ಫಾರಂ ನಲ್ಲಿರುವ ಕೋಳಿಗಳಿಗೆ ಹಾರ್ಮೋನ್ ಚುಚ್ಚು ಮದ್ದು ನೀಡಲಾಗುತ್ತದೆ. ಇದರಿಂದ ವೆಂಕಾಬ್, ಬೀಕಾಬ್, ಸುಗುಣ, ಐಬಿ ಮಾಂಸದ ಕೋಳಿಗಳು ವೈಜ್ಞಾನಿಕವಾಗಿ ಬೆಳೆಯಲು 36 ರಿಂದ 42 ದಿನಗಳು ಬೇಕಾಗುವ ಬದಲು ಚುಚ್ಚು ಮದ್ದಿನಿಂದ ಬೇಗನೆ ಬೆಳೆಯುತ್ತದೆ. ಆದುದರಿಂದ ಇಂತಹ ಕೋಳಿಗಳನ್ನು ತಿಂದರೆ ಆರೋಗ್ಯ ಕೆಡಬಹುದು ಎಂದು ಆತಂಕ ಪಡುವ ಜನರಿಗೆ ಇದೀಗ ಪಶುಸಂಗೋಪನೆ ಇಲಾಖೆಯು ಸ್ಪಷ್ಟನೆಯನ್ನು ನೀಡಿದೆ. ವೆಂಕಾಬ್, ಬೀಕಾಬ್, ಸುಗುಣ, ಐಬಿ ತಳಿಗಳಿಗೆ ಯಾವುದೇ ರೀತಿಯ ಹಾರ್ಮೊನ್ ಚುಚ್ಚು ಮದ್ದುಗಳನ್ನು ಬಳಸುತ್ತಿಲ್ಲ ಎಂದು ತಿಳಿಸಿದೆ. ಇವೆಲ್ಲವೂ ಅನುವಂಶಿಕವಾಗಿ ಉತ್ತಮ ತಳಿಗಳಾಗಿವೆ. ಉತ್ಕೃಷ್ಟ ಸಮತೋಲನ ಆಹಾರ ಕೊಡುವುದರಿಂದ ಹಾಗೂ ಉತ್ತಮ ನಿರ್ವಹಣೆಯಿಂದ ಹೆಚ್ಚಿನ ಪ್ರಮಾಣದ ಮಾಂಸ ಉತ್ಪಾದನೆ ಆಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

