ಶುದ್ಧ ಬೆಲ್ಲವನ್ನು ಹೇಗೆ ಗುರುತಿಸುವುದು? | ಬೆಲ್ಲವು ಕಲಬೆರಕೆಯಾಗಿಲ್ಲ ಎಂದು ಗುರುತಿಸುವುದು ಹೇಗೆ..?

January 10, 2024
1:28 PM

ಅನೇಕ ಜನರು ಚಳಿಗಾಲದಲ್ಲಿ(Winter) ಬೆಲ್ಲವನ್ನು(Jaggery) ತಿನ್ನುತ್ತಾರೆ. ಅನೇಕ ಫಿಟ್‌ನೆಸ್(Fitness) ಫ್ರೀಕ್‌ಗಳು ಸಕ್ಕರೆಯ(Sugar) ಬದಲಿಗೆ ಬೆಲ್ಲವನ್ನು ಸೇವಿಸುತ್ತಾರೆ. ಬೆಲ್ಲ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ(Health Benefits). ಇದರ ಪೋಷಕಾಂಶಗಳು(Vitamin) ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತವೆ. ಇದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ಬೆಲ್ಲಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ ಶುದ್ಧ (ಸಾವಯವ) ಬೆಲ್ಲ(Organic Jaggaery ಮತ್ತು ರಾಸಾಯನಿಕಯುಕ್ತ ನಕಲಿ ಬೆಲ್ಲದ(Fake jaggery) ನಡುವಿನ ವ್ಯತ್ಯಾಸ ನಮಗೆ ತಿಳಿದಿದೆಯೇ?

Advertisement
Advertisement
Advertisement

ಆಧುನಿಕ ಯುಗದಲ್ಲಿ ಬೆಲ್ಲವನ್ನು ತಯಾರಿಸುವಾಗ ಅನೇಕ ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇಂಥ ಬೆಲ್ಲದಲ್ಲಿ ಪೋಷಕಾಂಶಗಳ ಕೊರತೆ ಇರುತ್ತದೆ. ಅಲ್ಲದೆ ಅದರಲ್ಲಿ ಉಳಿದುಕೊಂಡ ರಾಸಾಯನಿಕಗಳಿಂದ ಕೂಡ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೆಚ್ಚಿನ ಜನರಿಗೆ ಬೆಲ್ಲದ ಬಗ್ಗೆ ಜ್ಞಾನವಿರುವುದಿಲ್ಲ, ಯಾವುದೇ ಪದಾರ್ಥಗಳನ್ನು ಬಣ್ಣ ಆಕಾರ ನೋಡಿ ಖರೀದಿಸುವ ವಿಚಿತ್ರ ಅಭ್ಯಾಸವಿರುತ್ತದೆ. ಆದ್ದರಿಂದ, ಬೆಲ್ಲವು ಆಕರ್ಷಕವಾಗಿ ಕಾಣುವಂತೆ ಮಾಡಲು ಅನೇಕ ರಾಸಾಯನಿಕಗಳನ್ನು ಬಳಸಿ ಅದನ್ನು ಬ್ಲೀಚ್ ಮಾಡಲಾಗುತ್ತದೆ. ಇಂತಹ ಬೆಲ್ಲ ಸಕ್ಕರೆಗೆ ಸಮಾನ. ಅಲ್ಲದೆ ಕೆಲವು ಕಾಳು ಸಂತೆ ಕೋರರು ಬೆಲ್ಲ ತಯಾರಿಸುವಾಗ ಅದರಲ್ಲಿ ಸಕ್ಕರೆಯನ್ನು ಬೆರೆಸಿ ತಯಾರಿಸುತ್ತಾರೆ.

Advertisement

ಇಂಥ ರಾಸಾಯನಿಕಯುಕ್ತ ಅತಿ ಪರಿಷ್ಕರಿಸಿದ ಹಾಗೂ ನಕಲಿ ಬೆಲ್ಲವು ಇಂದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದೆ. ನಕಲಿ ಬೆಲ್ಲದ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಾಗುತ್ತವೆ. ಇದಲ್ಲದೆ, ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಬೆಲ್ಲವನ್ನು ಖರೀದಿಸುವಾಗ ಅದನ್ನು ಪರೀಕ್ಷಿಸಿದ ನಂತರವೇ ಬೆಲ್ಲವನ್ನು ಖರೀದಿಸಿ.

