ಭಾರತೀಯ ಸೇನೆಯ ಯೋಧ ಅನ್ಮೋಲ್ ಚೌಧರಿ ಅವರ ಡೇರ್‌ಡೆವಿಲ್ ಸಾಹಸನ್ನು ಪ್ರದರ್ಶಿಸುವ ವೀಡಿಯೋಗಳನ್ನು ತನ್ನ ಇನ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನ್ಮೋಲ್ ತನ್ನ ಸೇನಾ ಸಮವಸ್ತ್ರವನ್ನು ಧರಿಸಿ ತನ್ನ ಸಾಹಸವನ್ನು ಒಂದರ ನಂತರ ಒಂದರಂತೆ ಪ್ರದರ್ಶಿಸುತ್ತಿರುವ ವೀಡಿಯೋ ಜನರನ್ನು ಬೆರಗು ಮೂಡಿಸಿದೆ.
ಅನ್ಮೋಲ್ ಅವರು ಮರದ ಬಿದಿರಿನ ಮೇಲೆ ನಿಂತು ತನ್ನನ್ನು ತಾನೇ ಸಮತೋಲನಗೊಳಿಸಿಕೊಳ್ಳುತ್ತಿರುವುದು, ಮೂರು ಗಾಜಿನ ಬಾಟಲಿಗಳ ಮೇಲೆ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಇಟ್ಟು ಪುಷ್‌ಅಪ್ ಮಾಡುವುದು, ತನ್ನ ಬೆನ್ನಿನ ಮೇಲೆ ಮೂವರು ಸೈನಿಕರನ್ನು ನಿಲ್ಲಿಸಿ ಇವರು ಪುಷ್‌ಅಪ್ ಮಾಡುವುದು ಇತ್ಯಾದಿ ಸಾಹಸದ ವೀಡಿಯೋಗಳನ್ನು ಅನ್ಮೋಲ್ ಅವರು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಎಲ್ಲರನ್ನು ಬೆರಗು ಮೂಡಿಸುವ ವೀಡಿಯೋ ಎಂದರೆ ನೀರು ತುಂಬಿರುವ ನಾಲ್ಕು ಬಕೆಟ್‌ಗಳ ಮೇಲೆ ಓಡುತ್ತೀರುವ ವೀಡಿಯೋ ಜನರನ್ನು ಆಶ್ಚರ್ಯಗೊಳಿಸಿದೆ.
ಅನ್ಮೋಲ್ ಅವರ ಸಾಹಸ ವೀಡಿಯೋಗಳಿಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel