ಹಿಪ್ಪಲಿ ಕಸಿ(Pippali) ಮೆಣಸು(Black Pepper) ಬೇರಿನ ಮೂಲಕ ಬರುವ ಸೊರಗು ರೋಗ(Disease) ತಡೆಯಲು ಸಹಕಾರಿ. ಇದರ ಇಳುವರಿ ಸಾದಾ ಬಳ್ಳಿಯ(Creeper) ಇಳುವರಿಗಿಂತ ಕಡಿಮೆ. ಹಿಪ್ಪಲಿ ಕಸಿ ಬಳ್ಳಿಗಳಿಗೆ ನೀರು(Water), ಪೋಣಕಾಂಶಗಳನ್ನು(Nutrition) ಹೆಚ್ಚಾಗಿ ಕೊಡಬೇಕು. ಹಿಪ್ಪಲಿಯ ಬೇರಿನ ವ್ಯೂಹದ ವ್ಯಾಪ್ತಿ ಚಿಕ್ಕದು. ಅದಕ್ಕಾಗಿ ಹೆಚ್ಚು ನೀರು ಮತ್ತು ಗೊಬ್ಬರವನ್ನು(Manure) ಅದು ಬಯಸುತ್ತದೆ. ಜವಳು ಭೂಮಿಗೆ ಹಿಪ್ಪಲಿ ಕಸಿ ಮೆಣಸು ಸೂಕ್ತ. ನೀರಾವರಿ ಇದ್ದಲ್ಲಿ ಸಹ ಹಿಪ್ಪಲಿ ಕಸಿ ಮೆಣಸು ಒಳ್ಳೆಯದು. ಹಿಪ್ಪಲಿ ಕಸಿಯನ್ನು in vitro ವಿಧಾನದ ಮೂಲಕ ಮಾಡಿಕೊಳ್ಳುವುದು ಒಳ್ಳೆಯದು. ಹಿಪ್ಪಲಿ ಕಸಿ ಬಳ್ಳಿಗಳ ಗಾತ್ರ ಹೆಚ್ಚಿಸಲು ಒಂದು ಮರಕ್ಕೆ ಹಬ್ಬಿಸಲು ಮೂರು, ನಾಲ್ಕು ಹಿಪ್ಪಲಿ ಕಸಿ ಬಳ್ಳಿ ಹಬ್ಬಿಸಬಹುದು.
1. ಸಾದಾ ಕಾಳುಮೆಣಸಿನ ಗಿಡಕ್ಕೆ ಹಾಕಿದಂತೆ ಕಸಿ ಗಿಡಕ್ಕೂ COC ಡ್ರೆಂಚಿಂಗ್ ಬೇಕೇ? : ಬೇಕು ಅಂತ ಇಲ್ಲ.ಆದ್ರೆ ಮೇಲ್ಗಡೆ ಬಳ್ಳಿಗೆ ಬೋರ್ಡೋ,ಅಥವಾ ಬ್ಲೈಟ್ಯಾಕ್ಸ್ ಸ್ಪ್ರೇ ಕೊಡಲೇ ಬೇಕು
2. ಹೆಚ್ಚಿನ ಕವಲು ಒಡೆಯಲು ಕುಡಿ ಚಿವುಟ ಬೇಕೆ? – ಮೇಲ್ಗಡೆ ಕುಡಿ ಚಿವುಟ ಬೇಕು ಅಂತಿಲ್ಲ.ಬೆಳವಣಿಗೆ ಆಗುತ್ತಿದ್ದಂತೆ ಹೆಚ್ಚಿನ ಕುಡಿ ಬರುತ್ತದೆ
3. ತೋಟದಲ್ಲಿ ಹಿಪ್ಪಲಿ ಬೆಳೆಸಿ ಕಸಿ ಕಟ್ಟುವುದು ಕೊಟ್ಟೆ ಸಸಿ ಗಿದಕ್ಕಿಂತ ಉತ್ತಮವೇ? : ಒಬ್ಬ ಕೃಷಿಕರು ಹೇಳಿದ ಪ್ರಕಾರ ಇನ್ ಸೈಟ್ ಹಿಪ್ಪಲಿ ಕಾಂಡ ಹೆಚ್ಚು ದಪ್ಪ ಇದ್ದು ಮೆಣಸಿನ ಬಳ್ಳಿ ಗಾತ್ರಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ. ನಿಮ್ಮದೂ ಇದೆ ಅಭಿಪ್ರಾಯವೇ? – ಗಾತ್ರಕ್ಕೆ ಹೊಂದಿಕೊಳ್ಳುತ್ತದೆ.ಆದ್ರೆ ಬುಡದಲ್ಲಿ ನೆಟ್ಟ ನಂತರ ಕಸಿ ಮಾಡುವುದು ಅತ್ಯುತ್ತಮ
4. ಅಡಿಕೆ ತೋಟದಲ್ಲಿ ಯಾವ ಜಾತಿ sion ಒಳ್ಳೆಯದು?:- ಹೆಚ್ಚು ಬಿಸಿಲು ಇದ್ದಲ್ಲಿ ಪನಿಯೂರು ಜಾತಿ,ಹಳೆ ತೋಟದಲ್ಲಿ ಇತರೆ ತಳಿಗಳು ಉತ್ತಮ
5. ಒಂದು ಅಡಿಕೆ/ಹಿಪ್ಪಲಿ ಬುಡಕ್ಕೆ ಎಷ್ಟು ಕಸಿ ಮಾಡಬೇಕು? : 2 ಬಳ್ಳಿ ಗೆ ಕಸಿ ಮಾಡುವುದು ಉತ್ತಮ
6. ಒಂದಕ್ಕಿಂತ ಹೆಚ್ಚು ಹಿಪ್ಪಲಿ ಗಿಡ ಒಂದು ಅಡಿಕೆಗೆ ಹಾಕಬೇಕೆ? : ಇಲ್ಲ.ಒಂದು ಮೊದಲು ನೆಟ್ಟು ಕಸಿಮಾಡಿ,ನಂತರ ಬಂದ ಒಂದು ಚಿಗುರಿಗೆ ಕಸಿ ಮಾಡಿದರೆ ಆಯ್ತು
7. ಮಣ್ಣಿಗೆ ಹತ್ತಿರದಲ್ಲಿ ಕಸಿ ಇದ್ದು ಮೆಣಸಿಗೂ ಬೇರು ಬಂದರೆ ಹೆಚ್ಚು ಉತ್ತಮ ಅಂತ ಒಬ್ಬ ಕೃಷಿಕರ ಅಭಿಪ್ರಾಯ. ಇದರಿಂದ ಬೇರಿಗೆ ರೋಗ ಬರುವುದಿಲ್ಲವೇ? : ಗಿಡ ಚೆನ್ನಾಗಿ ಬೆಳೆಯುತ್ತದೆ.ಆದ್ರೆ ಮಣ್ಣಿನಿಂದ ರೋಗ ಬರುತ್ತದೆ.ಪುನಃ coc ಹಾಕಬೇಕು
8. ಹಿಪ್ಪಲಿ ಗಿಡ ಅಡಿಕೆಗೆ ತೊಂದರೆ ಕೊಡುತ್ತದೆಯೇ? : ಹಿಪ್ಪಲಿ ಹೆಚ್ಚು ಬೇರು ಬರುವುದರಿಂದ ಗೊಬ್ಬರ ಹಾಕಲು ಉಳಿದ ಕೆಲಸ ಗಳಿಗೆ ಸ್ವಲ್ಪ ತೊಂದರೆ.
