗಸಾದ ಸೀರೆಗಳನ್ನು ತೋರಿಸಿದರು ಶಾಸ್ತ್ರಿಯವರು ಬೆಲೆಗಳನ್ನು ಕೇಳಿದಾಗ ಅವರು ತುಂಬಾ ದುಬಾರಿ ಎಂದುಕೊಂಡರು. ಕಡಿಮೆ ಬೆಲೆಗೆ ಸೀರೆಕೊಡಿ ಎಂದು ಕೇಳಿದರು.
ಮಾಲೀಕರು ಕಡಿಮೆ ದರದ ಸೀರೆಗಳನ್ನು ತೋರಿಸಿದರು ಆದರೆ ಶಾಸ್ತ್ರಿಯವರಿಗೆ ಇದು ಕೂಡ ದುಬಾರಿಯಾಗಿ ಕಾಣಿಸಿತು ಮಾಲಿಕರು ಆಶ್ಚರ್ಯ ಚಕಿತರಾದರು ಮತ್ತು ಅವರು ಭಾರತದ ಪ್ರಧಾನಿಯಾಗಿರುವುದರಿಂದ ಸೀರೆಗಳನ್ನು ಉಡುಗೊರೆಯಾಗಿ ನೀಡುವುದು ಅವರ ಭಾಗ್ಯ ಎಂದರು. ಇದಕ್ಕೆ ಉತ್ತರಿಸಿದ ಶಾಸ್ತ್ರಿಯವರು ಅಂತಹ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ತಮಗೆ ಖರೀದಿಸಬಹುದಾದ ಸೀರೆಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
ಯಶಸ್ಸು ಬಂದು ಹೋಗುತ್ತದೆ ಆದರೆ ಪ್ರಾಮಾಣಿಕತೆ ವ್ಯಕ್ತಿಯೊಡನೆ ಶಾಶ್ವತವಾಗಿರುವ ಗುಣ. ಸಮಗ್ರತೆ ಎಂದರೆ ಎಲ್ಲಾ ಸಮಯಗಳಲ್ಲಿಯೂ ಸರಿಯಾದ ಕೆಲಸವನ್ನೇ ಮಾಡುವುದು. ಅಪ್ರಮಾಣಿಕತೆ ತ್ವರಿತದಲ್ಲಿ ತೃಪ್ತಿ ನೀಡಬಹುದು ಆದರೆ ಅದು ಎಂದಿಗೂ ಶಾಶ್ವತವಾಗಿರುವುದಿಲ್ಲ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಪಾಲಿಸಿದಲ್ಲಿ ಶ್ರೇಷ್ಠ ಗೆಲುವು ನಿಮ್ಮದಾಗುತ್ತದೆ.
# ಅರ್ಜುನ್ ಬಾಳಿಗಾ, ( ಸಾಫ್ಟ್‌ವೇರ್ ಮತ್ತು ಕ್ಲೌಡ್ ಎಂಜಿನಿಯರ್. ಮೈಕ್ರೋಸಾಫ್ಟ್, ಬೆಂಗಳೂರು.)
ಅರ್ಜುನ್ ಬಾಳಿಗಾ, ಬೆಂಗಳೂರು
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…