ಜೇನುಸಾಕಣೆ ಹಾಗೂ ಸಂಬಂಧಿತ ಇತರ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಸಿಹಿ ಕ್ರಾಂತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜೇನುತುಪ್ಪದ ರಪ್ತು ಸಾಮರ್ಥ್ಯವನ್ನು ಹೆಚ್ಚಿಸಲು, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳನ್ನು ಹೆಚ್ಚು ಮಾಡಲು ರಫ್ತು ಅಭಿವೃದ್ಧಿ ಪ್ರಾಧಿಕಾರವು ಒತ್ತುನೀಡುತ್ತಿದೆ.
ಭಾರತವು 2020-21 ರಲ್ಲಿ 59,999 ಮೆಟ್ರಿಕ್ ಟನ್ ನೈಸರ್ಗಿಕ ಜೇನುತುಪ್ಪವನ್ನು ಉತ್ಪಾದಿಸಿದೆ. ಯುನೈಟೆಡ್ ಸ್ಟೇಟ್ಸ್ 44,881 ಮೆಟ್ರಿಕ್ ಟನ್ ಪ್ರಮುಖ ಪಾಲನ್ನು ತೆಗೆದುಕೊಂಡಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ ಮತ್ತು ಕೆನಡಾ ಭಾರತೀಯ ಜೇನುತುಪ್ಪದ ಇತರ ಪ್ರಮುಖ ತಾಣಗಳಾಗಿವೆ. ಭಾರತವು ತನ್ನ ಮೊದಲ ಸಂಘಟಿತ ರಪ್ತುಗಳನ್ನು 1996-97 ರಲ್ಲಿ ಪ್ರಾರಂಭಿಸಿತು. ಮಾತ್ರವಲ್ಲದೇ 2020ರಲ್ಲಿ ವಿಶ್ವ ಜೇನು ರಪ್ತು 736,266.02 ಮೆಟ್ರಿಕ್ ಟನ್ ಆಗಿದೆ. ಜೇನು ಉತ್ಪಾದನೆ ಮತ್ತು ರಪ್ತು ಮಾಡುವ ದೇಶಗಳಲ್ಲಿ ಭಾರತವು ವಿಶ್ವದಲ್ಲಿ 8ನೇ ಹಾಗೂ 9ನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತ ಸರ್ಕಾರವು ಮೂರು ವರ್ಷಗಳವರೆಗೆ ಅಂದರೆ 2020-21 ರಿಂದ 2022-23 ರವರೆಗೆ ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿಮಿಷನ್‌ಗಾಗಿ 500 ಕೋಟಿ ರೂ. , ಫೆಬ್ರವರಿ 2021 ರಲ್ಲಿ ಆತ್ಮನಿರ್ಭರ ಭಾಗವಾಗಿ ಮಿಷನ್ ಘೋಷಿಸಲಾಯಿತು. ರಾಷ್ಟ್ರೀಯ ಜೇನುನೂಣ ಮಂಡಳಿ ಮೂಲಕ ಅನುಷ್ಠಾನಗೊಳಿಸುತ್ತಿರುವ ಸಿಹಿ ಕ್ರಾಂತಿಯ ಗುರಿಯನ್ನು ಸಾಧಿಸಲು ದೇಶದಲ್ಲಿ ವೈಜ್ಞಾನಿಕ ಜೇನುಸಾಕಣೆಯ ಒಟ್ಟಾರೆ ಪ್ರಚಾರ ಮತ್ತು ಅಭಿವೃದ್ಧಿಗೆ ಗುರಿಯಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ದೇಶದಲ್ಲಿ ಜೇನುಸಾಕಣೆಯನ್ನು ಅಭಿವೃದ್ಧಿಪಡಿಸುವುದು, ಜೇನು ಸಮೂಹಗಳನ್ನು ಅಭಿವೃದ್ಧಿಪಡಿಸುವುದು, ಜೇನುತುಪ್ಪದ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು ಮತ್ತು ರಪ್ತುಗಳನ್ನು ಹೆಚ್ಚಿಸುವುದಾಗಿದೆ.