ಕೊರೋನಾ ಕಾರಣದಿಂದ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಮಕ್ಕಳಿಗೆ ಸಂಪೂರ್ಣ ನಿಯಂತ್ರಣದಲ್ಲಿ ಇದ್ದ ಮೊಬೈಲ್ ಬಳಕೆ ಈಗ ಅನಿವಾರ್ಯವಾಗಿದೆ. ಮೊಬೈಲ್ ಮಕ್ಕಳ ಕಲಿಕೆಯ ಉಪಕರಣದ ಸಾಲಿಗೆ ಈಗ ಸೇರಿದೆ.
ಆದರೆ ಇಂಟರ್ನೆಟ್ ಬಳಸುವ ಮಕ್ಕಳು ಎಲ್ಲಿ ದಾರಿ ತಪ್ಪುವರೋ ಎಂಬ ಆತಂಕ ಪೋಷಕರಿಗೆ ನಿತ್ಯವೂ ಕಾಡುತ್ತದೆ. ಇದಕ್ಕಾಗಿ ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದಕ್ಕಾಗಿ ಅನೇಕ ಅಪ್ಲಿಕೇಶನ್ ಇವೆ. ಅದರಲ್ಲಿ ಒಂದು ಅಪ್ಲಿಕೇಶನ್- ಗೂಗಲ್ ಫ್ಯಾಮಿಲಿ ಲಿಂಕ್ ಫಾರ್ ಪರೆಂಟ್ಸ್, ಫ್ಯಾಮಿಲಿ ಲಿಂಕ್ ಫಾರ್ ಚಿಲ್ಡ್ರನ್ ಅಂಡ್ ಟೀನೇಜರ್ಸ್. ಅಪ್ಲಿಕೇಶನ್ ನಿಂದಾಗಿ ತಮ್ಮ ಮಕ್ಕಳು ಯಾವ ಆಪ್ ಬಳಸುತ್ತಿದ್ದಾರೆ, ಎಷ್ಟು ಸಮಯ ಅಪ್ಲಿಕೇಶನ್ನಲ್ಲಿ ಕಳೆಯುತ್ತಿದ್ದಾರೆ , ಜೊತೆಗೆ ಯಾವ ಹೊಸ ಹೊಸ ಅಪ್ಲಿಕೇಶನ್ಸ್ ಡೌನ್ಲೋಡ್ ಮಾಡಿದರು, ಆ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ತಿಳಿಯಬಹುದು. ಅಲ್ಲದೆ ಮಕ್ಕಳ ಲೋಕೇಶ್ ಅನ್ನು ಜಿ ಪಿ ಆರ್ ಎಸ್ ಮೂಲಕ ತಿಳಿಯಬಹುದು. ಇದರ ಮಾಹಿತಿಯ ಲಿಂಕ್ ಇಲ್ಲಿದೆ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel