ವಾಣಿಜ್ಯ ಮೊಟ್ಟೆ ಕೋಳಿಗಳು ಎಷ್ಟು ಲಾಭದಾಯಕ..? | ಈ ಉದ್ಯಮಕ್ಕೆ ಕೈ ಹಾಕುವ ಮುನ್ನ ಒಂದಷ್ಟು ಸಲಹೆಗಳು.. |

December 21, 2023
12:32 PM
ಕೋಳಿಯನ್ನು ಮೊಟ್ಟೆಗಾಗಿ ಸಾಕಿದರೆ ಹೇಗೆ ಎಂಬುದರ ಬಗ್ಗೆ ಸತೀಶ್‌ ಡಿ ಶೆಟ್ಟಿ ಬರೆದಿದ್ದಾರೆ....

ನಾಟಿ ಕೋಳಿ ಕೃಷಿಕ(chicken farmer) ಸತೀಶ್ ಡಿ ಶೆಟ್ಟಿಯವರು ಕೋಳಿಯನ್ನು(Chicken) ಮೊಟ್ಟೆಗಾಗಿ(Egg) ಸಾಕಿದರೆ ಎಷ್ಟು ಲಾಭ ಇದೆ..? ಹೇಗೆ ಸಾಕಬೇಕು..? ಹಾಗೆ ಇದರ ಸಾಧಕ ಬಾಧಕ ಏನು..? ಅನ್ನುವ ಬಗ್ಗೆ ಒಂದಷ್ಟು ಸಲಹೆಗಳನ್ನು(Information) ಇಲ್ಲಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿಯ ಜೊತೆಗೆ ಒಂದಷ್ಟು ಉಪಕಸುಬುಗಳನ್ನು(sub-occupations ) ಮಾಡಲು ರೈತರು(Farmer), ಜಮೀನಿನ ಕೊರತೆ(Less land) ಇರುವವರು ಯೋಚಿಸುತ್ತಾರೆ. ಆದರೆ ಈ ಉಪಕಸುಬನ್ನು ಪ್ರಾರಂಭಿಸುವ ಮುನ್ನ ಒಂದಷ್ಟು ಸಲಹೆಗಳನ್ನು ಎಲ್ಲರೂ ತೆಗೆದುಕೊಳ್ಳುವುದು ಅತ್ಯಗತ್ಯ.

Advertisement
Advertisement

ನಾವು ಅಂದಾಜು 2 ವಿಧದ ಮೊಟ್ಟೆ ಕೋಳಿಗಳನ್ನು ಸಾಕುತ್ತೇವೆ. ವಾಣಿಜ್ಯ ರೂಪದ ಬಿಳಿ ಬಣ್ಣದ ಮೊಟ್ಟೆಗಾಗಿ ಲೆಗ್ ಹಾರ್ನ್ ಕೋಳಿಗಳು ಮತ್ತು ಬಣ್ಣದ ಮೊಟ್ಟೆಗಾಗಿ BV380 ಕೋಳಿಗಳನ್ನು ಸಾಕುತ್ತೇವೆ. ಇವೆರಡರಲ್ಲಿ ಬಿಳಿ ಮೊಟ್ಟೆಯು ಅಂಗಡಿಗಳಲ್ಲಿ 4 ರಿಂದ 5 ರೂಪಾಯಿಗೆ ಸಿಗುವ ಕಾರಣ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ, ಹಾಗೂ ದೊಡ್ಡ ಪ್ರಮಾಣದ ಫಾರಂ ಮಾಡಿ ಇದರ ವ್ಯವಹಾರ ಮಾಡಬಹುದು. ವಿಪರೀತ ಲಾಭದಾಯಕ ಅಲ್ಲದಿದ್ದರೂ ಹಾಕಿದ ದುಡ್ಡು ಬರುತ್ತದೆ. ಹಾಗೂ ಕಡಿಮೆ ದರದ ಮೊಟ್ಟೆಯ ಕಾರಣ ಒಳ್ಳೆಯ ಮಾರ್ಕೆಟಿಂಗ್ ಕೂಡ ಇದೆ…

ಆದರೆ ಇದೇ ರೀತಿಯಲ್ಲಿ ಬಣ್ಣದ ಮೊಟ್ಟೆಗಳಿಗಾಗಿ ಸಾಕುವ ಅತೀ ಹೆಚ್ಚಿನ ದರದ Bv380 ಕೋಳಿ ಮತ್ತು ಅದಕ್ಕಿಂತ ಇನ್ನೂ ಹೆಚ್ಚಿನ ದರದ ಅದರ ಗೂಡುಗಳನ್ನು ಖರೀದಿಸಿ ಮೊಟ್ಟೆ ಕೋಳಿ ಫಾರಂ ಮಾಡಿದವರಲ್ಲಿ 90% ಜನರು ನಷ್ಟ ಹೊಂದಿ ಬಿಟ್ಟೇ ಬಿಟ್ಟಿದ್ದಾರೆ.

ಕಾರಣಗಳು ಹಲವಾರಿದೆ : ಮುಖ್ಯವಾಗಿ ಮಾರಾಟ ಸಮಸ್ಯೆ.. 5 ರೂಪಾಯಿಗೆ ಬಿಳಿ ಮೊಟ್ಟೆ ಸಿಗುವಾಗ ಯಾರೂ ಕೂಡಾ 10 ರಿಂದ 15 ರೂಪಾಯಿಯ ಈ ಮೊಟ್ಟೆಗಳನ್ನು ಖರೀದಿಸುವುದಿಲ್ಲ. ಹೆಚ್ಚೆಂದರೆ ನೂರರಲ್ಲಿ ಕೇವಲ ಹತ್ತು ಜನ ಉಳ್ಳವರು ಮಾತ್ರ ಖರೀದಿಸಿ ತಿನ್ನುತ್ತಾರೆ. ಕಡಿಮೆ ಎಂದರೂ ಹತ್ತು ಕೋಳಿ ಸಾಕಿದರೂ ದಿನವೂ 10 ಮೊಟ್ಟೆ ಸಿಕ್ಕಿದರೂ ಆಯಾಮ ದಿನ ಮಾರಾಟ ಆಗದಿದ್ದರೆ ಮರುದಿನ ಮತ್ತೆ ಹತ್ತು ಸೇರಿ ಇಪ್ಪತ್ತು ಆಗುತ್ತದೆ. ಇದೇ ರೀತಿಯಲ್ಲಿ ದಿನವೂ ಹತ್ತತ್ತು ಸೇರಿದರೆ ಹತ್ತು ದಿನಕ್ಕೆ ನೂರು ಆಗುತ್ತದೆ. ಬಹುಕಷ್ಟದಿಂದ 50 ಮೊಟ್ಟೆ ಮಾರಿದರೂ ಮತ್ತೆ 50 ಉಳಿಯುತ್ತದೆ.. ಈಗಿನ ದರದಲ್ಲಿ ಒಂದು ಮೊಟ್ಟೆಗೆ 5ರಿಂದ 8 ರೂಪಾಯಿವರೆಗೆ ಖರ್ಚು ಬರುತ್ತದೆ..

ಅಂಗಡಿಯವರು ಖರೀದಿಸಿದ ಕೂಡಲೇ ಹಣ ಕೊಟ್ಟರೆ ಬಚಾವ್. ಇಲ್ಲದಿದ್ದರೆ ನಾಳೆಯ ಧೈರ್ಯ ಇರುವುದಿಲ್ಲ..
ಹಾಗೂ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಮೊಟ್ಟೆಗಳನ್ನು 15 ರಿಂದ 20 ದಿನಗಳವರೆಗೆ ಶೇಖರಿಸಿಡಬಹುದು. ಬೇಸಿಗೆಯಲ್ಲಿ ಹೆಚ್ಚೆಂದರೆ 10 ದಿನ ಮಾತ್ರ ಶೇಖರಿಸಿಡಬಹುದು.. ನಂತರ ಮೊಟ್ಟೆಯ ಒಳಗಿನ ಹಳದಿ ಭಾಗವು ಗಟ್ಟಿಯಾಗುತ್ತಾ ಬಂದು ಹಾಳಾಗುತ್ತದೆ. ಆದರೂ ಮೊಟ್ಟೆ ಕೋಳಿ ಸಾಕಾಣಿಕೆಯಲ್ಲಿ ಎಲ್ಲೋ ಒಬ್ಬಿಬ್ಬರು ಅದೃಷ್ಟಶಾಲಿಗಳು ವಿಜಯಿಯಾಗಿರಬಹುದು.. ಮುಕ್ಕಾಲು ಪಾಲು ಜನ ದೊಡ್ಡ ಬಂಡವಾಳ ಹಾಕಿ ಬಣ್ಣದ ಮೊಟ್ಟೆ ಕೋಳಿ ಫಾರಂ ಆರಂಭಿಸಿ ಸೋತು ಸುಣ್ಣವಾಗಿ ಹೋಗಿದ್ದಾರೆ. ಆದರೂ ಮಾರಾಟ ಮಾಡುವ ಧೈರ್ಯ ಉಳ್ಳವರು ಸಣ್ಣ ಪ್ರಮಾಣದಲ್ಲಿ ಆರಂಭಿಸಿ ನಂತರ ಯಶಸ್ವಿಯಾದರೆ ದೊಡ್ಡ ಪ್ರಮಾಣದಲ್ಲಿ ಮುಂದುವರಿಯಬಹುದು.

Advertisement
ಬರಹ :
ಸತೀಶ್ ಡಿ ಶೆಟ್ಟಿ,
, ನಡಿಗುತ್ತು ನಾಟಿ /ಗಿರಿರಾಜ ಕೋಳಿ ಫಾರಂ

Satish D Shetty, a famous chicken farmer, how much profit is there if he keeps chickens for eggs..? How to breed..? Here are some suggestions about its pros and cons. Nowadays, farmers and those who are short of land think of doing some sub-occupations along with agriculture. But before starting this sub-business it is essential that everyone should take some tips.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಹಿಳಾ ಗ್ರಾಮಸಭೆ | ರಾಷ್ಟೀಯ ಕೃಷಿ ವಿಕಾಸ ಯೋಜನೆ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿ
May 25, 2025
5:57 AM
by: The Rural Mirror ಸುದ್ದಿಜಾಲ
ಮರ್ಕಂಜ ಪ್ರಶಾಂತ್ ಕೆ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ 52 ನೇ ವಾರ್ಷಿಕ ಬಹುಮಾನ
May 25, 2025
5:48 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 35 ಕೋವಿಡ್ ಸಕ್ರಿಯ ಪ್ರಕರಣ | ಜನರು ಆತಂಕ ಪಡುವ ಅಗತ್ಯವಿಲ್ಲ | ಸಚಿವ ದಿನೇಶ್ ಗುಂಡೂರಾವ್
May 24, 2025
10:56 PM
by: The Rural Mirror ಸುದ್ದಿಜಾಲ
ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ರೆಡ್‌-ಎಲ್ಲೋ ಎಲರ್ಟ್‌ |
May 24, 2025
10:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group