ಕಲ್ಪವೃಕ್ಷದ ಬಗ್ಗೆ ನಿಮಗೆಷ್ಟು ಗೊತ್ತು..? | ತೆಂಗು ಕೃಷಿಯ ಉಪಯೋಗಗಳು ಏನು..?

July 18, 2024
12:13 PM

ತೆಂಗು 70 – 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ. ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು. ಕಾಂಡ ಕೊಂಬೆ ರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 – 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು. ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 – 40 ಗರಿಗಳಿರುತ್ತವೆ.

Advertisement

ಒಂದು ಮರದಿಂದ 60 ಕಾಯಿಗಳು ಒಂದು ವರ್ಷಕ್ಕೆ ಬರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದಲ್ಲಿ ಒಂದೇ ಕಡೆ ಇರುತ್ತವೆ. ಹೂವುಗಳು ಜೊಂಪಾಗಿ ಬಿಡುತ್ತವೆ. ಅವನ್ನು ಹೊಂಬಾಳೆಯೆಂದು ಕರೆಯುತ್ತಾರೆ. ಒಂದು ಮರದಲ್ಲಿ 30ರ ತನಕ ಹೂ ಜೊಂಪೇ/ಗೊಂಚಲು (bunch) ಇರುತ್ತವೆ. ತಿಂಗಳಿಗೊಂದು ಹೂ ಗೊಂಚಲು ಹುಟ್ಟುತ್ತದೆ. ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ 30-60 ಕಾಯಿಗಳು ಉತ್ಪತ್ತಿಯಾಗುತ್ತವೆ. ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು.

ತೆಂಗಿನ ಮರ ಜನ್ಮದ ಬಗ್ಗೆ ಒಂದೇ ಅಭಿಪ್ರಾಯ ಇಲ್ಲ. ಬೇರೇ ಬೇರೇ ಅಭಿಪ್ರಾಯಗಳಿವೆ. ಕೆಲವರು ಇಂಡೋ-ಪೆಸಿಫಿಕ್ ಸಮುದ್ರ ಪ್ರಾಂತವೆಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವರು ಮೆಲನೆಸಿಯ (melanesia) ಅಥವಾ ಮಲೇಷಿಯಾ (malesia)ಆಗಿರಬಹುದು ಎಂದಿದ್ದಾರೆ .ಇನ್ನು ಬೇರೆಯವರು ಆಗ್ನೇಯ ದಿಶೆಯಲ್ಲಿದ್ದ ದಕ್ಷಿಣ ಅಮೆರಿಕಾ ಎಂದು ಭಾವಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಶೇಖರಣೆ ಮಾಡಿದ 37-55 ಮಿಲಿಯನ್ ವರ್ಷದ ಪಳೆಯುಳಿಕೆ ಆಧಾರದಿಂದ ಇದರ ಮೂಲ ಸ್ಥಾನ ಈ ಎರಡು ದೇಶಗಳು ಎಂದು ಭಾವಿಸಲಾಗಿದೆ.

ತೆಂಗಿನಕಾಯಿ ಮರ ಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ. ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ. ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ(cocos nucifera). ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.

ತೆಂಗು ಕೃಷಿಯ ಉಪಯೋಗಗಳು: ಪಿಪಿ, ಹಾವು, ಜಡೆಸರಗಳನ್ನು ತಯಾರಿಸುವರು. ಗುಡಿಸಲು/ಜೋಪಡಿಗಳ ಮಾಳಿಗೆಗೆ/ಸೂರನ್ನಾಗಿ ಉಪಯೋಗಿಸುತ್ತಾರೆ. ಒಣಗಿಸಿದ ಎಲೆಗಳನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ಶವ ಸಂಸ್ಕಾರದ ಸಮಯದಲ್ಲೂ ತೆಂಗಿನ ಗರಿ/ಮಟ್ಟೆಗಳನ್ನು ಬಳಸುತ್ತಾರೆ.

