#Agriculture | ತೋಟ ನಿರ್ಮಾಣ ಮಾಡುವುದು ಹೇಗೆ? | ಈ ಬಗ್ಗೆ ಸಮಾಲೋಚನೆ ಅಗತ್ಯವಿದೆಯೇ? | ಇಲ್ಲಿದೆ ಮಾಹಿತಿ..

October 12, 2023
2:38 PM
ಕೃಷಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಕಾಲಿಕವಾದ ಮಾಹಿತಿಯೂ ಅಗತ್ಯವಿದೆ. ಇಲ್ಲಿ ಪ್ರಶಾಂತ್‌ ಜಯರಾಮ್‌ ಅವರು ನೀಡಿರುವ ಮಾಹಿತಿ ಇದೆ...

ಇತ್ತೀಚೆಗೆ ಬಹಳಷ್ಟು ಮಂದಿ ಕೃಷಿಗೆ #Agriculture ಮರಳುತ್ತಿದ್ದಾರೆ. ಆದರೆ ಕೃಷಿ ಹೇಗೆ ಮಾಡಬೇಕು..? ಯಾವ ಬೆಳೆ ಬೆಳೆಯಬೇಕು..? ಅದರ ಉಪಚಾರ ಹೇಗೆ..? ಈ ಎಲ್ಲಾ ಮಾಹಿತಿಗಳ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ ಬಹಳಷ್ಟು ಮಂದಿ ಕೃಷಿಯತ್ತ ಬರಲು ಹೆದರುತ್ತಾರೆ. ಅಂಥವರಿಗಾಗಿ ಕೃಷಿಕರು ಮತ್ತು ಕೃಷಿ ಸಲಹೆಗಾರರಾದ ಪ್ರಶಾಂತ್ ಜಯರಾಮ್ ಅವರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅವರು ಈ ಬಗ್ಗೆ ಏನು ಹೇಳುತ್ತಾರೆ ಅನ್ನೋದನ್ನು ನೀವೆ ಓದಿ….

Advertisement
Advertisement

ನಮ್ಮ ಕೃಷಿ ಪಯಣದಲ್ಲಿ ಸಾಕಷ್ಟು ಅನುಭವಿ ಸಾವಯವ/ನೈಸರ್ಗಿಕ/ಸಹಜ ಕೃಷಿಕರು ಮತ್ತು ನುರಿತ ತಜ್ಞರ ಜೊತೆಗೆ ಒಡನಾಟ ಮತ್ತು ಅವರ ಕೃಷಿ ಜಮೀನುಗಳಿಗೆ ಭೇಟಿ ಮತ್ತು ನಮ್ಮ ಕೃಷಿ ಕುಟುಂಬದ ಹಿನ್ನಲೆ, ಸ್ವಂತ ಕೃಷಿ ಭೂಮಿಯಲ್ಲಿನ ದುಡಿಮೆಯಿಂದ ಒಂದಷ್ಟು ಕೃಷಿ ಅನುಭವಗಳನ್ನು ಮತ್ತು ತೋಟ ಕಟ್ಟುವ ಜ್ಞಾನವನ್ನು ಪಡೆಯಲು ನಮಗೆ ಸಹಾಯ ಮಾಡಿದೆ. ನಾವು ನಿಮ್ಮೊಂದಿಗೆ ತೋಟ ನಿರ್ಮಾಣ ಮಾಡುವ ವಿಚಾರದಲ್ಲಿ ಸಮಾಲೋಚಿಸಲು ಬಯಸುತ್ತೇವೆ ಮತ್ತು ನಿಮ್ಮ ಕಲ್ಪನೆಯ ಪ್ರಕಾರ ನಿಮ್ಮ ತೋಟದ ವಿನ್ಯಾಸ ರಚನೆ #Garden ayout ಮಾಡಲು ಸಹಾಯ ಮಾಡುತ್ತೇವೆ.

ಸಮಾಲೋಚನೆಯಲ್ಲಿ, ನಾವು ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಆಲೋಚನೆಗಳಿಗೆ ಆದ್ಯತೆ ನೀಡುತ್ತೇವೆ ಮತ್ತು ಆನಂದ, ಆಹಾರ, ಆರೋಗ್ಯ ಮತ್ತು ಆದಾಯವನ್ನು ಮುಖ್ಯ ಅಂಶಗಳಾಗಿ ಪರಿಗಣಿಸುತ್ತೇವೆ. ತೋಟ ಕಟ್ಟುವ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಮತ್ತು ನಿಮ್ಮ ಭೇಟಿಯನ್ನು ಹೆಚ್ಚು ಪ್ರಯೋಜನಕಾರಿಯಾಗಿ ಮಾಡಲು, ನಾವು ನಿಮ್ಮೊಂದಿಗೆ ಹೆಚ್ಚಿನ ಸಮಯವನ್ನು ಹಂಚಿಕೊಳ್ಳಲು ಸಮಾಲೋಚನೆ ಸಮಯದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡುತ್ತೇವೆ ಮತ್ತು ನಿಮ್ಮ ಜಮೀನು/ತೋಟಕ್ಕೆ ಭೇಟಿ ನೀಡಿ,ನಿಮ್ಮ ಜಮೀನಿನ ಮಣ್ಣಿನ ಸ್ವರೂಪ,ನೀವು ಜಮೀನಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿರುವ ಸಮಯ ಮತ್ತು ಕೃಷಿ ಚಟುವಟಿಕೆ ನೆಡೆಸಲು ಇರುವ ಸಾಮರ್ಥ್ಯ,ನೀರಿನ ಮತ್ತು ಇತರೆ ನೈಸರ್ಗಿಕ ಹಾಗು ಮಾನವ ಸಂಪನ್ಮೂಲಗಳ ಲಭ್ಯತೆ,ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ,ಇತ್ಯಾದಿ ಅಂಶಗಳನ್ನು ಪರಿಶೀಲಿಸಿ,ನಿಮ್ಮ ಜಮೀನಿಗೆ ಸೂಕ್ತವಾಗುವ ವಿನ್ಯಾಸ ನಿರ್ಮಿಸಿಕೊಡಲಾಗುವುದು.