9. ಸಾದಾ ಮೆಣಸಿಗಿಂತ ಹಿಪ್ಪಲಿ ಕಸಿ ಗಿಡಕ್ಕೆ ಹೆಚ್ಚು ನೀರು ಬೇಕೆ? : ನೀರು ಬೇಕು.ಜಾಸ್ತಿ ಅಂತ ಅಲ್ಲ.ಕಡಿಮೆ ನೀರು ಇದ್ದಲ್ಲಿ ಬೆಳವಣಿಗೆ ಕಡಿಮೆ ಇರುತ್ತದೆ.ಆದ್ರೆ ಬೆಳೆ ಚೆನ್ನಾಗಿ ಇರುತ್ತದೆ.
10. ಹೆಚ್ಚು ಗೊಬ್ಬರ ಬೇಕೆ? : ಗೊಬ್ಬರ ವೂ ಅಷ್ಟೇ .ಹೆಚ್ಚು ಬೇಕಾಗುತ್ತದೆ.ವಿಪರೀತ ಬೇರು ಇರುವುದರಿಂದ ಜಾಸ್ತಿ ಬೇಕು.ಆದ್ರೆ ನಾನಂತೂ ಜಾಸ್ತಿ ಕೊಟ್ಟಿಲ್ಲ.ಇದರಿಂದ ಅಡಿಕೆಗೆ ಸ್ವಲ್ಪ ಕಡಿಮೆ ಆಗಬಹುದು 1
11. ವರ್ಷಕ್ಕೆ ಸರಾಸರಿ ಎಸ್ತ್ಟು ಬಾರಿ ಹಿಪ್ಪಲಿ ಕವಲುಗಳನ್ನ ಕತ್ತರಿಸಬೇಕು? : 5ಕ್ಕಿಂತ ಹೆಚ್ಚು ಬಾರಿ ಆಗಬಹುದು. ಗೊಬ್ಬರ ನೀರು ಜಾಸ್ತಿ ಆದಂತೆ ಚಿಗಿರೂ ಜಾಸ್ತಿ.
12. ಒಳ್ಳೆ ಮೆಂಟೇನೆನ್ಸ್ ಇದ್ದಲ್ಲಿ 5 ವರ್ಷದ ಕಸಿ ಬಳ್ಳಿಯಲ್ಲಿ ಸರಾಸರಿ ಎಷ್ಟು ಒಣ ಕಾಳು ಮೆಣಸು ಪಡೆಯಬಹುದು? : ಸರಾಸರಿ ತಳಿಯ ಮೇಲೆ 2ಕೆಜಿ ಇರಬಹುದು
13. ನಿಮ್ಮಲ್ಲಿರುವ ಕಸಿ ಗಿಡ ಸರಾಸರಿ ಎಷ್ಟು ವರ್ಷ? : ನನ್ನ ಕಸಿ ಗಿಡ 6 ವರ್ಷ ಸಾವಿರಾರು ಮಾಡಿದ್ದರಲ್ಲಿ ಕೆಲವೇ ಉಳಿದಿವೆ. ಶೀಘ್ರ ಸೋರಾಗುರೋಗಕ್ಕೆ ಬಹಳಷ್ಟು ಸತ್ತಿವೆ.
14. ನಿಮ್ಮ ಸರಾಸರಿ ಯೇಲ್ಡ್ ಏಷ್ಟು? : ಸುಮಾರು 2ಕೆಜಿ
15. ಕಸಿ ಬಳ್ಳಿಗೆ ಸಾದಾ ಬಳ್ಳಿಗಿಂತ ಹೆಚ್ಚಿನ ಬಾರಿ ಫೋಲಿಯಾರ್ ಸ್ಪ್ರೇ ಮೂಲಕ ಗೊಬ್ಬರ, ಮೈಕ್ರೋ ನುಟ್ರಿಯೆಂಟ್ ಕೊಡಬೇಕೇ? : ನಾನು ಯಾವುದೂ ಕೊಡುವುದಿಲ್ಲ.
- ಅನುಭವಿ ಕೃಷಿಕರೊಬ್ಬರ ಮಾಹಿತಿ