ವಿಷ ರಹಿತ ಅಡಿಕೆ ದಾಸ್ತಾನು | ಪುತ್ತೂರಿನಲ್ಲಿ ಮಾಹಿತಿ ಕಾರ್ಯಕ್ರಮ | ಕೃಷಿ ಉತ್ಪನ್ನಗಳ ದಾಸ್ತಾನಿಗೆ ವಿಷ ರಹಿತ ವ್ಯವಸ್ಥೆ ಅಗತ್ಯವಿದೆ

February 2, 2024
10:03 PM
ಅಡಿಕೆ ಹಾಗೂ ಇತರ ಕೃಷಿ ಉತ್ಪನ್ನಗಳನ್ನು ವಿಷ ರಹಿತವಾಗಿ ದಾಸ್ತಾನು ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಅಡಿಕೆ ಹಾಗೂ ಕೃಷಿ ಉತ್ಪನ್ನಗಳ ಕೊಯ್ಲು ನಂತರ ವೈಜ್ಞಾನಿಕ ದಾಸ್ತಾನು ಕೂಡಾ ಅತೀ ಮುಖ್ಯವಾದ ವಿಷಯ. ಅನೇಕ ಸಮಯಗಳಿಂದ ವಿವಿಧ ಪ್ರಯೋಗವನ್ನು ಕೆಲವು ಕೃಷಿಕರು ಮಾಡುತ್ತಿದ್ದಾರೆ. ಇದೀಗ ವಿನೂತನ ತಂತ್ರಜ್ಞಾನ ಬ್ಯಾಗ್‌ ಬಗ್ಗೆ ಮಾಹಿತಿ ಕಾರ್ಯಕ್ರಮ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಪುತ್ತೂರಿನ ಚುಂಚಶ್ರೀ ಸಭಾಭವನದಲ್ಲಿ ಶುಕ್ರವಾರ ನಡೆಯಿತು.ಮುಂದೆ ಓದಿ
ಸಭೆಯ ಅಧ್ಯಕ್ಷತೆಯನ್ನು  ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ ವಹಿಸಿದ್ದರು. ಸಭೆಯಲ್ಲಿ ವಿಟ್ಲದ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ, ಕೃಷಿಕ ಹಾಗೂ ಸಿಟಿ ಆಸ್ಪತ್ರೆಯ ವೈದ್ಯ ಡಾ. ಸೂರ್ಯನಾರಾಯಣ ಹಾಗೂ ಗ್ರೈನ್‌ ಪ್ರೋ ಸಂಸ್ಥೆಯ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವಿಭಾಗದ ಮಾರ್ಕೆಂಟಿಗ್‌ ಮುಖ್ಯಸ್ಥ ಗೋಪಿನಾಥ್‌ ವಡಿವೆಲ್‌ ಮಾಹಿತಿ ನೀಡಿದರು. ಮುಂದೆ ಓದಿ
ವಿಟ್ಲದ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಮಾತನಾಡಿ, ಅಡಿಕೆ ಹಾಗೂ ಕೃಷಿಉತ್ಪನ್ನಗಳನ್ನು  ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡಿ ಕೊಠಡಿಗಳಲ್ಲಿ ದಾಸ್ತಾನು ಮಾಡುವ ಬಗ್ಗೆ ಪಿಂಗಾರ ಸಂಸ್ಥೆಯು ನಡೆಸುತ್ತಿರುವ ವಿಧಾನಗಳು ಹಾಗೂ ಅಧ್ಯಯನಗಳ ಬಗ್ಗೆ ಮಾಹಿತಿ ನೀಡಿದರು.  ಕೃಷಿಕ ಹಾಗೂ ಸಿಟಿ ಆಸ್ಪತ್ರೆಯ ವೈದ್ಯ ಡಾ. ಸೂರ್ಯನಾರಾಯಣ ಮಾತನಾಡಿ, ಅಡಿಕೆಯನ್ನು ಕರ್ಪೂರ ಬಳಸಿ ಡ್ರಮ್‌ಗಳಲ್ಲಿ ಶೇಖರಣೆ ಮಾಡುವ ವಿಧಾನ ಹಾಗೂ ಅದರಲ್ಲಿ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು. ಗ್ರೈನ್‌ ಪ್ರೋ ಸಂಸ್ಥೆಯ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವಿಭಾಗದ ಮಾರ್ಕೆಂಟಿಗ್‌ ಮುಖ್ಯಸ್ಥ ಗೋಪಿನಾಥ್‌ ವಡಿವೆಲ್‌ ಮಾತನಾಡಿ, ವಿಶೇಷ ವಿನ್ಯಾಸದ ಬ್ಯಾಗ್‌ಗಳು ಹಾಗೂ ಕೊಕೂನ್‌ ಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ವಿದೇಶಗಳಲ್ಲಿ ಇಂತಹ ಬ್ಯಾಗ್‌ ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಕೂಡಾ ಈಚೆಗೆ ಈ ಮಾದರಿಯ ದಾಸ್ತಾನು ಬಗ್ಗೆ ಕೃಷಿಕರು ಆಸಕ್ತರಾಗಿದ್ದಾರೆ ಎಂದರು.ಮುಂದೆ ಓದಿ
ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಮಾತನಾಡಿ, ಅಡಿಕೆ ಬೆಳೆಗಾರರಿಗೆ ದಾಸ್ತಾನು ಹಾಗೂ ಅಡಿಕೆ ಗುಣಮಟ್ಟ ಕಾಪಾಡುವುದು ಈಗ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಹೊಸ ಮಾದರಿಯ ಪ್ರಯತ್ನಗಳು ಅಡಿಕೆ ದಾಸ್ತಾನಿನ ಬಗ್ಗೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಮುಂದೆ ಓದಿ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ  ಸ್ವಾಗತಿಸಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror