ಗ್ರಾಮ ಪಂಚಾಯತ್ ಮೂಲಕ ಹಲವಾರು ಯೋಜನೆಗಳು ಜಾರಿಯಾಗುತ್ತವೆ. ಆದರೆ ಅದೇ ಗ್ರಾಮದ ಜನರಿಗೆ ಸರಿಯಾದ ಮಾಹಿತಿಗಳು ವಿವಿಧ ಕಾರಣದಿಂದ ಇಂದು ಸಿಗುತ್ತಿಲ್ಲ. ಇಲ್ಲಿದೆ ಅಂತಹ ಕೆಲವು ಯೋಜನೆಗಳ ಪರಿಚಯ
• ಯುವಕರ ಮತ್ತು ನಿರುದ್ಯೋಗಿಗಳ ಯೋಜನೆಗಳು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ.
• ಹಿರಿಯ ನಾಗರಿಕ ಮತ್ತು ಅಂಗವಿಕಲರ ಯೋಜನೆಗಳು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ. ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ, ನೀಡಲಾಗುತ್ತದೆ.
• ಮಹಿಳಾ ಸಬಲೀಕರಣ ಯೋಜನೆಗಳು: ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಗ್ರಾಮ ಪಂಚಾಯತ್ ಮೂಲಕ ಸ್ವಸಹಾಯ ಸಂಘ, ಮಹಿಳಾ ಉದ್ಯಮಗಳಿಗೆ ಸಾಲ, ತರಬೇತಿ ಕಾರ್ಯಕ್ರಮಗಳು ಜಾರಿಗೊಳಿಸಲಾಗುತ್ತದೆ.
• ಕೃಷಿ ಮತ್ತು ರೈತರಿಗೆ ಯೋಜನೆಗಳು: ಬೀಜ ಮತ್ತು ಗೊಬ್ಬರ ಸಬ್ಸಿಡಿ, ಕೃಷಿ ಉಪಕರಣಗಳಿಗೆ ಸಹಾಯಧನ, ಬೆಳೆ ವಿಮೆ ಯೋಜನೆಗಳ ಮಾಹಿತಿಗಳನ್ನು ಜಾರಿಗೊಳಿಸಲಾಗಿದೆ.
• ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳು: ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ, ವಿದ್ಯಾರ್ಥಿವೇತನ ಮಾಹಿತಿ, ಡಿಜಿಟಲ್ ಶಿಕ್ಷಣ ಸಹಾಯ ಗಳು.
• ಆರೋಗ್ಯ ಮತ್ತು ಸ್ವಚ್ಛತೆ ಸಂಬಂಧಿತ ಯೋಜನೆಗಳು: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ.
* ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಗಳು: ಗ್ರಾಮ ಪಂಚಾಯತ್ ಮೂಲಕ ಹಳ್ಳಿಗಳ ಒಳಗಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಮಣ್ಣಿನ ರಸ್ತೆಗಳನ್ನು ಡಾಂಬರೀಕರಣ ಮಾಡಿ ಜನರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು.
•ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಯೋಜನೆಗಳು: ಗ್ರಾಮೀಣ ವಸತಿ ಯೋಜನೆಗಳ ಅಡಿಯಲ್ಲಿ ಬಸವ ವಸತ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಆಶ್ರಯ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ.
•ಉದ್ಯೋಗ ಸೃಷ್ಟಿ: ರಸ್ತೆ ನಿರ್ಮಾಣ, ಕೆರೆ, ಹೊಂಡ ಅಭಿವೃದ್ದಿ, ನೀರಾವರಿ ಕಾಮಗಾರಿಗಳಲ್ಲ ಉದ್ಯೋಗ ನೀಡುವುದು.
ಈ ಯೋಜನೆಗಳಿಗೆ ಯಾವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು..?
ಅರ್ಜಿ ಸಲ್ಲಿಸುವ ವಿಧಾನ: ಆಯಾ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ, ಯಾವ ಯೋಜನೆಯ ಬೇಕು. ಆ ಯೋಜನೆಗೆ ಫಾರಂ ಅನ್ನು ತೆಗೆದುಕೊಂಡು ಬೇಕಾಗುವು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಸಬಹುದು.
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ರೇಷನ್ ಕಾರ್ಡ್
ನಿವಾಸ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್
ಆದಾಯ ಪ್ರಮಾಣ ಪತ್ರ


