ಚಹಾ ಹೇಗೆ ಮಾಡಬೇಕು ಮತ್ತು ಅದರ ವೈಶಿಷ್ಟ್ಯತೆ ಏನು..? ಆರೋಗ್ಯಕ್ಕೆ ಚಹಾ ಕುಡಿಯದಿದ್ದರೆನೇ ಒಳ್ಳೆಯದು…!

October 19, 2023
2:57 PM

ಯಾವುದೇ ಔಷಧಿ(Medicine) ಆಹಾರ(Food)ದಲ್ಲಿ ಕಂಡುಕೊಳ್ಳಲು ಮೊದಲು ಸಸ್ಯಾಹಾರಿ(Veg) ಅಥವಾ ಮಾಂಸಾಹಾರಿ(Non-veg) ಎಂದು ಪರಿಗಣಿಸಬೇಕು. ಎಲ್ಲಾ ಔಷಧ ಆಹಾರ ಇಬ್ಬರಿಗೆ ಒಂದೇ ತೆರನಾಗಿ ಇರುವುದಿಲ್ಲ. ಮಾಂಸಾಹಾರಿಗಳ ಆಹಾರ ಪದ್ಧತಿ ಸಸ್ಯಾಹಾರಿ ಗಳಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಚಹಾ(Tea) ಪಿತ್ತ ಧಾತು ಹೊಂದಿರುವುದರಿಂದ ಅದನ್ನು ಸಕ್ಕರೆ ಅಥವಾ ಹಾಲು ಇಲ್ಲದೆ ಸೇವಿಸುವುದು ಅಪಾಯಕಾರಿ. ಸಕ್ಕರೆ ಮತ್ತು ಹಾಲು ಪಿತ್ತಹರ. ತ್ರಿದೋಷ ಶಮನಕ್ಕೆ ಸಹಕಾರಿ. ಚಹಾ ದಲ್ಲಿರುವ ಪಿತ್ತವನ್ನು ಶಮನ ಮಾಡಲು ಸಕ್ಕರೆ ಹಾಲು ಉಪಕಾರಿ. ಮಧುಮೇಹ ಇರುವವರು ಸಕ್ಕರೆ ಮತ್ತು ಹಾಲು ರಹಿತ ಚಹಾ ಸೇವನೆ ಒಳ್ಳೆಯದಲ್ಲ.

Advertisement
Advertisement
Advertisement

ಬ್ಲಾಕ್ ಟೀ ಪಿತ್ತ ಅಂಶವನ್ನು ಹೆಚ್ಚಿಸಿ ಯಕೃತ್ ಗೆ ತೊಂದರೆಯುಂಟು ಮಾಡಿ ಮೇದೋಜೀರಕ ಗ್ರಂಥಿಗೆ ತೊಂದರೆ ಆಗುತ್ತದೆ. ಅದರಿಂದ ಮಧುಮೇಹ ಜೊತೆಗೆ ಇನ್ನಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಲು ಶರ್ಕರ ವಾತ ಪಿತ್ತ ಕಫ ಶಮನ ಧಾತು ಹೊಂದಿರುವುದರಿಂದ ಯಾವ ತೊಂದರೆಯನ್ನೂ ಮಾಡುವುದಿಲ್ಲ. ಜಾಸ್ತಿ ಸಕ್ಕರೆ ಮತ್ತು ಗಟ್ಟಿ ಹಾಲು ಜೀರ್ಣ ಕ್ರಿಯೆಗೆ ತೊಂದರೆ ಮಾಡಬಹುದು. ಶುಂಠಿ ಮಸಾಲೆ ಟೀ ಮಾಂಸಾಹಾರಿ ಆಹಾರ ಸೇವಿಸುವವರಿಗೆ ಉಪಯೋಗ ಆಗಬಹುದು.

Advertisement

ಸಸ್ಯಾಹಾರಿಗಳಿಗೆ ಕರುಳಿನ ಊತ ಉಂಟಾಗಿ ಮಧುಮೇಹ ಉಂಟಾಗುತ್ತದೆ. ಸಕ್ಕರೆ ಸಹಿತ ಟೀ ಸೇವನೆಯಿಂದ ಸಕ್ಕರೆ ಅಂಶದಷ್ಟು ರಕ್ತದಲ್ಲಿ ಜಾಸ್ತಿ ಆಗಬಹುದು. ಆದರೆ ಸಕ್ಕರೆ ರಹಿತ ಟೀ ಸೇವನೆಯಿಂದ ಸಕ್ಕರೆಯ ಅಂಶ ಕ್ಕಿಂತ ನೂರು ಪಟ್ಟು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ. ಕಾರಣ ಪಿತ್ತ ದೋಷ, ಯಕೃತ್ ತೊಂದರೆ. ಸಕ್ಕರೆ ರಹಿತ ಟೀ ಸೇವನೆಯಿಂದ ನರಗಳ ಸೆಳೆತ, ಕಾಲು ಸೆಳೆತ ಉಂಟಾಗಿ ಅದಕ್ಕೇ ಔಷದಿ ತಗೊಂಡು ಅದರಿಂದ ದುಷ್ಪರಿಣಾಮ ಆಗಿ ಮತ್ತಷ್ಟು ಅನಾರೋಗ್ಯ ಸಮಸ್ಯೆ ಎದುರಿಸುವಂತಾಗ ಬಹುದು. ಹಾಗಾಗಿ ವೇದ ವಿಜ್ಞಾನ ಮತ್ತು ಆಹಾರ ಪದ್ಧತಿ ತಿಳಿದಿರುವ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಆಹಾರದಲ್ಲಿ ಔಷದಿ ತಿಳಿದು ಕೊಳ್ಳುವುದು ಉತ್ತಮ.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ನಾವು ಇಂದಿನ ಆಧುನಿಕ ಯುಗದಲ್ಲಿ ಸೇವಿಸುವ black tea ಅಥವಾ ಹಾಲು ಸಕ್ಕರೆ ಮಿಶ್ರಿತ ಚಹಾದ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಶುಂಠಿ ಪುದಿನ ತುಳಸಿ ಮೊದಲಾದ ಗಿಡಮೂಲಿಕೆಗಳನ್ನು ಉಪಯೋಗಿಸಿ ತಯಾರಿಸಿದ ಚಹಾ ಸೇವನೆ ಆರೋಗ್ಯಕರ. ಇದು ನಮ್ಮ ಜೀರ್ಣಕ್ರಿಯೆಯನ್ನು ಉತ್ತಮ ಗೊಳಿಸುವುದು. ಚಹಾ ಪಿತ್ತವೃದ್ಧಿ ಮಾಡುತ್ತದೆ ಪಿತ್ತ ಪ್ರಕೃತಿಉಳ್ಳವರು ಅತಿಯಾದ ಚಹಾ ಸೇವನೆ ಮಾಡಿದರೆ ಪಿತ್ತ ಜಾಸ್ತಿ ಆಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗ ಬಹುದು ಚಹಾ ದಲ್ಲಿರುವ ಟೆನಿನ್ ಅಂಶ ನಮ್ಮ ದೇಹದಲ್ಲಿ hemoglobin ಕಡಿಮೆ ಮಾಡುತ್ತದೆ. ಅತಿಯಾದ ಚಹಾ ಸೇವನೆ ಒಳ್ಳೇದಲ್ಲ.

Advertisement

– (ಸಂಗ್ರಹ)

Black tea increases the content of bile and disturbs the liver and disturbs the pancreas. It causes diabetes and other complications. Milk sugar does not cause any problem as it has vata pitta kapha samaana dhatu. Too much sugar and hard milk can disturb digestion. Ginger spice tea can be beneficial for non-vegetarians.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ಜೀವನಶೈಲಿ ಬದಲಾವಣೆ ಮೂಲಕ ಮಧುಮೇಹ ನಿಯಂತ್ರಣ
November 15, 2024
11:20 PM
by: The Rural Mirror ಸುದ್ದಿಜಾಲ
ಪೋಷಕಾಂಶ ಹೊಂದಿರುವ ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ
November 14, 2024
6:00 AM
by: The Rural Mirror ಸುದ್ದಿಜಾಲ
ಬೆಂಗಳೂರು | ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ
November 10, 2024
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror