ಬಾಗಲಕೋಟೆಯಲ್ಲಿ ಡಿ.21 ರಿಂದ 23 ವರೆಗೆ ನಡೆಯಲಿರುವ ತೋಟಗಾರಿಕಾ ಮೇಳಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ತಿಳಿಸಿದ್ದಾರೆ. ಈ ವರ್ಷ ಮೇಳದಲ್ಲಿ 100 ಸುಸಜ್ಜಿತ, 100 ಸಾಮಾನ್ಯ, 15 ಯಂತ್ರೋಪಕರಣಗಳ ಹಾಗೂ 15 ಆಹಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ತೋಟಗಾರಿಕೆಯಲ್ಲಿ ಬಳಸಬಹುದಾದ ವಿವಿಧ ಕೃಷಿ ಪರಿಕರಗಳಾದ ಬೀಜಗಳು, ಸಸಿಗಳು, ಕೀಟನಾಶಕಗಳು, ಗೊಬ್ಬರಗಳು, ಯಂತ್ರೋಪಕರಣಗಳ ಮಾರಾಟ ಹಾಗೂ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮೇಳಕ್ಕೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಲಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel