ಎದುರು ಬಾಗಿಲಿಂದ ಸ್ವಾಗತ ಮಾಡಿ ಹಿಂದಿನ ಬಾಗಿಲಿನಿಂದ ಹೊಡೆದು ಕಳಿಸಿದ ಹಾಗೆ ಆಯ್ತು ಈ ಸರ್ಕಾರದ ಗ್ಯಾರಂಟಿ ಭರವಸೆ…! ಹೀಗೆಂದು ಜನ ಮಾತನಾಡುವ ಹಾಗೆ ಆಗೋಯ್ತಲ್ಲ…!. ಈಗ ಜನಕ್ಕೆ ಸಿಕ್ಕಿದ್ದು ಬೆಲೆ ಏರಿಕೆಯ ಬರೆ ಮೇಲೆ ಬರೆ. ಈಗ ಕಂಡಿಷನ್ ಗಳ ಮೇಲೆ ಕಂಡಿಷನ್….!
200 ಯುನಿಟ್ ಉಚಿತ ವಿದ್ಯುತ್ ಗುಂಗಿನಲ್ಲಿರುವ ಜನರಿಗೆ ವಿದ್ಯುತ್ ಮೂಲ ಶುಲ್ಕ ಏರಿಕೆಯಾಗಿದೆ. ಮೇ 12ರಂದೇ ಈ ಮೂಲ ಶುಲ್ಕ ಹೆಚ್ಚಳದ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸರಾಸರಿಗಿಂತ ಹೆಚ್ಚಿನ ಬಳಕೆಯಾದರೆ ಯೂನಿಟ್ + ಮೂಲ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದೆ. 125 ರೂಪಾಯಿಂದ 1kw ನಿಗದಿತ ಶುಲ್ಕ 200ರೂ.ಗೆ ಏರಿಕೆಯಾಗಿದೆ. ಜೂನ್ನಲ್ಲಿ ನೀಡಲಾಗಿರುವ ಬಿಲ್ನಲ್ಲಿ ಏರಿಕೆಯಾಗಿರೋದನ್ನು ಗಮನಿಸಬಹುದು. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ kw 100 ರೂಪಾಯಿ ನಿಗದಿತ ಶುಲ್ಕವಿತ್ತು. ಮೇ ತಿಂಗಳಿನಿಂದ ಪ್ರತಿ kw ರೂ 100ರಿಂದ ರೂ 110ಕ್ಕೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ kwಗೆ ರೂ 125 ಇದ್ದ ದರ 200 ರೂಪಾಯಿಗೆ ಏರಿಕೆ ಕಂಡಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ಅದರಲ್ಲಿ ನೂರಾರು ರೂಲ್ಸ್, ಗಂಡಸರ ಮೇಲೆ ಬೆಲೆ ಏರಿಕೆಯ ಭಾರ ಕಂಡುಬಂದಿದೆ…!