ಸಮಾಲೋಚನೆಯಲ್ಲಿ ಪ್ರಮುಖ ಕೃಷಿ ವಿಚಾರಗಳು:

1)ತೋಟಕ್ಕೆ ಬೇಕಾದ ಸೂಕ್ತ ಕೃಷಿ ಭೂಮಿ ಖರೀದಿಯಲ್ಲಿ ಅನುಸರಿಸಬೇಕಾದ ಪ್ರಮುಖ ಅಂಶಗಳು.
2)ಬೇಲಿ ನಿರ್ಮಾಣ.
3)ನೀರಾವರಿ ವಿನ್ಯಾಸ(ಹನಿ ಅಥವಾ ತುಂತುರು ನೀರಾವರಿ).
4)ಫಾರ್ಮ್ ಹೌಸ್, ಹಸು/ಕೋಳಿ/ಕುರಿ ಶೆಡ್, ಸಂಗ್ರಹ ಕೊಠಡಿ ನಿರ್ಮಾಣ.
5) ಮಣ್ಣಿನ ಸಂರಕ್ಷಣೆ ಮತ್ತು ಸುಧಾರಣೆ ಕ್ರಮಗಳು.
6)ಕೃಷಿ ಉಪಕರಣ ಮತ್ತು ಕೃಷಿ ಉತ್ಪನ್ನಗಳ ಸಾಗಾಟ ಸುಲುಭಗಳಿಸಲು ರಸ್ತೆ ನಿರ್ಮಾಣ.
7)ಸಾವಯವ ಗೊಬ್ಬರ ತಯಾರಿಕೆ.
8) ವಿವಿಧ ಮರಗಿಡಗಳು/ ಬೆಳೆಗಳ ಆಯೋಜನೆ ವಿನ್ಯಾಸ. (ಆಹಾರ/ಆರ್ಥಿಕ/ಮೇವು/ಗೊಬ್ಬರ/ಕಟ್ಟಿಗೆ ಬೆಳೆಗಳು)
9) ತೋಟದ ನಿರ್ವಹಣೆಯನ್ನು ಸುಗಮಗೊಳಿಸಲು ಮತ್ತು ಉತ್ಪಾದಕತೆ ಹೆಚ್ಚಿಸುವ ಮಾರ್ಗೋಪಾಯಗಳು.
10) ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಅವಕಾಶಗಳು ಮತ್ತು ಸವಾಲುಗಳು.
11)ಮನೆ ಬೇಸಾಯ:ಕುಟುಂಬದ ಬಳಕೆಗೆ ಬೇಕಾಗುವ ಧಾನ್ಯ/ಬೇಳೆಕಾಳು/ಎಣ್ಣೆಕಾಳು /ಸಾಂಬಾರ್ ಪದಾರ್ಥ ತರಕಾರಿ/ಸೊಪ್ಪು /ಹಣ್ಣು ಬೆಳೆದುಕೊಳ್ಳುವುದು.
12) ಕೃಷಿ ಪ್ರವಾಸೋದ್ಯಮದ ಅವಕಾಶಗಳು ಹಾಗು ನೀವು ತೋಟ ನಿರ್ಮಿಸಲು ಬಯಸುವ ಇತ್ಯಾದಿ ವಿಚಾರಗಳು.

Advertisement

ತೋಟ ನಿರ್ಮಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಮಾಲೋಚನೆ ಮತ್ತು ತೋಟದ ವಿನ್ಯಾಸ ಅಗತ್ಯವಿರುವ ಪರಿಸರ ಸ್ನೇಹಿ ಕೃಷಿಯಲ್ಲಿ ಆಸಕ್ತಿಯುಳ್ಳವರು,ಹೊಸ ತೋಟವನ್ನು ನಿರ್ಮಿಸುವ ಕನಸು ಹೊಂದಿರುವವರು, ಈಗಾಗಲೇ ಕೃಷಿಯಲ್ಲಿ ತೊಡಗಿರುವವರು ಸಮಾಲೋಚನೆಯ ಸಮಯ ನಿಗದಿಪಡಿಸಿಕೊಳ್ಳಲು ಸಂಪರ್ಕಿಸಬಹುದು.

  • ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊ. 9342434530

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ
May 17, 2025
7:01 AM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group