ಕಲಬೆರಕೆ ಬೆಲ್ಲವನ್ನು ಗುರುತಿಸುವುದು ಹೇಗೆ? : ಬಣ್ಣದಿಂದಲೇ ವ್ಯತ್ಯಾಸ ತಿಳಿಯಬಹುದು… ಶುದ್ಧ ಬೆಲ್ಲವನ್ನು ಅದರ ಬಣ್ಣದಿಂದ ಗುರುತಿಸಬಹುದು. ಶುದ್ಧ ಬೆಲ್ಲವು ಕಂದು, ಕಡು ಕಂದು ಅಥವಾ ಕಪ್ಪುಕಂದು ಬಣ್ಣವನ್ನು ಹೊಂದಿರುತ್ತದೆ. ನೋಡಲು ಅಷ್ಟೊಂದು ಆಕರ್ಷಕವಾಗಿ ಕಾಣುವುದಿಲ್ಲ. ಪೂರ್ಣ ಬೆಲ್ಲದ ಬೆಂಟೆ ಸಮಾನ ಬಣ್ಣದ್ದಾಗಿರುತ್ತದೆ. ಇದು ಕಪ್ಪು, ಬಿಳಿ ಅಥವಾ ಇತರ ಬಣ್ಣದ ಕಲೆಗಳನ್ನು ತೋರಿಸುವುದಿಲ್ಲ. ಆದರೆ, ರಾಸಾಯನಿಕಯುಕ್ತ ಅಥವಾ ಕಲಬೆರಕೆ ಬೆಲ್ಲವು ಹಳದಿ, ತಿಳಿ ಹಳದಿ ಅಥವಾ ಬಿಳಿ ಮತ್ತು ಹಳದಿ ಬಣ್ಣ ಮಿಶ್ರಿತವಾಗಿರುತ್ತದೆ. ನೋಡಲು ಚಂದ ಹಾಗೂ ಆಕರ್ಷಕವಾಗಿರುತ್ತದೆ. ಸಂಪೂರ್ಣ ಬೆಂಟೆ ಒಂದೇ ಸಮನಾದ ಬಣ್ಣದ್ದು ಆಗಿರಬಹುದು ಅಥವಾ ಇಲ್ಲದೇ ಇರಬಹುದು. ಇದರಲ್ಲಿ ಸಣ್ಣ ಬಿಳಿ ಕಣಗಳು ಅಥವಾ ಕಲೆಗಳು ಕಂಡು ಬರಬಹುದು. ಹಾಗಾಗಿ ಬೆಲ್ಲ ಕೊಳ್ಳುವಾಗ ಅದರ ಬಣ್ಣವನ್ನು ಗಮನಿಸಿ.

Advertisement

ಕೊಳ್ಳುವ ಮೊದಲು ಬೆಲ್ಲದ ರುಚಿ ನೋಡಿ: ಬೆಲ್ಲದ ರುಚಿಯಿಂದ ಬೆಲ್ಲವು ಕಲಬೆರಕೆಯಾಗಿದೆಯೇ ಎಂದು ನೀವು ಪರಿಶೀಲಿಸಬಹುದು. ಶುದ್ಧ ಬೆಲ್ಲದ ರುಚಿ ಸಕ್ಕರೆಯಷ್ಟು ಸಿಹಿಯಾಗಿರುವುದಿಲ್ಲ. ಕಿಂಚಿತ್ತು ಹುಳಿತನದ ಅನುಭವ ಕೂಡ ಆಗಬಹುದು. ಶುದ್ಧ ಬೆಲ್ಲಕ್ಕೆ ಕಬ್ಬಿನ ವಿಶಿಷ್ಟ ವಾಸನೆ ಇರಬಹುದು. ಬೆಲ್ಲವನ್ನು ತಿನ್ನುವಾಗ, ಅದು ಕಬ್ಬಿನ ಸಿಹಿ ಪರಿಮಳವನ್ನು ನೀಡುತ್ತದೆ. ರಾಸಾಯನಿಕಯುಕ್ತ ಬೆಲ್ಲಕ್ಕೆ ಹೆಚ್ಚು ವಾಸನೆ ಇರುವುದಿಲ್ಲ ಅಥವಾ ಕಲಬೆರಕೆ ಬೆಲ್ಲಕ್ಕೆ ಕಬ್ಬಿನ ಪರಿಮಳ ಇರುವುದಿಲ್ಲ. ಕಲಬೆರಕೆ ಇದ್ದರೆ ಯಾವುದೇ ಪ್ರಕಾರದ ಭಿನ್ನ ವಾಸನೆ ಹೊಂದಿರಬಹುದು. ಆದ್ದರಿಂದ ರುಚಿ ಮತ್ತು ವಾಸನೆಯ ಆಧಾರದ ಮೇಲೆ ನಿಜವಾದ ಮತ್ತು ನಕಲಿ ಬೆಲ್ಲದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ.

