ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸೇವೆಗಾಗಿ ಶನಿವಾರ ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಹೇಮಾವತಿ ಹೆಗ್ಗಡೆಯವರಿಗೆ ಧರ್ಮಸ್ಥಳದಲ್ಲಿ ಗೌರವಪೂರ್ವಕ ಸ್ವಾಗತ ಕೋರಲಾಯಿತು.
ಧರ್ಮಸ್ಥಳ ಕ್ಷೇತ್ರದ ನೌಕರ ವೃಂದದವರು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಊರಿನ ನಾಗರಿಕರು ಗೌರವ ಪೂರ್ವಕ ಸ್ವಾಗತ ಕೋರಿ ಅಭಿನಂದನೆ ಅರ್ಪಿಸಿದರು. ಧರ್ಮಾಧಿಕಾರಿಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು. ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಿಂದ ಬೀಡಿನ ವರೆಗೆಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel