ಇಂಕ್ವುಬೇಟರ್(Incubator)ನಿಂದ ಕೋಳಿ ಮರಿ ಹೊರಬಂದ ಮೇಲೆ ಅದರ ಪೋಷಣೆ‌ ಹೇಗೆ ಮಾಡಬೇಕು..? ಇಲ್ಲಿದೆ ಮಾಹಿತಿ..

January 8, 2024
12:44 PM

ಅದೊಂದು ಕಾಲ ಇತ್ತು. ಮಾಂಸಹಾರಿಗಳ(Non-vegetarian) ಮನೆ ತುಂಬೆಲ್ಲಾ ಕೋಳಿ ಸಾಕುವುದು(Poultry) ಮಾಮೂಲು. ಆದರೆ ಈಗ ಅದು ಇಲ್ಲ. ಒಂದು ಗಲೀಜು ಮಾಡುತ್ತವೆ. ಎರಡನೆಯದು ಮನೆ ಮುಂದಿನ ಸುಂದರ ಹೂದೋಟವನ್ನು ಕೆದಕಿ ಹಾಳುಗೈಯ್ಯುತ್ತವೆ. ಇನ್ನು ಪೇಟೆಯಲ್ಲಿ ದುಡ್ಡು ಕೊಟ್ಟರೆ ತಿನ್ನಬೇಕು, ನೆಂಟರಿಷ್ಟರು ಬಂದ ತಕ್ಷಣ ಕೋಳಿ ಸಿಗುತ್ತದೆ. ಮತ್ತೆ ಈ ಕೋಳಿ ಸಾಕುವ ತಾಪತ್ರಯ ಯಾಕೆ ಎಂದು. ಇತ್ತೀಚೆಗೆ ಕೋಳಿ ಸಾಕಾಣಿಕೆ ಬಹು ದೊಡ್ಡ ಉದ್ಯಮವಾಗಿ(Business) ಬೆಳೆದಿದೆ. ಅನೇಕ ರೈತರು(Farmers) ಇದನ್ನು ಉಪಕಸುಬಾಗಿ(sub-occupation) ಸಾಕಾಣಿಗೆ ಮಾಡುತ್ತಾರೆ. ಇನ್ನು ಕೆಲವರು ತಾವು ಸಾಕಬೇಕು ಎಂದು ಕೊಳ್ಳುತ್ತಾರೆ. ಅಂಥವರಿಗೆ ಒಂದಷ್ಟು ಮಾಹಿತಿಗಳ ಅಗತ್ಯವಿರುತ್ತದೆ. ಅಂಥ ಒಂದು ಬಹುಪಯುಕ್ತ ಮಾಹಿತಿ ಇಲ್ಲಿದೆ.

Advertisement

ನಾಟಿ ಅಥವಾ ಗಿರಿರಾಜ ಕೋಳಿಮರಿಗಳಿಗೆ ಒಂದು ಮರಿಗೆ ಒಂದು ವ್ಯಾಟ್‌ನಂತೆ ಲೆಕ್ಕ ಹಾಕಿ ಎಷ್ಟು ಮರಿ ಇದೆಯೋ ಅಷ್ಟು ವ್ಯಾಟ್ ಹಾಕಬೇಕು. 40 ವ್ಯಾಟ್ ಗಿಂತ ಕಡಿಮೆ ವ್ಯಾಟ್ ನ ಬಲ್ಬ್ ಬರುವುದಿಲ್ಲ.. ಮರಿ ಕಡಿಮೆ ಇದ್ದರೆ ಅಂದಾಜು 10 ಇಂಚಿನಷ್ಟು ಎತ್ತರದಲ್ಲಿ ಇರಲಿ. ಬೇಸಿಗೆ ಕಾಲದಲ್ಲಿ ಮಾತ್ರ ವಾತಾವರಣದ ಉಷ್ಣತೆ ನೋಡಿಕೊಂಡು ಹೀಟ್ ಕೊಡಿ. ಒಂದು ವೇಳೆ ಉಷ್ಣತೆ (Heat) ಹೆಚ್ಚಾದರೆ ಡಿ ಹೈಡ್ರೇಟ್ ಆಗಿ ಮರಿಗಳು ಕೇವಲ ನೀರು ಕುಡಿದು ಸಾಯಲಾಂರಬಿಸುತ್ತದೆ. 3 ದಿನ ರಾತ್ರಿ ಹಗಲು, ನಂತರದ 3 ದಿನ ರಾತ್ರಿ. ಒಟ್ಟಿಗೆ 6 ದಿನ ಹಾಕಿ. ಮೊದಲ ಎರಡು ದಿನ ಗ್ಲೂಕೋಸ್ ಪೌಡರ್ ಮಿಶ್ರಿತ ನೀರು ಕೊಡಿ. 3-4-5 enrofloxacin ಮದ್ದು ಸಣ್ಣ ಪ್ರಮಾಣದಲ್ಲಿ ಕೊಡಿ. ಒಂದು ಲೀಟರ್ ನೀರಿಗೆ ಎರಡು ಅಥವಾ ಮೂರು ml ಸಾಕಾಗುತ್ತದೆ.. ಈ ಮದ್ದು ಕೋಳಿಗ9 ಪರೆಂಗಿ (ಸಿಡುಬು) ರೋಗ ನಿರೋಧಕ ಶಕ್ತಿ ನೀಡುತ್ತದೆ.

