ಹವಾಮಾನ ಬದಲಾವಣೆಯಿಂದ ಇತ್ತೀಚಿನ ದಿನಗಳಿಂದ ತರಕಾರಿಯ ಬೆಲೆ ಹೆಚ್ಚಾಗಿದ್ದು ಮಾತ್ರವಲ್ಲ ಕೋಳಿ ಮೊಟ್ಟೆಯ ದರವೂ ಗಗನಕ್ಕೇರಿದೆ. ಹೌದು! ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ರೂ 6 ಇದ್ದುದ್ದು, ಇಂದು ರೂ 8 ಕ್ಕೆ ಏರಿಕೆಯಾಗಿದೆ.
ಸಾಮಾನ್ಯವಾಗಿ ಹವಮಾನ ಬದಲಾವಣೆಯಿಂದ ಎಲ್ಲದಕ್ಕೂ ಬೆಲೆ ಏರಿಕೆಯಾಗುತ್ತದೆ. ಆದರಂತೆ ಅಂಗಡಿಯಲ್ಲಿ ಹಾಗೂ ಆನ್ ಲೈನ್ ನಲ್ಲಿ ಒಂದು ಮೊಟ್ಟೆಯ ಬೆಲೆ 7.30 ಆಗಿದೆ. ಅಂದರೆ ಅಂಗಡಿಯಲ್ಲಿ ರೂ 8 ಕ್ಕೇ ಮಾರಾಟವಾಗುತ್ತಿದೆ. ಇದರಿಂದ ಡಿಸೆಂಬರ್ ತಿಂಗಳಿನಲ್ಲಿ ಬರುವ ಕ್ರಿಸ್ ಮಸ್ ಹಬ್ಬಕ್ಕೆ ಕೇಕ್ ಅಗತ್ಯವಾಗಿರುವುದರಿಂದ ಕೇಕ್ ದುಬಾರಿ ಬೆಲೆಯಾಗಿದೆ.
ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಮತ್ತು ಬೇಕರಿ ಉದ್ಯಮದ ಮೇಲೆ ಪರಿಣಾ ಬೀರಲಿದೆ. ಕಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ದರ ನಿಯಂತ್ರಣವಾಗದಿದ್ದಲ್ಲಿ ಕೇಕ್ ದರ ಹೆಚ್ಚಳವಾಗಬಹುದು ಎಂಬುದು ವ್ಯಾಪಾರಿಗಳ ನಿರೀಕ್ಷೆಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

