ಬಿರು ಬಿಸಿಲ ಜೊತೆಗೆ ಕಾಲರಾ ರೋಗದ ಭೀತಿ | ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ

April 7, 2024
10:14 AM

ರಾಜ್ಯಾದ್ಯಂತ  ಜಲಕ್ಷಾಮ(Water Crisis) ಶುರುವಾಗಿದೆ. ಸರ್ಕಾರ(Govt) ಕೂಡ ನೀರು ಸರಬರಾಜು(Water supply) ಮಾಡೋದಕ್ಕೆ ನಾನಾ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ಸುಡುಸುಡು ಬಿಸಿಲಿನ ವಾತಾವರಣ. ನೀರಿಲ್ಲದೇ ಜನಬೇಸಿಗೆಯಲ್ಲಿ(Summer) ಜನ ಪರದಾಟ ಮಾಡ್ತಿದ್ರೇ ಈಗ ಆರೋಗ್ಯದ(Health) ಸಮಸ್ಯೆ ಕೂಡ ಶುರುವಾಗಿದ್ದು, ಕಾಲರಾ(cholera Disease) ಭೀತಿ ಎದುರಾಗಿದೆ.

ಬಿರು ಬಿಸಿಲಿನ ವಾತಾವರಣ, ವಾಡಿಕೆಗಿಂತ ತಾಪಮಾನ ಹೆಚ್ಚಾಗಿ ಜನ ತತ್ತರಿಸ್ತಿದ್ದಾರೆ. ನೀರೇ ಇಲ್ಲದೇ ಕೆರೆ, ಬಾವಿ, ನದಿಗಳು ಬತ್ತಿವೆ. ನೀರಿನಿಂದಲೇ ಕಾಲರಾ ಬರ್ತಿದ್ದು, ಈಗಾಗಲೇ 6 ಕ್ಕೂ ಹೆಚ್ಚು ಕೇಸ್ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಕಾಲರಾದಿಂದ ದೂರ ಇರೋದು ಹೇಗೆ, ನಾವು ನಮ್ಮ ಮಕ್ಕಳು ಹಿರಿಯರನ್ನ ರಕ್ಷಿಸಿಕೊಳ್ಳೋದು ಹೇಗೆ..? ಅಲ್ಲದೇ ಬೇಸಿಗೆಯಲ್ಲಿ ಹೇಗೆ ಆಹಾರ ಇರಬೇಕು, ಅದರಲ್ಲೂ ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

* ಮಕ್ಕಳಿಗೆ ನಿತ್ಯ 2 ರಿಂದ 3 ಲೀಟರ್ ನೀರು ಕುಡಿಸಿ
* ಕುಡಿಯುವ ನೀರನ್ನ ಕಾಯಿಸಿ, ಆರಿಸಿದ ನಂತರ ನೀಡಿ
* ಪ್ಲಾಸ್ಟಿಕ್ ಬಾಟಲ್ ಬಳಸೋದನ್ನ ನಿಲ್ಲಿಸಿ
* ಸ್ಟೀಲ್ ಬಾಟಲ್‍ಗಳಲ್ಲಿ ನೀರನ್ನು ಕೊಡಿ
* ಕೋಲ್ಡ್ ವಾಟರ್ ನೀಡಲೇಬೇಡಿ
* ಮಿತವಾದ ಮೃದುವಾದ ಆಹಾರ ನೀಡಿ

ಮಕ್ಕಳು ಮಾತ್ರವಲ್ಲ ಪೋಷಕರು ಮತ್ತು ಹಿರಿಯರು ಸಹ ತಿನ್ನೋ ಆಹಾರದ ಬಗ್ಗೆ ಗಮನವಹಿಸಬೇಕು. ಜೊತೆಗೆ ಮನೆಯಿಂದ ಹೊರಗೆ ಬಂದಾಗ ಕಾಟನ್ ಬಟ್ಟೆಯನ್ನ ಧರಿಸಿ, ಸೆಖೆ ಅಂತಾ ಎಸಿಯಲ್ಲೇ ಇದ್ರೂ ಸಮಸ್ಯೆಯಾಗಲಿದೆ ಎಂದು ಆಹಾರ ತಜ್ಞೆ ಡಾ. ಪ್ರೇಮ ಹೇಳುತ್ತಾರೆ. ಒಟ್ಟಿನಲ್ಲಿ ಈ ಬೇಸಿಗೆ ನೀರಿಲ್ಲದೇ ನಾನಾ ಸಮಸ್ಯೆ ಉಂಟು ಮಾಡ್ತಿದೆ. ನೀರಿಗಾಗಿ ಜನ ಬೀದಿ ಬೀದಿ ಸುತ್ತೋ ಪರಿಸ್ಥಿತಿ ನಿರ್ಮಾಣವಾಗಿದ್ರೇ, ನೀರಿನಿಂದಲೇ ಕಾಲರಾ ಕೂಡ ಜನರ ನಿದ್ದೆಗೆಡಿಸ್ತಿರೋದಂತೂ ಸತ್ಯ.

  • ಅಂತರ್ಜಾಲ ಮಾಹಿತಿ
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..
January 10, 2026
10:33 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror