ಜೈವಿಕವಾಗಿ ವಿಘಟನೆಯಾಗುವ ಕ್ಯಾರಿಬ್ಯಾಗ್​ ಬಳಸಿ | ಸಸ್ಯಜನ್ಯ ಕೈಚೀಲಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ತುರ್ತು ಕ್ರಮ | ಸಚಿವ ಈಶ್ವರ್ ಖಂಡ್ರೆ

June 29, 2024
1:21 PM

ಪ್ರಕೃತಿಗೆ(Nature) ಬಹಳ ತ್ರಾಸದಾಯಕವಾದದ್ದು ಈಗ ಪ್ಲಾಸ್ಟಿಕ್‌ ನ(Plastic) ಹಾವಳಿ. ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌ ಕೈ ಚೀಲದ್ದೇ(Carry bag) ಕಾರುಬಾರು.. ಇದರ ನಿಯಂತ್ರಣ ಬಹಳ ಕಷ್ಟವಾಗಿದೆ. ಈ ಬಗ್ಗೆ ಸರ್ಕಾರವೇ(Govt) ಏನಾದರು ದಿಟ್ಟ ಕ್ರಮಗಳನ್ನು ಕೈಗೊಂಡರೆ ಮಾತ್ರ ಸಾಧ್ಯ. ಇದೀಗ ಜೈವಿಕವಾಗಿ ವಿಘಟನೆಯಾಗುವ(Biodegradable)ಮತ್ತು 180 ದಿನಗಳಲ್ಲಿ ಕರಗಿಹೋಗುವ(Dissolving) ಸಸ್ಯಜನ್ಯ ಪಾಲಿ ಲಿಕ್ವಿಡ್ ಆ್ಯಸಿಡ್ ಪೋಲಿಮರ್(Vegetable poly liquid acid polymer)ಕೈಚೀಲಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ(Sell) ಅವಕಾಶ ಆಗುವಂತೆ ತುರ್ತು ಕ್ರಮ ಕೈಗೊಳ್ಳಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ(Minister of Forests, Biology and Environment) ಈಶ್ವರ್ ಖಂಡ್ರೆ(Eshwar Khandre) ಸೂಚನೆ ನೀಡಿದ್ದಾರೆ.

Advertisement
Advertisement
Advertisement
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ, ಸುಟ್ಟರೆ ವಾತಾವರಣವನ್ನೇ ಕಲುಷಿತಗೊಳಿಸುವ ಏಕ ಬಳಕೆ ಪ್ಲಾಸ್ಟಿಕ್ ಈ ಪರಿಸರಕ್ಕೆ ಮಾರಕ. ಇದಕ್ಕೆ ಪರ್ಯಾಯವಾಗಿ ಜೈವಿಕವಾಗಿ ಕೊಳೆಯುವಂತಹ ಉತ್ಪನ್ನ ಅಗತ್ಯ ಎಂದರು. ಹಿಂದೆಂದಿಗಿಂತಲೂ ಮಾಲಿನ್ಯ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜೈವಿಕವಾಗಿ ವಿಘಟನೆಯಾಗುವ ಸಸ್ಯಜನ್ಯ ಪಾಲಿ ಲಿಕ್ವಿಡ್ ಆ್ಯಸಿಡ್ ಪೋಲಿಮರ್ ಚೀಲಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟಕ್ಕೆ ತೊಡಕಾಗಿರುವ ಕರ್ನಾಟಕ ಸರ್ಕಾರದ 2016ರ ಅಧಿಸೂಚನೆಗೆ ತಿದ್ದುಪಡಿ ತಂದು ಇಲ್ಲವೇ ಹಿಂಪಡೆದು, ಕೇಂದ್ರ ಪರಿಸರ ಇಲಾಖೆಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
Minister Eshwar Khandre Directs To Manufacture And Sale Of Biodegradable Carry Bags

ಅಧಿಕಾರಿಗಳೊಂದಿಗೆ ಸಚಿವ ಈಶ್ವರ್ ಖಂಡ್ರೆ 

Advertisement
ಮೆಕ್ಕೆಜೋಳದ ಸಾರದಿಂದ ತಯಾರಿಸುವ ಕೈಚೀಲಗಳು 6 ತಿಂಗಳುಗಳಲ್ಲಿ ಇಟ್ಟಲ್ಲಿಯೇ ಕರಗಿ ಹೋಗುತ್ತವೆ ಎಂದು ಸಭೆಗೆ ಪರಿಸರ ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಕೈಚೀಲಗಳು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ವೈಜ್ಞಾನಿಕವಾಗಿ ವಿಘಟನೆಯಾಗುತ್ತದೆ ಎಂದು ಸಾಬೀತಾಗಿದ್ದಲ್ಲಿ, ಇದಕ್ಕೆ ಶೀಘ್ರ ಅನುಮತಿ ನೀಡಿ ಎಂದು ಹೇಳಿದರು. ಈ ಪೋಲಿಮರ್ ಕೈಚೀಲಗಳ ದರ ಕೂಡ ಪ್ರಸ್ತುತ ಲಭ್ಯ ಇರುವ ಏಕ ಬಳಕೆ ಪ್ಲಾಸ್ಟಿಕ್ ಕೈಚೀಲಗಳ ದರದಲ್ಲೇ ಲಭ್ಯವಾದರೆ ಯಾರೂ ಆಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಖರೀದಿಸುವುದಿಲ್ಲ ಎಂದೂ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಸಭೆಯಲ್ಲಿ ಅಧಿಕಾರೇತರ ಸದಸ್ಯ ಶರಣಕುಮಾರ ಮೋದಿ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಉಪಸ್ಥಿತರಿದ್ದರು.
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror