Advertisement
MIRROR FOCUS

ಮಹಿಳೆಯರಿಗೆ ಶಕ್ತಿ ನೀಡಿದ ಶಕ್ತಿ ಯೋಜನೆ | ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರೆಷ್ಟು? | ಸಾರಿಗೆ ನಿಗಮಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆಯಾ..?

Share

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ(Congress Govt) ಗ್ಯಾರಂಟಿಗಳ(Guarantee) ಭರವಸೆ ಮೇಲೆ ಅಧಿಕಾರಕ್ಕೆ ಬಂದು, ಜನತೆಗೆ ಉಚಿತಗಳ(Free) ಮೇಲೆ ಉಚಿತಗಳನ್ನು ನೀಡಿದೆ. ಅವುಗಳಲ್ಲಿ ಮಹಿಳೆಯರಿಗೆ(Women) ರಾಜ್ಯಾದ್ಯಂತ ಉಚಿತ ಬಸ್‌ ಪ್ರಯಾಣ(Free Bus ticket) ಯೋಜನೆಯಾದ ಶಕ್ತಿ ಯೋಜನೆ(Shakti Scheme) ಜಾರಿಗೆ ಬಂದ ಮೇಲೆ ರಾಜ್ಯದ ನಾರಿ ಮಣಿಯರು ಯೋಜನೆಯನ್ನು ಬಳಸಿಕೊಂಡರು. ಈ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಪ್ರತೀ ದಿನ ಪ್ರಯಾಣಿಸುವವರ ಸಂಖ್ಯೆ ಕೋಟಿ ದಾಟಿದೆ. ಅಂದಾಜು ಪ್ರತೀ ದಿನ 20 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಯೋಜನೆಯಡಿ ಸರ್ಕಾರ ಸಾರಿಗೆ ನಿಗಮಗಳಿಗೆ(Transport Corporation) ಹಣ ಪಾವತಿ ಮಾಡುತ್ತಿದ್ದರೂ ಇನ್ನೂ 1,217 ಕೋಟಿ ರೂ. ಪಾವತಿ ಬಾಕಿ ಇದೆ.

Advertisement
Advertisement
Advertisement

ಕೆಎಸ್ಆರ್​ಟಿಸಿಯಲ್ಲಿ ಶಕ್ತಿ ಯೋಜನೆಗೂ ಮೊದಲು ಪ್ರತೀ ದಿನ 29.72 ಲಕ್ಷ ಪ್ರಯಾಣಿಸುತ್ತಿದ್ದರೆ ಯೋಜನೆ ಜಾರಿಯಾದ ನಂತರ ಈ ಪ್ರಮಾಣ 33.60 ಲಕ್ಷಕ್ಕೆ ಹೆಚ್ಚಾಗಿದೆ. ಅದೇ ರೀತಿ ಬಿಎಂಟಿಸಿಯಲ್ಲಿ ಶಕ್ತಿ ಯೋಜನೆಗೂ ಮೊದಲು ಪ್ರತೀ ದಿನ 33.67 ಲಕ್ಷ ಪ್ರಯಾಣಿಸುತ್ತಿದ್ದರೆ, ಶಕ್ತಿಯ ನಂತರ ಈ ಪ್ರಮಾಣ 39.76 ಲಕ್ಷಕ್ಕೆ ಹೆಚ್ಚಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೊದಲು ಪ್ರತೀ ದಿನ 16.49 ಲಕ್ಷ ಪ್ರಯಾಣಿಸುತ್ತಿದ್ದರೆ ನಂತರ ಈ ಪ್ರಮಾಣ 24.18 ಲಕ್ಷಕ್ಕೆ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಯೋಜನೆಗೂ ಮೊದಲು ಪ್ರತೀ ದಿನ 13.58 ಲಕ್ಷ ಪ್ರಯಾಣಿಸುತ್ತಿದ್ದರೆ ನಂತರ ಈ ಪ್ರಮಾಣ 17.23 ಲಕ್ಷಕ್ಕೇರಿದೆ.