ನೈಜ ಬೆಲ್ಲವನ್ನು ನೀರಿನಲ್ಲಿ ಪರೀಕ್ಷಿಸಿ: ಬೆಲ್ಲವು ಹೆಚ್ಚು ಜಿಗುಟಾದ ಮತ್ತು ಗಟ್ಟಿಯಾಗಿರುತ್ತದೆ, ಅದು ಶುದ್ಧವಾಗಿರುತ್ತದೆ. ನಿಜವಾದ ಬೆಲ್ಲವನ್ನು ಗುರುತಿಸಲು ನೀರಿನಲ್ಲಿ ಬೆಲ್ಲವನ್ನು ಹಾಕಿ. ಬೆಲ್ಲವು ನೀರಿನಲ್ಲಿ ಸಂಪೂರ್ಣವಾಗಿ ಕರಗಿದರೆ, ಬೆಲ್ಲವು ಅಸಲಿ, ಅಥವಾ ಕರಗದಿದ್ದರೆ ಅದು ಕಲಬೆರಕೆ ಎಂದು ಅರ್ಥಮಾಡಿಕೊಳ್ಳಿ. ಸಾವಯವ ಬೆಲ್ಲವನ್ನು ನೀರಿನಲ್ಲಿ ಕರಗಿಸಿದಾಗ ನೀರಿಗೆ ಕಂದು ಬಣ್ಣ ಬರುತ್ತದೆ ಅದೇ ರಾಸಾಯನಿಕಯುಕ್ತ ಅಥವಾ ಕಲಬೆರಕೆ ಬೆಲ್ಲವನ್ನು ನೀರಿನಲ್ಲಿ ಕರಗಿಸಿದರೆ ನೀರಿಗೆ ತಿಳಿ ಬಣ್ಣ ಅಥವಾ ಭಿನ್ನವಾದ ಬಣ್ಣ ಬರಬಹುದು.

Advertisement

ಬೆಲ್ಲ ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು : ಬೆಲ್ಲದಲ್ಲಿ ಹಲವು ಪೋಷಕಾಂಶಗಳಿವೆ. ಇದು ಸೆಲೆನಿಯಮ್, ಕಬ್ಬಿಣ, ಫೋಲಿಕ್ ಆಮ್ಲ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಘಟಕಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ.

ತಂಪು ಹವಾಮಾನದಲ್ಲಿ, ಜನರು ಉಷ್ಣ ಗುಣಲಕ್ಷಣವುಳ್ಳ ಆಹಾರವನ್ನು ತಿನ್ನುತ್ತಾರೆ. ಬೆಲ್ಲವು ಉಷ್ಣ ಗುಣವನ್ನೂ ಹೊಂದಿದೆ. ಇದರಿಂದಾಗಿ ದೇಹವು ಶೀತದಿಂದ ಹೆಚ್ಚು ಬಳಲುವುದಿಲ್ಲ. ಬೆಲ್ಲದಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲವು ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ. ಸಾವಯುವ ಬೆಲ್ಲದ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟದಲ್ಲಿ ಏರುಪೇರು ಉಂಟಾಗುವುದಿಲ್ಲ. ಆಯಾಸಗೊಂಡಾಗ ಅಥವಾ ಪಳಲಿಕ್ಕೆಯಾದಾಗ ಬೆಲ್ಲದೊಂದಿಗೆ ನೀರನ್ನು ಸೇವಿಸಿದರೆ ತಕ್ಷಣ ಶಕ್ತಿಯನ್ನು ನೀಡುತ್ತದೆ ಅಲ್ಲವೇ ಉತ್ಸಾಹವನ್ನು ವರ್ಧಿಸುತ್ತದೆ.

Advertisement

ಬರಹ: ಡಾ. ಕುಲಕರ್ಣಿ ಪಿ. ಎ.

Many people eat jaggery in winter. Many fitness freaks consume jaggery instead of sugar. There are many health benefits of eating jaggery. Its nutrients (Vitamin) keep the body warm from inside. In addition, the immune system is strengthened. So the demand for jaggery increases in winter. But do we know the difference between organic jaggery and fake jaggery?

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror