ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆ ವರೆಗೂ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ನಗರ ವ್ಯಾಪ್ತಿ ಹೋಟೆಲ್‌ಗಳು ಮಧ್ಯರಾತ್ರಿ 1 ಗಂಟೆ ವರೆಗೂ ತೆರೆಯಲು ಅನುಮತಿ ನೀಡಲಾಗಿದೆ. ಬೆಂಗಳೂರು ನಗರ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ರಾತ್ರಿ ಒಂದು ಗಂಟೆಯ ತನಕ ಕೆಲವು ಕಡೆ ಮಾತ್ರ ಹೋಟೆಲ್‌ಗಳು ತೆರೆದಿರುತ್ತಿದ್ದವು. ಕೆಲವು ಕಡೆ ಪೊಲೀಸರು ಹೋಟೆಲ್ ಬಂದ್ ಮಾಡಿಸುತ್ತಿದ್ದರು. ಈಗ ಎಲ್ಲಾ ಕಡೆಯಲ್ಲೂ ಮಧ್ಯರಾತ್ರಿ ಒಂದು ಗಂಟೆಯ ತನಕ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ಬೆಂಗಳೂರು ನಗರದಾದ್ಯಂತ ರಾತ್ರಿ 1 ಗಂಟೆ ವರೆಗೂ ಹೋಟೆಲ್ ಊಟ ಸಿಗಲಿದೆ. ಮಧ್ಯರಾತ್ರಿವರೆಗೆ ಹೋಟೆಲ್ ಓಪನ್ ವಿಚಾರವಾಗಿ ಬಾರ್ ರೆಸ್ಟೋರೆಂಟ್ ಸೇರಿದಂತೆ ಎಲ್ಲ ಹೋಟೆಲ್‌ಗಳಿಗೂ ರಾತ್ರಿ ಒಂದು ಗಂಟೆ ತನಕ ಅವಕಾಶವಿದೆ.
24 ಗಂಟೆ ಹೋಟೆಲ್‌ಗಳು ತೆರೆಯುವ ಬೇಡಿಕೆ ವಿಚಾರ ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಇಲ್ಲ. ವಿಶೇಷ ಸಂದರ್ಭದಲ್ಲಿ ಬಾರ್‌ಗಳು ಮಾತ್ರ ಬಂದ್ ಮಾಡಲಾಗುತ್ತದೆ. ರೆಸ್ಟೋರೆಂಟ್ ಎಂದಿನಂತೆ ಓಪನ್ ಇರಲಿದೆ.