ನೀರು, ಭೂಮಿ ಮತ್ತು ಮಂಜುಗಡ್ಡೆಯ ಮೇಲೆ ಚಲಿಸುತ್ತೆ ಹೋವರ್‌ಕ್ರಾಫ್ಟ್ ಬೋಟ್ | ತಮಿಳುನಾಡಿನಲ್ಲಿ ನಡೆಯಿತು ಯಶಸ್ವಿ ಪ್ರಯೋಗ | ಪ್ರಕೃತಿ ವಿಕೋಪ ಸಮಯದಲ್ಲಿಇದರ ಪಾತ್ರವೇನು..?

November 23, 2023
3:32 PM

ಪ್ರಕೃತಿಯ(Environment) ತಾರತಮ್ಯಕ್ಕೆ ಅನುಗುಣವಾಗಿ ಕೆಲವೊಂದು ಆವಿಷ್ಕಾರಗಳು(Invention) ಅತ್ಯಗತ್ಯ. ಪ್ರಕೃತಿ ವಿಕೋಪ(Environment disaster), ಜಲ ಪ್ರಳಯ, ಹಿಮಪಾತ(Snow fall) ಸಮಯದಲ್ಲಿ ಜನರನ್ನು ಕಾಪಾಡಲು ರಕ್ಷಣಾ ತಂಡಗಳು(Rescue team) ಇನ್ನಿಲ್ಲದ ಪ್ರಯಾಸವನ್ನು ಪಡುತ್ತವೆ. ಅವರಿಗೆ ಅನುಕೂಲವಾಗುವ ಕೆಲವು ಸಾಧನಗಳನ್ನು ಒದಗಿಸದಿದ್ದಲ್ಲಿ ಜನರನ್ನು ರಕ್ಷಿಸುವ ಕೆಲಸ ಬೇಗ ಹಾಗೂ ಸುರಕ್ಷಿತವಾಗಿ ನಡೆಯದು.

Advertisement
Advertisement

ಇದೀಗ ಈ ಮಟ್ಟಿನಲ್ಲಿ ಹೊಸ ಆವಿಷ್ಕಾರವೊಂದನ್ನು ಮಾಡಲಾಗಿದೆ. ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್(Hovercraft boat) ಜನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್ ಅನ್ನು ತಮಿಳುನಾಡಿನ(Tamilnadu) ಕೆರೆಯೊಂದರಲ್ಲಿ(Lake) ಪರೀಕ್ಷೆ(test) ನಡೆಸಲಾಯಿತು. ಇದು ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.

ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೋವರ್‌ಕ್ರಾಫ್ಟ್ `ಬೋಟ್ ಅನ್ನು ನಿರ್ಮಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಅಸಕ್ತಿಯಿಂದ ವೀಕ್ಷಿಸಿದರು.

ಪ್ರವಾಹದ ವೇಳೆಯೂ ಬಳಕೆ: ಯೂರೋಟೆಕ್ ಸಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖ‌ರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್‌ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೆನಡಾದ ಖಾಸಗಿ ಕಂಪನಿಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ರೋವರ್ ಕ್ರಾಫ್ಟ್ ಅನ್ನು ಚಂಡಮಾರುತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದಾಗಿದೆ. ಜೊತೆಗೆ ಕರಾವಳಿ ಗಡಿ ರಕ್ಷಣೆ, ನೌಕಾಪಡೆಯ ಕಣ್ಣಾವಲು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಅಗತ್ಯಗಳಿಗಾಗಿಯೂ ಬಳಸಬಹುದು. ಪ್ರತಿ ಗಂಟೆಗೆ ಸುಮಾರು 20 ರಿಂದ 25 ಲೀಟರ್ ಇಂಧನ ಇದಕ್ಕೆ ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement

ಸಾಮಾನ್ಯ ಹಡಗು ಮತ್ತು ಕ್ರಾಫ್ಟ್ ನಡುವಿನ ವ್ಯತ್ಯಾಸವೇನು?: ಸಾಮಾನ್ಯ ಹಡಗಿನ ಕೆಳಭಾಗ ನೀರಿನ ಮೇಲೆ ಮಾತ್ರ ಚಲಿಸುವಂತೆ ರೂಪಿಸಲಾಗಿರುತ್ತದೆ. ಆದರೆ, ಹೋವರ್‌ಕ್ರಾಫ್ಟ್‌ಗಳು ಹಲ್ (ಹಡಗು ಮುಂದೆ ಸಾಗುವ ಯಂತ್ರಗಳನ್ನು ಹೊಂದಿದ್ದು, ಅವುಗಳು ನೀರಿನ ಮೇಲೆ ದೋಣಿ ತೇಲುವಂತೆ ಮಾಡುತ್ತದೆ. ಜೊತೆಗೆ ನೀರನ್ನು ಸೀಳಿಕೊಂಡು ಹಡಗನ್ನು ಸಾಗಿಸುತ್ತದೆ. ಲಂಬವಾದ ಫ್ಯಾನ್‌ಗಳೊಂದಿಗೆ ಬೀಸಿದ ಗಾಳಿಯು ಹೋವರ್‌ಕ್ರಾಫ್ಟ್ ತೇಲುವಂತೆ ಮಾಡುತ್ತದೆ. ಏರ್ ಕುಶನ್ ಅನ್ನು ಸಾಮಾನ್ಯವಾಗಿ ಬಟ್ಟೆಯಿಂದ ತಯಾರಿಸಲಾಗಿರುತ್ತದೆ. ಇದು ಸಲೀಸಾಗಿ ನೀರು, ಭೂಮಿ ಮತ್ತು ಮಂಜುಗಡ್ಡೆಯಲ್ಲಿ ಕ್ರಾಫ್ಟ್ ಮುಂದೆ ಸಾಗಲು ಸಹಾಯ ಮಾಡುತ್ತದೆ ಹೋವ‌ರ್ ಕ್ರಾಫ್ಟ್ ಅನ್ನು ಸಾಮಾನ್ಯ ದೋಣಿಗಳಿಗಿಂತ ಹೆಚ್ಚು ವೇಗದಲ್ಲಿ” ಭೂಮಿ ಮೇಲೆ ಚಲಿಸುವ ಹಾಗೆ ಶಕ್ತಗೊಳಿಸಲಾಗಿರುತ್ತದೆ.

This hovercraft ``boat'' has been built at a cost of Rs 50 lakh to operate on water and land. A trial run was conducted in a small lake called Suluru under the leadership of fire brigade and rescue team. People watched disinterestedly as the hovercraft skimmed over the water.

– ಅಂತರ್ಜಾಲ ಮಾಹಿತಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group