ಮನಸ್ಸು ಮಾಡಿದರೆ ವರ್ಷವಿಡೀ ಹಲಸಿನ ಹಣ್ಣು ತಿನ್ನಬಹುದು…! | ಕಾಫಿನಾಡಿನಲ್ಲಿದೆ ವರ್ಷವಿಡೀ ಹಣ್ಣು ಕೊಡುವ ಹಲಸಿನ ಮರಗಳು |

June 8, 2024
1:20 PM
ಹಲಸು ಮೌಲ್ಯವರ್ಧನೆ ಹಾಗೂ ಹಲಸು ಬೆಳೆಯತ್ತ ಈಗ ಹೆಚ್ಚು ಆಸಕ್ತಿ ವಹಿಸಬಹುದಾಗಿದೆ.

ಹಲಸಿನ ಹಣ್ಣು(Jackfruit)..  ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ವರ್ಷದಲ್ಲಿ ಒಂದೇ ಒಂದು ಬಾರಿ ಸಿಗುವ ಹಣ್ಣು ಇದು. ಈ ವರ್ಷ ತಿಂದರೆ ಮತ್ತೆ ಹಲಸಿನ ಹಣ್ಣು ಬೇಕಂದ್ರೆ ಸಿಗಲ್ಲ…! ಮತ್ತೆ ಒಂದು ವರ್ಷ ಕಾಯಬೇಕು. ಅದು ಈಗಿನ ಹವಾಮಾನ ವೈಪರೀತ್ಯಕ್ಕೆ(Climate Change) ಫಲ ಬಿಟ್ಟರೆ ಬಿಟ್ಟಿತು. ಇಲ್ಲಾಂದ್ರೆ ಇಲ್ಲ. ಭಾರಿ ಬೆಲೆ ತೆತ್ತು ಪೇಟೆಯಲ್ಲೇ ಖರೀದಿಸಬೇಕು.  ಸಾಮಾನ್ಯವಾಗಿ ಏಪ್ರಿಲ್‌ನಿಂದ ಜೂನ್‌ವರೆಗೆ ಹಲಸಿನ ಹಣ್ಣಿನ ಸೀಸನ್.‌ ಅಂದ್ರೆ 3-4 ತಿಂಗಳ ಕಾಲ ಮಾತ್ರ ಮಾರುಕಟ್ಟೆಯಲ್ಲಿ(Market) ನೋಡ್ತೀವಿ. ಆದರೆ ಇಲ್ಲೊಂದು ತಳಿಯ ಹಲಸಿನ ಹಣ್ಣಿದೆ. ವರ್ಷವಡೀ ನಿಮ್ಮಗೆ ಹಣ್ಣುಗಳನ್ನು ನೀಡುತ್ತದೆ. ನೀವು ಮೂರು ತಿಂಗಳಿಗೊಮ್ಮೆ ಹಣ್ಣನ್ನು ತಿನ್ನಬಹುದು. ಹೌದು ಅದುವೇ  ಚಂದ್ರಬಕ್ಕೆ (Chandrabakke Jackfruit) ಹಲಸು.

Advertisement

ಹಿಂದಿನ ಕಾಲದಲ್ಲೂ ಹಲಸಿನ ಹಣ್ಣು ಹಲವಾರು ಬಡವರ ಮನೆಯ ಹಸಿವನ್ನು ನೀಗಿಸಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಹಲಸಿನ ಹಣ್ಣು ತನ್ನ ಮೌಲ್ಯವನ್ನು ಕಳೆದುಕೊಂಡಿತು. ಆದರೆ ಇತ್ತೀಚೆಗೆ ಹಲಸಿಗೆ ಹೆಚ್ಚಿನ ಬೇಡಿಕೆ ಇದೆ. ಹಲಸಿನ ಉತ್ಪನ್ನಗಳಿಗೆ ಮೌಲ್ಯವರ್ಧನೆಯಾಗುತ್ತಿದೆ. ತಿಂಡಿ ತಿನಿಸು, ಕರಿದ ಪದಾರ್ಥಗಳು, ಹಾಗೂ ಹಲಸಿನ ಹುಡಿಗೆ ಭಾರಿ ಬೇಡಿಕೆ ಇದೆ. ವರ್ಷದಲ್ಲಿ ಒಂದು ಭಾರಿ ಸಿಗುವ ಹಣ್ಣನ್ನು ಕಾಪಿಡುವುದೇ ಸಾಹಸದ ಕೆಲಸ. ಆದರೆ ಈ ರೀತಿ ವರ್ಷವಿಡೀ ಸಿಗುವ ಹಲಸಿನ ಹಣ್ಣು ಇದ್ರೆ ವರ್ಷದ ಎಲ್ಲಾ ತಿಂಗಳುಗಳಲ್ಲಿ ನಾವು ಹಲಸಿನ ಹಣ್ಣು ಸವಿಯಬಹುದು.

ಅಂತಹ ಹಲಸು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಖರಾಯಾಪಟ್ಟಣದ ರಾಜಶೇಖರ್ ಎಂಬವರ ಅಡಿಕೆ ತೋಟದಲ್ಲಿ ಕಾಣಬಹುದಾಗಿದೆ. ಹೀಗೆ ಇವರ ತೋಟದಲ್ಲಿ 3 ಚಂದ್ರಬಕ್ಕೆ ಹಲಸಿನ ಹಣ್ಣಿನ ಮರವಿದೆ. ಈ ಮರದ ವಿಶೇಷ ಅಂದ್ರೆ ಪ್ರತಿ 3 ತಿಂಗಳಿಗೊಮ್ಮೆ ಈ ಮರದಲ್ಲಿ ಹಲಸಿನ ಹಣ್ಣು ಸಿಗುತ್ತೆ. ಇದರ ಇನ್ನೊಂದು ವಿಶೇಷ ಏನೆಂದರೆ ಮರದ ಬುಡದಿಂದಲೇ ಹಲಸಿನ ಹಣ್ಣು ಬಿಡಲು ಪ್ರಾರಂಭವಾಗುವುದು. ಸಾಮಾನ್ಯವಾಗಿ ಬೇರೆ ಮರಗಳಲ್ಲಿ 2-3 ತಿಂಗಳ ಕಾಲ ಹಲಸು ಬೆಳೆದರೆ ಇದು ವರ್ಷವಿಡೀ ಕಾಯಿಗಳಿಂದ ತುಂಬಿರುತ್ತದೆ. ಇಂತಹ ತಳಿಯ ಹಲಸಿನ ಹಣ್ಣು ಕಾಣಸಿಗುವುದು ಕೂಡಾ ಅಪರೂಪ.

Source: Digital Media

The jackfruit crop is experiencing a surge in value, providing farmers with lucrative opportunities for growth and profit. With increasing demand for this versatile fruit, farmers are finding new avenues to capitalize on its market potential. The unique attributes of jackfruit, such as its sustainability and nutritional benefits, are driving its popularity in the agricultural sector. As a result, farmers are expanding their cultivation of jackfruit to meet the rising consumer demand. This trend is not only beneficial for farmers but also for the overall economy, as the jackfruit crop contributes to the diversification and sustainability of agricultural practices.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group