ಈ ಬಾರಿ ಮಳೆಯ ಕೊರತೆ ಬಗ್ಗೆ ಚರ್ಚೆಯಾಗುತ್ತಿದೆ. ಕೃಷಿ ಏನಾದೀತು..?, ಗ್ರಾಮೀಣ ಜನರ ಬದುಕು ಏನಾದೀತು, ನಗರ ಕಡೆ ನೀರು ಇದ್ದೀತೇ…?, ಇನ್ನಾದರೂ ಮಳೆಯಾದೀತೇ ಎಂಬ ಚರ್ಚೆ, ಪ್ರಶ್ನೆ ಎಲ್ಲೆಡೆ ಇದೆ. ದಾಖಲೆಗಳ ಪ್ರಕಾರ ಅತೀ ಕನಿಷ್ಟ ಮಳೆಯ ಲೆಕ್ಕ ಕಾಣುತ್ತಿದೆ. ಮಳೆ ಲೆಕ್ಕಗಳನ್ನು ದಾಖಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪಿಜಿಎಸ್‌ಎನ್ ಪ್ರಸಾದ್ ಅವರು ತಮ್ಮ ಡೈರಿಯಲ್ಲಿ ದಾಖಲೆ ಮಾಡಿಕೊಂಡಿರುವ ಮಾಹಿತಿಯನ್ನು ಮಳೆ ಮಾಹಿತಿ ಲೆಕ್ಕದ ವಾಟ್ಸಪ್ ಗುಂಪಿನಲ್ಲಿ ನೀಡಿದ್ದಾರೆ. ಈ ಪ್ರಕಾರ ಆಗಸ್ಟ್ ತಿಂಗಳಲ್ಲಿ ದಾಖಲಾದ ಅತೀ ಕಡಿಮೆ ಮಳೆ ಈ ವರ್ಷ…!.

ಆಗಸ್ಟ್ ತಿಂಗಳಲ್ಲಿ ದಾಖಲಾದ ಮಳೆ 331 ಮಿ.ಮೀ. ಆಗಸ್ಟ್ ತಿಂಗಳಲ್ಲಿ ಈ ಹಿಂದಿನ ಕನಿಷ್ಠ ಮಳೆ 1977 ರಲ್ಲಿ 551 ಮಿ.ಮೀ.ದಾಖಲಾಗಿತ್ತು. ನನ್ನಲ್ಲಿರುವ ಮಾಹಿತಿ ಪ್ರಕಾರ ಮಳೆಗಾಲದ ಜೂನ್, ಜುಲೈ, ಆಗಸ್ಟ್ ಈ ಮೂರೂ ತಿಂಗಳಲ್ಲಿ ತಿಂಗಳೊಂದರಲ್ಲಿ ದಾಖಲಾದ ಕನಿಷ್ಟ ಮಳೆಯಿದು. 1977 ರಲ್ಲಿ ಸೆಪ್ಟೆಂಬರ, ಅಕ್ಟೋಬರನಲ್ಲಿ ಸಾಮಾನ್ಯ ಮಳೆ, ನವೆಂಬರ ದಲ್ಲಿ ಗರಿಷ್ಠ 606 ಮಿ.ಮೀ.ಸುರಿದಿತ್ತು.
ಆಗಸ್ಟ್ ತಿಂಗಳ ಮಳೆ ದಾಖಲೆ ಏನು ಹೇಳುತ್ತದೆ…? pic.twitter.com/abU5CrjN6L
— theruralmirror (@ruralmirror) September 3, 2023
Advertisement
ಆಗಸ್ಟ್ ತಿಂಗಳ ಅಂತ್ಯಕ್ಕೆ ಬರುವ ವಾರ್ಷಿಕ ಸರಾಸರಿ ಮಳೆ (1976 – 2023) 3523 ಮಿ.ಮೀ. ಈ ವರ್ಷ 2737 ಮಿ.ಮೀ.ಅಂದರೆ ಶೇ.22.3 ರಷ್ಟು ಕೊರತೆಯಿದೆ. ಆಗಸ್ಟ್ ತಿಂಗಳ ಸರಾಸರಿ 965 ಮಿ.ಮೀ. ಹೋಲಿಸಿದರೆ ಈ ಬಾರಿ ಶೇ.65.7 ಕೊರತೆಯಿದೆ. ಆಗಸ್ಟ್ ತಿಂಗಳ ಅಂತ್ಯದವರೆಗೆ ಮಳೆ ಬರುವ ವಾಡಿಕೆ ದಿನಗಳು 109. ಈ ಬಾರಿ ಕೇವಲ 88 ದಿನ ಮಾತ್ರ ಮಳೆಯಾಗಿದೆ. ವಾರ್ಷಿಕವಾಗಿ ಮಳೆ ದಾಖಲಾಗುವ ಸರಾಸರಿ ದಿನಗಳು 165.. ಗರಿಷ್ಟ 202 (2021) ಕನಿಷ್ಟ 144 (1986 & 2017) ನನ್ನ ತಂದೆಯವರ ಡೈರಿಯಲ್ಲಿ ದಾಖಲಾದಂತೆ 1965 ರಲ್ಲಿ ಕೇವಲ 123 ದಿನಗಳಷ್ಷೇ ಮಳೆ ದಾಖಲಾಗಿತ್ತು.