ಮೊಳಕೆ ಬರಿಸಿದ ಕಾಳುಗಳನ್ನು ಹೇಗೆ ಬಳಸುವುದು? | ಅತಿಯಾದ ಮೊಳಕೆ ಅಪಾಯಕಾರಿಯೇ?

April 20, 2024
5:19 PM

ನಮ್ಮ ನಿಯಮಿತ ಆಹಾರದ(Food) ಪ್ರಮುಖ ಭಾಗವೆಂದರೆ ಗೋಧಿ(Wheat), ಅಕ್ಕಿ(Rice), ಬೇಳೆ, ಸಜ್ಜೆ, ಕೆಲವು ಸಿರಿಧಾನ್ಯಗಳು(Serials) ಮತ್ತು ಬೇಳೆಕಾಳುಗಳಾದ(Pulses) ಹೆಸರು ಚೆನ್ನಂಗಿ, ಮಟ್ಕಿ ಮತ್ತು ಇತರ ಅನೇಕ ಕಾಳುಗಳು. ಇತ್ತೀಚಿನ ದಿನಗಳಲ್ಲಿ, ಧಾನ್ಯಗಳನ್ನು ಮೊಳಕೆಯೊಡಿಸಲು(Sprouted) ಕೆಲವು ವಿಶೇಷ ರೀತಿಯ ಪಾತ್ರೆಗಳು ಸಹ ಲಭ್ಯವಿದೆ. ದ್ವಿದಳ ಧಾನ್ಯಗಳ ಮೊಳಕೆಯೊಡೆಯುವುದು ನೈಸರ್ಗಿಕ ಪ್ರಕ್ರಿಯೆ.

Advertisement

ಈ ದ್ವಿದಳ ಧಾನ್ಯಗಳು ಡಬ್ಬಿಯಲ್ಲಿ ಮತ್ತು ಒಣಗಿರುವವರೆಗೆ, ಅವು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುತ್ತವೆ. ಅವು ಮೊಳಕೆಯೊಡೆಯಲು ಕೆಲವು ಪರಿಸ್ಥಿತಿಗಳು ಅವಶ್ಯಕತೆ ಇದೆ. ಆರ್ದ್ರತೆ ಮತ್ತು ಕತ್ತಲೆ ಅದರ ಪ್ರಮುಖ ಭಾಗಗಳು! ನಾವು ಧಾನ್ಯಗಳನ್ನು ನೀರಿನಲ್ಲಿ ನೆನೆಸುತ್ತೇವೆ. ನಂತರ ಅವು ಮೊಳಕೆಯೊಡೆಯುತ್ತವೆ ಮತ್ತು ದಿನ ದಿನಕ್ಕೆ ಬೆಳೆಯಲು ಪ್ರಾರಂಭಿಸುತ್ತವೆ. ಮೊಳಕೆಯೊಡೆಯುವ ಮೊದಲು, ಧಾನ್ಯದಲ್ಲಿನ ಪಿಷ್ಟವು ನಿಧಾನವಾಗಿ ಪ್ರೋಟೀನ್ ಆಗಿ ಬದಲಾಗುತ್ತದೆ; ಅದೇ ಸಮಯದಲ್ಲಿ, ‘ಬಿ’, ‘ಸಿ’ ಅಥವಾ ಕೆಲವೊಮ್ಮೆ ‘ಇ’ ವಿಟಮಿನ್‌ಗಳ ಪ್ರಮಾಣವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಮೊಳಕೆಯೊಡೆದ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯವೂ ಹೆಚ್ಚಾಗುತ್ತದೆ. ಆದರೆ ಆದರೆ ನಾವು ಈ ಕಾಳು ಮೊಳಕೆಯನ್ನು ಎಷ್ಟು ಬೆಳೆಯಲು ಬಿಡಬೇಕು?

ಮೊಳಕೆಯೊಡೆದ ಬೇಳೆಕಾಳುಗಳಲ್ಲಿ ಜೀವಸತ್ವಗಳ ಪ್ರಮಾಣವು ಹೆಚ್ಚಾಗಿರುತ್ತದೆ ಎಂಬುದು ನಿಜವಾದರೂ, ಈ ಕ್ರಮವು ಮತ್ತಷ್ಟು ಹೆಚ್ಚಾದರೆ, ವಿಟಮಿನ್ಗಳ ಪ್ರಮಾಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಮತ್ತು ಕೆಲವೊಮ್ಮೆ ದೀರ್ಘಕಾಲ ಮೊಳಕೆಯೊಡೆದ ಬೇಳೆಕಾಳುಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆಹಾರದಲ್ಲಿ ಯಾವುದೇ ಬೇಳೆಕಾಳುಗಳು ಸ್ವಲ್ಪ ಮೊಳಕೆ ಬಂದರೆ ಅವುಗಳನ್ನು ಬಳಸುವುದು ಉತ್ತಮ! ಅಂದರೆ, ಮೊಳಕೆಯು ಸುಮಾರು ಎರಡರಿಂದ ಮೂರು ಮಿಮಿ ಉದ್ದ ಬೆಳೆದರೆ ಸಾಕು. ಅಲ್ಲದೆ, ಅಂಕುರಿಸುವ ಪರಿಸ್ಥಿತಿಗಳನ್ನು ನಾವು ತಿಳಿದಿರುವ ಕಾರಣ, ನಾವು ಅದಕ್ಕಾಗಿ ಪ್ರತ್ಯೇಕ ಬಾಕ್ಸ್ ಅನ್ನು ಖರೀದಿಸಬೇಕಾಗಿಲ್ಲ.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ
ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!
July 3, 2025
2:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-07-2025 | ಇಂದು ಸಾಮಾನ್ಯ ಮಳೆ | ಜು.6 ರ ನಂತರ ಮಲೆನಾಡು-ಕರಾವಳಿ ಹವಾಮಾನ ಹೇಗೆ ? | ಜು.4 ರಿಂದ ಒಳನಾಡು ವಾತಾವರಣ ಹೇಗೆ ?
July 3, 2025
12:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group