ಎಳನೀರು ಧಾರಣೆ ಕುಸಿತ | ಬಿಸಿಲು ಆರಂಭದ ಮುನ್ನವೇ ಧಾರಣೆ ಕುಸಿತ |

Advertisement
Advertisement

ರೈತರು ಧಾರಣೆ ಕುಸಿತದ ಸಂಕಷ್ಟ ಅನುಭವಿಸುತ್ತಿರುವಾಗಲೇ ಇದೀಗ ತೆಂಗು ಕೂಡಾ ಕೈಕೊಡುತ್ತಿದೆ. ಬೇಸಿಗೆ ಆರಂಭದ ಮುನ್ನ ಎಳನೀರು ಧಾರಣೆ ಕುಸಿತವಾಗಿದೆ.  ಮಂಡ್ಯದಲ್ಲಿ  ಭತ್ತ, ರಾಗಿ ಖರೀದಿ ಆರಂಭಗೊಳ್ಳದೆ ರೈತರು ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲೇ ಎಳನೀರು ಧಾರಣೆಯೂ ತೀವ್ರಗತಿಯಲ್ಲಿ ಕುಸಿತಕ್ಕೊಳಗಾಗಿದೆ.

Advertisement

ರಾಜ್ಯದಲ್ಲಿ  ಬೇಸಗೆಯ ವಾತಾವರಣ ಹೆಚ್ಚಿದಂತೆ ಇಲ್ಲಿ ಎಳನೀರು ಬೇಡಿಕೆ ಹೆಚ್ಚಾಗುತ್ತಿದೆ.  ಇದೇ ವೇಳೆ ಇಲ್ಲಿನ ಚಳಿ ಹೆಚ್ಚಾಗುತ್ತಿದ್ದಂತೆಯೇ ಉತ್ತರ ಭಾರತದ ಹಾಗೂ ಇತರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಉತ್ತರ ಭಾರತದಲ್ಲಿ ಶೀತ ಹೆಚ್ಚಿರುವ ಕಾರಣ ಏಷ್ಯಾದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎನಿಸಿರುವ ಮದ್ದೂರಿನ ಎಳನೀರು ಮಾರುಕಟ್ಟೆಯಲ್ಲಿ ಧಾರಣೆ ಕುಸಿತಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ಎಳನೀರು ಗಾತ್ರವನ್ನು ಆಧರಿಸಿ ಕನಿಷ್ಠ ರೂ .19 ನಿಂದ ರೂ.23 ವರೆಗೆ ಮಾರಾಟವಾಗುತ್ತಿತ್ತು. ಇದೀಗ ಎಳನೀರು ಧಾರಣೆ ರೂ .16ಗೆ ಕುಸಿದಿರುವುದು ರೈತರು ನಷ್ಟ ಅನುಭವಿಸುವಂತಾಗಿದೆ.

Advertisement
Advertisement

ಪ್ರತಿದಿನ ಬೆಳಗಿನ ಜಾವ ಮತ್ತು ಸಂಜೆ ಹೊತ್ತು ಈಗ ರಾಜ್ಯದ ವಿವಿಧ ಕಡೆಗಳಲ್ಲಿ ಶೀತಗಾಳಿ ಬೀಸುತ್ತಿದೆ ಮತ್ತು ಚಳಿ ಆವರಿಸಿಕೊಳ್ಳುವುದು ಮುಂದುವರಿದಿದೆ. ಹೀಗಾಗಿ ಎಳನೀರು ಕುಡಿಯುವುದಕ್ಕೆ ಜನರು ಮನಸು ಮಾಡುತ್ತಿಲ್ಲ. ವಿವಿಧ ಜಿಲ್ಲೆಗಳಿಗೆ ಎಳನೀರು ಹೊರಜಿಲ್ಲೆಗಳಿಂದ  ಬರುತ್ತಿದೆ. ಫೆಬ್ರವರಿ ಮಧ್ಯಭಾಗದಿಂದ ಬಿಸಿಲಿನ ಬೇಗೆ ಏರಿಕೆಯಾದಂತೆ ಎಳನೀರಿಗೂ ಬೇಡಿಕೆ ಹೆಚ್ಚಳವಾಗುತ್ತದೆ ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ. ಸದ್ಯ ಚಳಿ ಇರುವುದರಿಂದ  ಬೇಡಿಕೆ ಕಡಿಮೆಯಾಗಿದೆ. ಬಿಸಿಲು ಹೆಚ್ಚಾದಂತೆ ಎಳನೀರಿಗೂ ಬೇಡಿಕೆ ಬಂದು ಸಾಮಾನ್ಯ ಸ್ಥಿತಿಗೆ ಬರುತ್ತದೆ ಎನ್ನುವ ವಿಶ್ವಾಸ ಇದೆ. ಬೇಡಿಕೆ ಹೆಚ್ಚಾದಂತೆ ಎಳನೀರು ದರವು ಏರಿಕೆಯಾಗುತ್ತದೆ. ಕಳೆದ ವರ್ಷ ಬೇಸಿಗೆಯಲ್ಲಿ ಒಂದು ಎಳನೀರು ದರ ಗರಿಷ್ಠ ರೂ.50 ಕ್ಕೆ ಮಾರಾಟವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಎಳನೀರು ಧಾರಣೆ ಕುಸಿತ | ಬಿಸಿಲು ಆರಂಭದ ಮುನ್ನವೇ ಧಾರಣೆ ಕುಸಿತ |"

Leave a comment

Your email address will not be published.


*