ಟ್ರೋಫಿ ಗೆದ್ದ RCB ಮಹಿಳಾ ತಂಡಕ್ಕೆ ಕೋಟಿ ಕೋಟಿ ಬಹುಮಾನ | ಆರ್‌ಸಿಬಿ ಮಹಿಳಾ ಮಣಿಗಳು ದೋಚಿದ ಬಹುಮಾನದ ಮೊತ್ತ ಎಷ್ಟು?

March 19, 2024
11:00 AM

ಈ ಸಲ ಕಪ್‌(Cup) ನಮ್ಮದೇ.. ಈ ಸಲ ಕಪ್‌ ನಮ್ಮದೆ ಅಂತ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌(RCB) ಅಭಿಮಾನಿಗಳು(Fans) ಸತತ 16 ವರುಷಗಳಿಂದ ಕಾಯುವಿಕೆಯ ಕನಸು ಈ ಬಾರಿ ನನಸು ಮಾಡಿದ್ದಾರೆ ಮಹಿಳಾ ಮಣಿಯರು. ಮಹಿಳಾ ಪ್ರೀಮಿಯರ್‌ ಲೀಗ್‌ನ (Women’s Premier League) ಫೈನಲ್‌ ಪಂದ್ಯದಲ್ಲಿ(Final match) ಡೆಲ್ಲಿ ಕ್ಯಾಪಿಟಲ್ಸ್‌(Delhi capitals) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು(Win) ಸಾಧಿಸಿದೆ. ಹುಡುಗರ ತಂಡ ಗೆಲ್ಲದಿದ್ದರೇನು ಮಹಿಳಾ ತಂಡವಾದರು ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಮನ ತಣಿಸಿದ್ದಾರೆ. ಕಪ್ ಗೆಲ್ಲುವ ಜೊತೆಗೆ ಕೋಟಿ ಕೋಟಿ ಬಹುಮಾನವನ್ನು(Gifts) ಆರ್‌ಸಿಬಿ ಮಹಿಳಾ ತಂಡ (RCB Womens Team) ಬಾಚಿಕೊಂಡಿತು.

Advertisement

ಅರುಣ್ ಜೆಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, ಸೋಫಿ ಮೊಲಿನೆಕ್ಸ್‌, ಶ್ರೇಯಾಂಕ ಪಾಟೀಲ್ ಅವರ ಸ್ಪಿನ್‌ ಮೋಡಿಗೆ ನಲುಗಿ 113 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬೌಲಿಂಗ್‌ನಲ್ಲಿ ವಿಕೆಟ್‌ ಪಡೆಯದಿದ್ದರೂ ಕೊನೇ ಓವರ್‌ವರೆಗೂ ಹೋರಾಟ ನಡೆಸಿದ ಡೆಲ್ಲಿ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತು. ನಂತರ ವಿಜೇತ ತಂಡ ಹಾಗೂ ರನ್ನರ್‌ ಅಪ್‌ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.

ಆರ್‌ಸಿಬಿ ದೋಚಿದ ಬಹುಮಾನದ ಮೊತ್ತ ಎಷ್ಟು?: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್‌ ಆದ ಆರ್‌ಸಿಬಿ ಮಹಿಳಾ ತಂಡಕ್ಕೆ 6 ಕೋಟಿ ರೂ. ಗಳ ನಗದು ಬಹುಮಾನ ನೀಡಲಾಗಿದೆ. ರನ್ನರ್‌ ಅಪ್ ಪ್ರಶಸ್ತಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿತು.

ಬಹುಮಾನದ ವಿವರ:
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಚಾಂಪಿಯನ್‌): 6 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್‌ (ರನ್ನರ್‌ ಅಪ್‌): 3 ಕೋಟಿ ರೂ.
ಶಫಾಲಿ ವರ್ಮಾ (ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್ ದಿ ಮ್ಯಾಚ್‌): 1 ಲಕ್ಷ ರೂ.
ಶಫಾಲಿ ವರ್ಮಾ (ಸಿಕ್ಸರ್‌ ಆಫ್‌ ದಿ ಮ್ಯಾಚ್‌): 1 ಲಕ್ಷ ರೂ.
ಶಫಾಲಿ ವರ್ಮಾ ( ಸಿಕ್ಸರ್‌ ಆಫ್‌ ದಿ ಸೀಸನ್‌): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್‌ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
ಎಲಿಸ್‌ ಪೆರ್ರಿ (ಆರಂಜ್‌ ಕ್ಯಾಪ್): 5 ಲಕ್ಷ ರೂ.
ಶ್ರೇಯಾಂಕಾ ಪಾಟೀಲ್ (ಪರ್ಪಲ್‌ ಕ್ಯಾಪ್‌): 5 ಲಕ್ಷ ರೂ.
ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group