ನಂತರ
7 ನೇ ದಿನ – F1 ಲಸಿಕೆ..
14 ನೇ ದಿನ – IBD ಲಸಿಕೆ..
21 ನೇ ದಿನ – Lasota ಲಸಿಕೆ..
ಲಸಿಕೆಯ ಮದ್ಯದಲ್ಲಿ ನಾಟಿ ಕೋಳಿಗಳಿಗೆ ಕಾಲುಗಳ ಹೆಚ್ಚಿನ ಬಲಕ್ಕಾಗಿ ಕ್ಯಾಲ್ಶಿಯಮ್ ಮತ್ತು ವಿಟಮಿನ್ ಮದ್ದುಗಳನ್ನು ನೀಡಿ. ಆಹಾರ Pre Starter ಮಾತ್ರ ನೀಡಿ. ಯಾಕೆಂದರೆ ಇದರಲ್ಲಿ ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಅಂಶ ಜಾಸ್ತಿ ಇದೆ. ಮುಂದಿನ ರೋಗನಿರೋದಕ ಬೆಳವಣಿಗೆಗೆ ಒಳ್ಳೆಯದಾಗುತ್ತದೆ.

ಯಾವುದೇ ರಾಸಾಯನಿಕ ಮದ್ದು ನೀಡಿದರೂ ಕೋಳಿಗಳಿಗೆ ಮಣ್ಣಿನಲ್ಲಿ ಸಿಗುವಷ್ಟು ಔಷಧಿಗಳು ಕೃತಕವಾಗಿ ಸಿಗಲು ಸಾಧ್ಯವೇ ಇಲ್ಲ. ಹಾಗೆಯೇ ಹಿಕ್ಕೆ ಗಟ್ಟಿಯಾಗಿ ಹಿಡಿದುಕೊಂಡರೆ ಬೆಲ್ಲದ ನೀರು ಕೊಡಿ. ರಕ್ತ ಬೇಧಿ ಆದರೆ ಚಹಾದ ನೀರು ಕೊಡಿ.

ಸತ್ಯ ವಿಷಯ ಎಂದರೆ ಎಷ್ಟೇ ಮದ್ದು ಕೊಟ್ಟರೂ ವೈರಸ್ ಸೋಂಕಾದರೆ ಉಳಿಯುವುದಿಲ್ಲ. ತೂಕಡಿಕೆ ಶುರುವಾದ ಕೋಳಿ ಉಳಿಯುವುದಿಲ್ಲ. ಕೊರಪೆ ಬಂದರೆ ಸಹಾ 50% ಭರವಸೆ ಅಷ್ಟೇ. ಕಾಲುಗಳಲ್ಲಿ ಬಲ ಕಳೆದುಕೊಂಡರೆ ಸಹ ಸರಿಯಾಗುವ ಸರಿಯಾಗುವ ಭರವಸೆ ಕೇವಲ 20% ಅಷ್ಟೇ. ಚಿಕ್ಕ ಪ್ರಾಯದಲ್ಲಿ ಸರಿಯಾದ ರೋಗನಿರೋದಕ ಔಷಧಿಗಳು ಬಿದ್ದರೆ ರೋಗ ಬರುವುದಿಲ್ಲ ಅಂತಲ್ಲ ಬಂದರೂ ತಾಳಿಕೊಂಡು ಸಣ್ಣಪುಟ್ಟ ಔಷಧಿಗಳಲ್ಲಿಯೇ ಸರಿಯಾಗುತ್ತದೆ. ಸಣ್ಣ ಮರಗಳಿಗೆ ಯಾವುದೇ ಕಾರಣಕ್ಕೂ ಒಂದು ತಿಂಗಳವರೆಗೆ Pre starter ಮಾತ್ರ ಹಾಕಿ. ಆದರೆ Starter ಹಾಕಬೇಡಿ. ಈ ವ್ಯತ್ಯಾಸದಿಂದಲೇ ಸಮಸ್ಯೆ ಶುರು ಆಗುತ್ತದೆ.

ಬರಹ :
ಸತೀಶ್‌ ಡಿ ಶೆಟ್ಟಿ
, ಕೃಷಿಕರು, ಕುಕುಟೋದ್ಯಮಿ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group