ಕಪ್ಪು ಬೆಳ್ಳುಳ್ಳಿ…! ಇದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಎಲ್ಲರ ಮನೆಯಲ್ಲೂ ಇರುವುದು ಬಿಳಿ ಬೆಳ್ಳುಳ್ಳಿ ಇದನ್ನು ಸಾಮಾನ್ಯವಾಗಿ ಆಡುಗೆಗೆ ಬಳಸುತ್ತಾರೆ. ಆದರೆ ಕಪ್ಪು ಬೆಳ್ಳುಳ್ಳಿ ಬಾಲ್ಸಾಮಿಕ್ ಸಿಹಿಯನ್ನು ಹೊಂದಿದ್ದು, ಸಾಮಾನ್ಯ ಬೆಳ್ಳುಳ್ಳಿಗಿಂತ ಭಿನ್ನವಾಗಿದೆ. ಮಾತ್ರವಲ್ಲ ಇದು ಮೃದುವಾದ ಜೆಲ್ಲಿ ತರಹದ ವಿನ್ಯಾಸವನ್ನು ಹೊಂದಿರುತ್ತದೆ.
ಕಪ್ಪು ಬೆಳ್ಳುಳ್ಳಿಯನ್ನು ನಿಧಾನವಾಗಿ ಹಣ್ಣಾಗುವತ್ತಿರುವ ಸಾಮಾನ್ಯ ಬೆಳ್ಳುಳ್ಳಿ ಯ ಬಲ್ಬ್ ಗಳಿಂದ ತಯಾರಿಸಲಾಗುತ್ತದೆ, ಇದು ದೀರ್ಘಾಕಾಲದವರೆಗೆ ಎಚ್ಚರಿಕೆಯಿಂದ ನಿಯಂತ್ರಿಸಲ್ಪಟ್ಟ ಶಾಖ ಮತ್ತು ತೇವಾಂಶದ ಅಡಿಯಲ್ಲಿ ರೂಪುಗೊಳ್ಳುತ್ತದೆ. ಈ ಪ್ರಕ್ರಿಯೆಯು ವಾರಗಳವರೆಗೆ ಇರುತ್ತದೆ, ಇದು ಬೆಳ್ಳುಳ್ಳಿಯಲ್ಲಿ ರಾಸಾಯನಿಕ ಬದಲಾವಣೆಗಳನ್ನು ಪ್ರಾರಂಭಿಸುತ್ತದೆ, ಆದರ ಎಸಳುಗಳು ಗಾಢವಾದ, ಜಿಗುಟಾದ ಮತ್ತಿ ಮೃದುವಾದವುಗಳಾಗಿ ಉಳಿಯುತ್ತದೆ, ಮೂಲಭೂತವಾಗಿ, ಕಪ್ಪು ಬೆಳ್ಳುಳ್ಳಿ ನಾವು ತಿನ್ನುವ ಸಾಮಾನ್ಯ ಬೆಳ್ಳುಳ್ಳಿಯ ರಾಸಾಯನಿಕವಾಗಿ ರೂಪಾಂತರಗೊಂಡ ಆವೃತ್ತಿಯಾಗಿದೆ.
ಈ ಕಪ್ಪು ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶವನ್ನು ನೀಡುತ್ತದೆ. ಡಯಟ್ ನಲ್ಲಿ ಕಪ್ಪು ಬೆಳ್ಳುಳ್ಳಿ ಬಳಸುವುದು ಉತ್ತಮ, ಮಾತ್ರವಲ್ಲ ಹೃದಯ ರಕ್ತನಾಳದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಆದರೆ ಈ ಬೆಳ್ಳುಳ್ಳಿಯನ್ನು ಯಾವುದೇ ಕಾರಣಕ್ಕೂ ಅತಿಯಾಗಿ ತಿನ್ನುವಂತಿಲ್ಲ.