Advertisement

ಒಟ್ಟಿನಲ್ಲಿ ಪ್ರತಿ ದಿನ ನಾಲ್ಕು ನಿಗಮಗಳಿಂದಲೂ ಸೇರಿ ಶಕ್ತಿ ಯೋಜನೆಗೂ ಮೊದಲು 93.46 ಲಕ್ಷ ಜನ ಪ್ರಯಾಣ ಮಾಡುತ್ತಿದ್ದರೆ, ಯೋಜನೆ ಜಾರಿಯಾದ ಬಳಿಕ ಅದು ಕೋಟಿ ಪ್ರಯಾಣಿಕರ ಗಡಿ ದಾಟಿದೆ. ಹೀಗಾಗಿ, ದಿನವೊಂದಕ್ಕೆ ಸರಾಸರಿ 1.14 ಕೋಟಿ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ 1,217 ಕೋಟಿ ರೂ ಬಾಕಿ: ಶಕ್ತಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ 171.92 ಕೋಟಿ ಮಹಿಳಾ ಪ್ರಯಾಣಿಕರು ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಯಾಣ ಮಾಡಿದ್ದು, ಉಚಿತ ಪ್ರಯಾಣದ ಮೊತ್ತವನ್ನು ಹಂತ ಹಂತವಾಗಿ ಸರ್ಕಾರ ಸಾರಿಗೆ ನಿಮಗಳಿಗೆ ಪಾವತಿಸುತ್ತಿದೆ. ಈವರೆಗೆ 2553.67 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೆಎಸ್ಆರ್‌ಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 1317 ಕೋಟಿ ಆಗಿದ್ದು, ಸರ್ಕಾರದಿಂದ 968 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಬಾಕಿ 460 ಕೋಟಿ ಬಿಡುಗಡೆಯಾಗಬೇಕಿದೆ. ಬಿಎಂಟಿಸಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಮೊತ್ತ 649 ಕೋಟಿ ಆಗಿದ್ದು ಇದರಲ್ಲಿ ಸರ್ಕಾರದಿಂದ 437 ಕೋಟಿ ಬಿಡುಗಡೆಯಾಗಿದ್ದು ಇನ್ನೂ 212 ಕೋಟಿ ಬಾಕಿ ಇದೆ. ಅದರಂತೆ ವಾಯುವ್ಯ ಸಾರಿಗೆಯಲ್ಲಿ ಮಹಿಳೆಯರ ಉಚಿತ ಟಿಕೆಟ್ ಮೊತ್ತ 862 ಕೋಟಿ ಆಗಿದ್ದು ಇದರಲ್ಲಿ 634 ಕೋಟಿ ಬಿಡುಗಡೆಯಾಗಿದ್ದು, 300 ಕೋಟಿ ಬಾಕಿ ಇದೆ.

Advertisement

ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಮಹಿಳೆಯರ ಉಚಿತ ಟಿಕೆಟ್ ಮೊತ್ತ 698 ಕೋಟಿ ಆಗಿದ್ದು, ಅದರಲ್ಲಿ ಸರ್ಕಾರ 513 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ 245 ಕೋಟಿ ಬಿಡುಗಡೆಯಾಗಬೇಕಿದೆ. ಒಟ್ಟು ನಾಲ್ಕು ನಿಗಮಗಳಿಂದ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತ 3526 ಕೋಟಿ ಆಗಿದ್ದು, 2553 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 1,217 ಕೋಟಿ ರೂ.ಗಳನ್ನು ಸರ್ಕಾರ ಶಕ್ತಿ ಯೋಜನೆಯಡಿ ನಿಗಮಗಳಿಗೆ ಬಾಕಿ ಉಳಿಸಿಕೊಂಡಿದೆ.

ನಿರ್ವಾಹಕರ ವಿರುದ್ಧ ಪ್ರಕರಣಗಳು: ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡುವ ಶೂನ್ಯ ದರ ಅಥವಾ ಉಚಿತ ಟಿಕೆಟ್ ಅನ್ನು ಬಸ್​ ನಿರ್ವಾಹಕರೇ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದ್ದು, ಇದನ್ನು ನಿಗಮಗಳು ಗಂಭೀರವಾಗಿ ಪರಿಗಣಿಸಿವೆ. ಬಸ್​ಗಳ ತಪಾಸಣೆ ನಡೆಸಿ ಟಿಕೆಟ್ ಪರಿಶೀಲನೆ ನಡೆಸಲಾಗುತ್ತದೆ. ಈ ರೀತಿ ಮಹಿಳೆಯರ ಉಚಿತ ಟಿಕೆಟ್ ದುರುಪಯೋಗ ಆರೋಪದಡಿ ಕೆಎಸ್ಆರ್​ಟಿಸಿಯಲ್ಲಿ 53 ನಿರ್ವಾಹಕರು, ಬಿಎಂಟಿಸಿಯಲ್ಲಿ 12 ನಿರ್ವಾಹಕರು, ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 7 ನಿರ್ವಾಹಕರು ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 36 ನಿರ್ವಾಹಕರು ಸಿಕ್ಕಿಬಿದ್ದಿದ್ದು ನಾಲ್ಕು ನಿಗಮಗಳಿಂದ ಒಟ್ಟು 108 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ನಿಗಮದ ನಿಯಮಾವಳಿಗಳ ಪ್ರಕಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

– ಅಂತರ್ಜಾಲ ಮಾಹಿತಿ

After the implementation of Shakti Scheme, the number of passengers traveling in transport companies has increased and the number of passengers has crossed one crore every day. The number of passengers has increased by approximately 20 lakhs every day. Even though the government is paying money to the Transport Corporation under the scheme, it is still Rs 1,217 crore. Payment is pending.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

5 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

5 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

16 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

20 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

20 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago