ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ 14.24ಲಕ್ಷ ರೈತರ ಬ್ಯಾಂಕ್ ಖಾತೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ರೂ ವಿಶೇಷ ಪ್ಯಾಕೇಜ್ ಫೋಷಿಸಲಾಗಿದೆ.
ಈ ಬಾರಿ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಈ ಜಿಲ್ಲೆಗಳಲ್ಲಿ ಅತಿ ಭಾರಿ ಹಾನಿ ಉಂಟಾಗಿದ್ದು, ಇಲ್ಲಿ ಒಟ್ಟು 14.58 ಲಕ್ಷ ಹೆಕ್ಟೇರ್ ಗಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿ ಸುಮಾರು ರೂ 10,748 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗರಿಷ್ಠ 2 ಹೆಕ್ಟೇರ್ ಮಾತ್ರ ಸೀಮಿತದಲ್ಲಿ ಪ್ರತಿ ಹಂತಕ್ಕೆ ಅನುಗುಣವಾಗಿ ಅಂದರೆ:
- ಮಳೆಯಾಶ್ರಿತ ಬೆಳೆಗಳು: ರೂ 8500 ರಿಂದ ರೂ 17000 ಪ್ರತಿ ಹೆಕ್ಟೇರ್ ಗೆ
- ನೀರಾವರಿ ಬೆಳೆಗಳು: ರೂ 17000 ರಿಂದ ರೂ 25500 ಪ್ರತಿ ಹೆಕ್ಟೇರ್
- ಬಹುವಾರ್ಷಿಕ ಬೆಳೆಗಳು: ರೂ 22500 ರಿಂದ ರೂ 31000 ಪ್ರತಿ ಹೆಕ್ಟೇರ್
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


