ಕೋಮು ಸೂಕ್ಷ್ಮ ಜಿಲ್ಲೆಯಾಗಿ ದಕ್ಷಿಣ ಕನ್ನಡ ಜಿಲ್ಲೆ ಇಡೀ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಏನೇ ನಡೆದರೂ ಅದಕ್ಕೆ ಕೋಮು , ಧರ್ಮದ ಬಣ್ಣ ಕಾಣುತ್ತಿತ್ತು. ಅದಕ್ಕೂ ಮಿಗಿಲಾದ ಮನುಷ್ಯತ್ವ, ಮಾನವೀಯತೆಯ ಬೆಳಕು ದ ಕ ಜಿಲ್ಲೆಯಲ್ಲಿದೆ. ಅದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.
ವಾರದ ಹಿಂದೆ ಸುಳ್ಯ ತಾಲೂಕಿನ ಹರಿಹರ ಬಳಿ ಪ್ರವಾಹದಿಂದ ಸೇತುವೆಯ ತುಂಬೆಲ್ಲಾ ಕಾಡು, ಮರ ತುಂಬಿತ್ತು. ಅದನ್ನು ತೆರವು ಮಾಡುವ ವೇಳೆ ಕ್ರೇನ್ ಚಾಲಕ ಹೊಳೆಗೆ ಬಿದ್ದು ಅವರನ್ನು ರಕ್ಷಣೆ ಮಾಡಿರುವ ಸಂಗತಿ ಸುದ್ದಿಯಾಗಿತ್ತು. ಹೊಳೆಗೆ ಬಿದ್ದವರು ಶರೀಫ್, ರಕ್ಷಣೆ ಮಾಡಿದವರು ಸೋಮಶೇಖರ ಕೂಜುಗೋಡು. ಇದೀಗ ಅದೇ ಮಾದರಿಯಲ್ಲಿ ಇನ್ನೊಂದು ಘಟನೆ ಬೆಳ್ಳಾರೆ ಬಳಿಯ ಚೆನ್ನಾವರದಲ್ಲಿ ನಡೆದಿದೆ.
ಬೆಳ್ಳಾರೆ ಸಮೀಪದ ಚೆನ್ನಾವರ ಎಂಬಲ್ಲಿ ರಸ್ತೆ ನಡುವೆ ಹೃದಯಾಘಾತ ಸಂಭವಿಸಿ ರಸ್ತೆಯಲ್ಲಿ ಬಿದ್ದಿದ್ದ ಜಲೀಲ್ ಎಂಬವರನ್ನು ಅದೇ ರಸ್ತೆಯಿಂದಾಗಿ ತೆರಳುತ್ತಿದ್ದ ಅಭಿಷೇಕ್ ರೈ ಯವರು ತನ್ನ ಕಾರಿನಲ್ಲಿ ಕೆಯ್ಯೂರು ಆಸ್ಪತ್ರೆಗೆ ಕರೆದೊಯ್ದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಬೆಳ್ಳಾರೆಯ ಹದಗೆಟ್ಟಿರುವ ಪ್ರಸ್ತುತ ಪರಿಸ್ಥಿತಿಯ ಮದ್ಯೆಯು ಅಭಿಷೇಕ್ ರೈಯವರ ಮಾನವೀಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ದ ಕ ಜಿಲ್ಲೆಯಲ್ಲಿ ಕೋಮು ದ್ವೇಷದ ಭಾವನೆಗಿಂತಲೂ ಮಾನವೀಯತೆ, ಸ್ನೇಹ, ಪ್ರೀತಿಯ ಭಾವನೆಗಳು ವ್ಯಾಪಕ ಇದೆ. ಆದರೆ ಎಲ್ಲೋ ಕೆಲವು ಕಡೆ ಧರ್ಮದ ಕಾರಣಕ್ಕೆ, ರಾಜಕೀಯ ಕಾರಣಕ್ಕೆ ಕೋಲಾಹಲ ನಡೆಯುತ್ತಿದೆ. ಬಹುಪಾಲು ಮಂದಿ ಮನುಷ್ಯತ್ವಕ್ಕೆ ಬೆಲೆ ನೀಡುವವರು ಎಂಬುದು ಇಲ್ಲಿ ಮತ್ತೆ ಸಾಬೀತಾಗಿದೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…