Advertisement
MIRROR FOCUS

ಎರಡು ವರ್ಷದ ಹಿಂದೆ ಮಳೆಯ ಅಬ್ಬರಕ್ಕೆ ಸಿಲುಕಿದ ಕಲ್ಮಕಾರು-ಕೊಲ್ಲಮೊಗ್ರ-ಸಂಪಾಜೆ ಪರಿಸ್ಥಿತಿ ಹೇಗಿದೆ..?

Share

ವಯನಾಡು ಜಿಲ್ಲೆಯ ಮಂಡಕ್ಕೈ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ದುರ್ಘಟನೆ ಈಗ ಕಣ್ಣ ಮುಂದಿದೆ. ಅದೇ ಮಾದರಿಯ ಘಟನೆ ಎರಡು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಪ್ರದೇಶವಾದ ಕಲ್ಮಕಾರು ಪ್ರದೇಶದಲ್ಲೂ ನಡೆದಿತ್ತು. ಅದರ ವ್ಯಾಪ್ತಿಯೂ ಸಾಕಷ್ಟು ದೂರದವರೆಗೆ ಅಪಾರ ಹಾನಿಯಾಗಿತ್ತು. ಅಂದು 2022 ಆ.1 ರಂದು ನಡೆದ ಘಟನೆಯ ನಂತರ ಇಲ್ಲಿನ ಪರಿಸ್ಥಿತಿ, ಮೂಲಭೂತ ವ್ಯವಸ್ಥೆ ಸುಧಾರಣೆ ಆಗಿದೆಯೇ..? ಹೇಗಿದೆ ಈಗ..?

Advertisement
Advertisement
Advertisement

ಸುಳ್ಯ ತಾಲೂಕಿನ ಕಲ್ಮಕಾರು ಪ್ರದೇಶದಲ್ಲಿ 2022 ಆ.1 ರಂದು ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಸೇತುವೆ ಮತ್ತು ಕೃಷಿ ಪ್ರದೇಶಗಳಿಗೆ ಅಪಾರ ಹಾನಿಯಾಗಿತ್ತು. ಅಂದು  ತಡರಾತ್ರಿ ಸುರಿದ ಭಾರೀ ಮಳೆಗೆ ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ಮಣ್ಣು ಮಿಶ್ರಿತ ನೀರಿನೊಂದಿಗೆ ಮರಗಳು ಉರುಳಿ ಬಂದಿತ್ತು. ಕಲ್ಮಕಾರು ಎಸ್ಟೇಟ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಅಂದು ಕೂಡಾ ತಡರಾತ್ರಿ ಸುಮಾರು 2 ಗಂಟೆಗೆ ಭಾರೀ ಮಳೆ ಆರಂಭವಾಗಿತ್ತು. ಅದಾಗಿ ಕೆಲ ಹೊತ್ತಲ್ಲಿ ಭಾರೀ ಸದ್ದಿನೊಂದಿಗೆ ಮತ್ತಷ್ಟು ಮಳೆ ಸುರಿಯಿತು, ಸ್ವಲ್ಪ ಹೊತ್ತಲ್ಲಿ ಪೂರ್ತಿ ಕಲುಷಿತ ನೀರು , ಮರ, ಕಲ್ಲುಗಳು ಉರುಳಿಕೊಂಡು ಬಂದಿದ್ದವು. ಅಲ್ಲಿಂದ ಕೊಲ್ಲಮೊಗ್ರ, ಹರಿಹರದವರೆಗೂ ನದಿಯ ಇಕ್ಕೆಲೆಗಳಲ್ಲೂ ಹಾನಿಯನ್ನುಂಟು ಮಾಡಿತ್ತು.

Advertisement

ಕೆಸರು ಮಣ್ಣಿನ ಜೊತೆ ಭಾರೀ ಪ್ರಮಾಣದ ಮರದ ರಾಶಿಗಳೂ ಹರಿದು ಬಂದಿದ್ದರಿಂದ ಹಲವು ಸೇತುವೆಗಳಲ್ಲಿ ಬಿರುಕು ಬಿಟ್ಟಿತ್ತು, ಹಾನಿಗೊಳಗಾಗಿತ್ತು.  ಅನೇಕ ಮನಗೆಳಿಗೆ , ಕಟ್ಟಡಗಳಿಗೆ ಹಾನಿಯಾಗಿತ್ತು.

ಅದರಲ್ಲಿ ಕೊಲ್ಲಮೊಗ್ರದಿಂದ ಬೆಂಡೋಡಿ ಸಂಪರ್ಕ ರಸ್ತೆ ತೀವ್ರವಾಗಿ ಹಾನಿಗೊಳಗಾಗಿ ಸುಮಾರು 250 ಮನೆಗಳು ನಗರದ ಸಂಪರ್ಕ ಕಳೆದುಕೊಂಡಿದ್ದವು.  ಇದರ ಜೊತೆಗೆ ಕೊಲ್ಲಮೊಗ್ರು,ಉಪ್ಪುಕಳ ಸಂಪರ್ಕಿಸುವ ಸೇತುವೆಯ ಒಂದು ಭಾಗ ಪ್ರವಾಹದ ನೀರಿನ ರಭಸಕ್ಕೆ ಸಿಲುಕಿ ಹಾನಿಗೊಳಗಾಗಿತ್ತು.  ಆ ಬಳಿಕ ಸ್ಥಳೀಯರು ಅಳವಡಿಕೆ ಮಾಡಿದ್ದ ಕಾಲು ಸಂಕವೂ ಮತ್ತೊಂದು ಮಳಗೆ ಕೊಚ್ಚಿ ಹೋಗಿತ್ತು. ಆ ವರ್ಷ ಆಗಸ್ಟ್‌ ತಿಂಗಳಲ್ಲಿ ಮತ್ತೊಮ್ಮೆ ಸುರಿದ ಭಾರೀ ಮಳೆಗೆ ಬೆಂಡೋಡಿ ಸೇತುವೆ ಸಹಿತ ಇತರ ಕೆಲವು ಸೇತುವೆಗಳಿಗೂ ಹಾನಿಯಾಯಿತು. ಒಂದು ಪ್ರದೇಶದಲ್ಲಿ ಮೂರು ಬಾರಿ ಕಾಲು ಸೇತುವೆ ಆ ವರ್ಷ ನಿರ್ಮಾಣ ಮಾಡಲಾಗಿತ್ತು. ಕಾಲು ಸೇತುವೆಗೂ ಹಾನಿ ಮಾಡಿದ ಪರಿಣಾಮ ಈ ಭಾಗದ ಜನ ಪರ್ಯಾಯ ಸಂಪರ್ಕ ವ್ಯವಸ್ಥೆಯಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆ ಬಳಿಕ ಭಾರೀ ಮಳೆಯಾಗುತ್ತಿದ್ದಂತೆಯೇ ಕಲ್ಮಕಾರು, ಕೊಲ್ಲಮೊಗ್ರ ಪ್ರದೇಶದ ಬೆಟ್ಟ ತಪ್ಪಲು ಪ್ರದೇಶ ಜನರಿಗೆ ಪ್ರತೀ ವರ್ಷ ಭಯದ ವಾತಾವರಣ ಸೃಷ್ಟಿಯಾಗಿದೆ. ಅಂದಿನ ಮಳೆಯ ಅಬ್ಬರ ತೀವ್ರವಾಗಿತ್ತು, ಕೊಲ್ಲಮೊಗ್ರ ಪ್ರದೇಶದಲ್ಲಿ 300 ಮಿಮೀಗಿಂತಲೂ ಅಧಿಕ ಮಳೆಯಾಗಿತ್ತು.

Advertisement

ಈ ಘಟನೆ ನಡೆದು ಎರಡು ವರ್ಷಗಳು ಕಳೆದಿದೆ. ಇಂದಿಗೂ ಮೂಲಭೂತ ಸೌಕರ್ಯವನ್ನು ಸರ್ಕಾರಗಳು ಕಲ್ಪಿಸಿಲ್ಲ. ಕೆಲವು ಕಡೆ ಪರಿಹಾರದ ಹಣ ನೀಡಿದರೆ, ಇನ್ನೂ ಕೆಲವು ಕಡೆ ಪರಿಹಾರದ ಭರವಸೆ ಮಾತ್ರವೇ ಸಿಕ್ಕಿದೆ. ಅಂದು ಎಲ್ಲಾ ಪ್ರತಿನಿಧಿಗಳು, ಇಲಾಖೆಗಳು ದುರ್ಘಟನೆಯ ಪ್ರದೇಶಕ್ಕೆ ತೆರಳಿ ಪರಿಹಾರದ ಭರವಸೆ ನೀಡಿದ್ದರು. ಇಂದಿಗೂ ಜನರು ಮೂಲಭೂತ ಸೇವೆಗಾಗಿ ಪರದಾಟ ನಡೆಸುತ್ತಿದ್ದಾರೆ. ಭೂಕುಸಿತದಿಂದ ಉಂಟಾದ ಹಾನಿಗಳ ಪುನರ್‌ ಸ್ಥಾಪನೆಯ  ಕೆಲಸ ಮತ್ತೆ ನಡೆದಿಲ್ಲ.

ಭಾರೀ ಮಳೆ | ಹರಿಹರದಲ್ಲಿ ಮನೆಗಳಿಗೆ ನುಗ್ಗಿದ ನೀರು | ಇತಿಹಾಸ ಬರೆದ ಮಳೆ |

Advertisement

 

Advertisement
Advertisement
Advertisement

The Mandakkai area of Wayanad district is currently experiencing heavy rains and landslides, reminiscent of a similar incident that occurred in the Kalmakaru region of the Western Ghats two years ago. The previous incident resulted in extensive damage over a wide area. Following the recent event on August 2, 2022, has there been any improvement in the basic infrastructure in the affected area? What is the current situation like?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

2 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

2 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

3 days ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

3 days ago

ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…

3 days ago

ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?

ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…

3 days ago