MIRROR FOCUS

ಪ್ರೇಮಿಗಳ ದಿನಕ್ಕೆ ಭರ್ಜರಿ ಗುಲಾಬಿ ವ್ಯಾಪಾರ | ಕೋಟ್ಯಂತರ ರೂ. ಗುಲಾಬಿ ಹೂವು ವಿದೇಶಕ್ಕೆ ರಫ್ತು | ವರ್ಷದಿಂದ ವರ್ಷಕ್ಕೆ ಏರಿಕೆಯಾದ ರಫ್ತಿನ ಪ್ರಮಾಣ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರೇಮಿಗಳ ದಿನವನ್ನು(Valentine Day) ಬೆಂಬಲಿಸುವವರು, ಆಚರಿಸುವವರು ಇದ್ದರೆ. ಒಂದಷ್ಟು ಜನ ಮೂಗು ಮುರಿಯುವವರು ಇದ್ದಾರೆ. ಅದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ಈ ಪ್ರೇಮಿಗಳ ದಿನ ಆಚರಣೆಯಿಂದ ರೈತರಿಗೆ(Farmer) ಲಾಭ ಇದೆ. ಅದರಿಂದ ರೈತ ಕೊಂಚ ಲಾಭ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ವ್ಯಾಲೆಂಟೈನ್ಸ್​ ಡೇ ವಿಶೇಷವೇ ಗುಲಾಬಿ(Rose). ಪ್ರೇಮಿಗಳ ದಿನದಂದು ಅದೆಷ್ಟೋ ಬಣ್ಣ ಬಣ್ಣದ ಹೂವುಗಳು ಮಾರಾಟವಾಗುತ್ತವೆ.

Advertisement

ಪ್ರೇಮಿಗಳು ಗುಲಾಬಿ ಹೂವುಗಳ ಮೂಲಕ ಪ್ರೇಮ ನಿವೇದನೆ ಮಾಡಿದರೆ, ಬೆಳೆಗಾರರಿಗಂತೂ ಹೂಗಳು ತಂದುಕೊಡುವ ಲಾಭದ ಖುಷಿ. ಪ್ರತೀ ವರ್ಷ ಪ್ರೇಮಿಗಳ ದಿನಕ್ಕೆ ಟನ್​ಗಟ್ಟಲೆ ಗುಲಾಬಿ ಹೂವುಗಳು ಮಾರಾಟ ಹಾಗೂ ಇತರ ರಾಜ್ಯ, ವಿದೇಶಕ್ಕೂ(Foreign) ರಫ್ತಾಗುತ್ತವೆ(Export). ಈ ಬಾರಿ ಪ್ರೇಮಿಗಳ ದಿನದ ಅಂಗವಾಗಿ ನಗರದಿಂದ ವಿದೇಶಗಳಿಗೆ ಕೋಟ್ಯಂತರ ರೂಪಾಯಿಯ ಗುಲಾಬಿಗಳು ರಫ್ತಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಫ್ತಿನ ಪ್ರಮಾಣ ಹೆಚ್ಚಾಗಿದೆ.

ವಿಮಾನಗಳ ಮೂಲಕ 12,22,860 ಕೆ.ಜಿ ತೂಕದ ಸುಮಾರು 2.9 ಕೋಟಿ ಗುಲಾಬಿ ಹೂಗಳು ಹೊರ ರಾಜ್ಯಕ್ಕೆ ಮತ್ತು ವಿದೇಶಗಳಿಗೆ ರಫ್ತಾಗಿವೆ. ಈ ವರ್ಷ ಶೇ.108ರಷ್ಟು ರಫ್ತಿನ ಪ್ರಮಾಣ ಹೆಚ್ಚಾಗಿದೆ. ಹೊರ ರಾಜ್ಯಗಳಿಗೆ 2 ಕೋಟಿ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.148 ರಷ್ಟು ಹೆಚ್ಚಳವಾದಂತಾಗಿದೆ. ಗುಲಾಬಿ ಹೂವುಗಳು ಸಿಲಿಕಾನ್ ಸಿಟಿಯಿಂದ ಮಲೇಷ್ಯಾ, ಸಿಂಗಾಪುರ್, ಕುವೈತ್, ಮನಿಲಾ (ಫಿಲಿಪೈನ್), ಮತ್ತು ಶಾರ್ಜಾ (ಯುಎಇ) ದೇಶಗಳಿಗೆ ರಫ್ತಾಗಿವೆ. ಇನ್ನು ದೆಹಲಿ, ಕೋಲ್ಕತ್ತಾ, ಮುಂಬೈ, ಗುವಾಹಟಿ ಮತ್ತು ಜೈಪುರ ರಾಜ್ಯಗಳಿಗೆ ಕೂಡ ರವಾನೆಯಾಗಿದೆ.