ಮರದಕಾಂಡ : ಒಣಗಿಸಿದ ಕಾಂಡವನ್ನು ಮನೆ ನಿರ್ಮಾಣದಲ್ಲಿ ದೂಲವನ್ನಾಗಿ ಉಪಯೋಗಿಸುತ್ತಾರೆ. ಮರದ ಕಾಂಡವನ್ನು ಮನೆಯ ಕಂಬ/ಸ್ತಂಬಗಳನ್ನಾಗಿ ಉಪಯೋಗಿಸುವುದಕ್ಕೂ ಬಳಸಬಹುದು. ಸೌದೆಯಾಗಿ ಉಪಯೋಗಿಸಬಹುದು.
ಸಣ್ಣ ಕಾಲುವೆಗಳನ್ನು ಹಾಯಲು/ದಾಟುವುದಕ್ಕೆ ನಾವೆಯಾಗಿಯೂ ಉಪಯೋಗಿಸುತ್ತಾರೆ.

ಕಾಯಿ : ಕಾಯಿಯ ಮೇಲಿರುವ ಕತ್ತಮಿಂದ ತೆಂಗಿನನಾರು ತಯಾರು ಮಾಡಿ, ಅದರಿಂದ ಕಾಲ್ಚಾಪೆ(doormat), ಹಗ್ಗ, ನೇಣುರುಳುಗಳನ್ನು ಉತ್ಪನ್ನ ಮಾಡುವರು. ಕಾಯಿ ಒಳಗೆ ಇರುವ ನೀರನ್ನು ಎಳೆನೀರೆಂದು ಕರೆಯುತ್ತಾರೆ. ಈ ಎಳೆನೀರಲ್ಲಿ ಪೋಷಕ ಪದಾರ್ಥಗಳು ಅಧಿಕವಾಗಿವೆ. ಹೆಚ್ಚಿನ ಜನ ಎಳೆನೀರಿರುವ ಪ್ರಭೇದಗಳನ್ನು ಬೆಳೆಸುತ್ತಾರೆ. ಅದರಲ್ಲಿ ಗಂಗಾಭವಾನಿ ಪ್ರಭೇದವೂ ಒಂದು.

ಕತ್ತ ತೆಗೆದ ತೆಂಗಿನಕಾಯನ್ನು ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ಉಪಯೋಗಿಸುವರು.
ಶುಭಕಾರ್ಯದಲ್ಲಿ, ಮದುವೆ ಸಂದರ್ಭದಲ್ಲಿ ತೆಂಗಿನಕಾಯಿ ಇರಲೇಬೇಕು. ಕತ್ತದ ಕೊಚ್ಚನ್ನು ಸೌದೆಯನ್ನಾಗಿ ವಿನಿಯೋಗಿಸುತ್ತಾರೆ. ಕೊಬ್ಬರಿ ಎಳೆನೀರನ್ನು ಹುಳುಹಿಡಿಸಿ, ಅದರಿಂದ ಲೊಕೋನೆಟ್ ವಿನೆಗರ್(coconut vinegar)ನ್ನು ಉತ್ಪಾದನೆ ಮಾಡುವರು. ತೆಂಗಿನಕಾಯಿ ಒಳಗಿರುವ ಹಸಿ ತಿರುಳು/ಕೊಬ್ಬರಿಯಿಂದ ಕೊಬ್ಬರಿ ಹಾಲನ್ನು ತೆಗೆಯಲಾಗುತ್ತದೆ. ಹಸಿ ಕೊಬ್ಬರಿಯಿಂದ ಕೊಬ್ಬರಿಚಟ್ನಿ , ಸಾಂಬಾರು ಮಾಡಲಾಗುತ್ತದೆ.ಹಸಿ ಮತ್ತು ಒಣ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆಯನ್ನು ತಯಾರಿಸುವರು. ಕೊಬ್ಬರಿ ಸಿಪ್ಪೆಯಿಂದ ಅಲಂಕರಣ ವಸ್ತು ಸಾಮಗ್ರಿಗಳನ್ನು ಮಾಡಲಾಗುತ್ತದೆ.

ಮೂಲ : ಡಿಜಿಟಲ್‌ ದಾಖಲಾತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group