2021-22ನೇ ಸಾಲಿನಲ್ಲಿ 23,597 ಮೆಟ್ರಿಕ್ ಟನ್ ಹೂವು ರಫ್ತು: 2021-22ನೇ ಸಾಲಿನಲ್ಲಿ ಭಾರತವು 23,597.17 ಮೆಟ್ರಿಕ್ ಟನ್​ಗಳಷ್ಟು ವಿವಿಧ ಹೂಗಳ ಉತ್ಪನ್ನಗಳನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಇದರ ಒಟ್ಟು ಮೌಲ್ಯ 771.41 ಕೋಟಿಗಳಷ್ಟಾಗಿತ್ತು. ಅದೇ ವರ್ಷದಲ್ಲಿ, ಭಾರತವು 2.1 ಮಿಲಿಯನ್ ಟನ್‌ಗಳಷ್ಟು ಸಡಿಲ ಹೂವುಗಳನ್ನು ಮತ್ತು 0.8 ಮಿಲಿಯನ್ ಟನ್‌ಗಳಷ್ಟು ಕತ್ತರಿಸಿದ ಹೂವುಗಳನ್ನು ಉತ್ಪಾದಿಸಿತ್ತು.

Advertisement

“ಬೆಂಗಳೂರಿನ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೆ ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಂದ ಗುಣಮಟ್ಟದ ಗುಲಾಬಿಗಳನ್ನು ಕಳುಹಿಸಲಾಗಿತ್ತು. ಗುಲಾಬಿ ಬೆಳೆಗೆ ತೋಟಗಾರಿಕೆ ಇಲಾಖೆ ನೆರವಿನಿಂದ ಅನೇಕ ರೈತರು ಸಬ್ಸಿಡಿ ಆಧಾರದಲ್ಲಿ ಹಸಿರುಮನೆಗಳನ್ನು ನಿರ್ಮಿಸಿಕೊಂಡಿದ್ದು, ಪ್ರತಿ ವರ್ಷ ಲಾಭ ಕಾಣುತ್ತಿದ್ದಾರೆ” ಎಂದು ದಕ್ಷಿಣ ಭಾರತ ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್ ತಿಳಿಸಿದ್ದಾರೆ.

Advertisement

ಅತಿಹೆಚ್ಚು ಗುಲಾಬಿ ಹೂ ಬೆಳೆಯುವ ರಾಜ್ಯ: “ಭಾರತವು ಅತಿದೊಡ್ಡ ಹೂಗಳ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ , ಅಸ್ಸಾಂ ಮತ್ತು ತೆಲಂಗಾಣಗಳಲ್ಲಿ ಹೆಚ್ಚಿನ ಹೂವುಗಳನ್ನು ಬೆಳೆಯಲಾಗುತ್ತಿದೆ” ಎಂದು ಅವರು ತಿಳಿಸಿದರು.

– ಅಂತರ್ಜಾಲ ಮಾಹಿತಿ

Rose is special for Valentine’s Day. A lot of colorful flowers are sold on Valentine’s Day. If the lovers express their love through rose flowers, the growers also enjoy the benefits of flowers. Tons of rose flowers are sold and exported to other states and foreign countries every year on Valentine’s Day.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ

ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

2 hours ago

ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ

ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…

2 hours ago

ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…

2 hours ago

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ

ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…

23 hours ago

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

1 day ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

1 day ago