ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ ಸಿ ಎ ಆರ್) ವಿಶೇಷ ಲಕ್ಷಣಗಳನ್ನು ಹೊಂದಿರುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿತ್ತು. 35 ತಳಿಗಳನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
ಐಸಿಎಆರ್‌ನ ಎಲ್ಲಾ ಸಂಸ್ಥೆಗಳು, ರಾಜ್ಯ, ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಹೊಸ ಬೆಳೆಗಳ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು,” ಕೃಷಿಯು ರಾಜ್ಯದ ವಿಷಯವಾಗಿದೆ, ಈ ಹಿಂದೆ ಗುಜರಾತಿನಲ್ಲಿ ಅದೇ ಮಾದರಿಯಲ್ಲಿ ಆಡಳಿತ ನಡೆಸಲಾಗಿದೆ. ಹೀಗಾಗಿ ಸೂಕ್ಷ್ಮ ಸಂಗತಿಗಳು ತಿಳಿದಿದೆ. ಸಾಮೂಹಿಕ ಪ್ರಯತ್ನದ ಮೂಲಕ ದೇಶದಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವಿದೆ, ಅದು ಉತ್ತಮ ಫಲಿತಾಂಶವೂ ನೀಡಿದೆ” ಎಂದು ಹೇಳಿದರು. ವಿಜ್ಞಾನ ಮತ್ತು ಸಂಶೋಧನೆಗಳೊಂದಿಗೆ, ರಾಗಿ ಮತ್ತು ಇತರ ಧಾನ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಈಗ ಅಗತ್ಯವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಬೆಳೆಯಬಹುದು ಎಂಬುದು ಇದರ ಉದ್ದೇಶವಾಗಿದೆ ಎಂದರು.
ಹವಾಮಾನ ಬದಲಾವಣೆಯಿಂದಾಗಿ ಹೊಸ ರೀತಿಯ ಕೀಟಗಳು, ಹೊಸ ರೋಗಗಳು, ಸಾಂಕ್ರಾಮಿಕ ರೋಗಗಳು ಹೊರಹೊಮ್ಮುತ್ತಿವೆ, ಇದರಿಂದಾಗಿ ಮಾನವರು ಮತ್ತು ಜಾನುವಾರುಗಳ ಆರೋಗ್ಯಕ್ಕೆ ದೊಡ್ಡ ಅಪಾಯವಿದೆ ಮತ್ತು ಬೆಳೆಗಳ ಮೇಲೂ ಪರಿಣಾಮ ಬೀರುತ್ತಿವೆ ಎಂದರು. ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ರೈತನನ್ನು ಹೊರತಂದು ಮೌಲ್ಯವರ್ಧನೆ ಮತ್ತು ಇತರ ಕೃಷಿ ಆಯ್ಕೆಗಳಿಗೆ ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ. ವಿಜ್ಞಾನ ಮತ್ತು ಸಂಶೋಧನೆಯ ಪರಿಹಾರಗಳೊಂದಿಗೆ ಸಿರಿಧಾನ್ಯಗಳು ಮತ್ತು ಇತರ ಧಾನ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ವಿಶ್ವಸಂಸ್ಥೆ ಮುಂದಿನ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸುವುದರಿಂದ ದೊರಕುವ ಅವಕಾಶಗಳನ್ನು ಬಳಸಿಕೊಳ್ಳಲು ಜನರು ಸಿದ್ಧರಾಗಿರಬೇಕು ಎಂದು ಹೇಳಿದರು.
ವಿಶೇಷ ಲಕ್ಷಣಗಳನ್ನು ಹೊಂದಿರುವ 35 ಬೆಳೆ ತಳಿಗಳನ್ನುವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಯಿತು. ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿಶೇಷ ಲಕ್ಷಣಗಳನ್ನು ಹೊಂದಿರುವ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೌಷ್ಟಿಕಾಂಶದಂತಹ ವಿಶೇಷ ಲಕ್ಷಣಗಳನ್ನು ಹೊಂದಿರುವ 35 ಬೆಳೆ ಪ್ರಭೇದಗಳನ್ನು 2021 ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಬರ ಸಹಿಷ್ಣುತೆ ಸೇರಿದಂತೆ ರೋಗ ನಿರೋಧಕ ಅಂಶಗಳು ಹೊಂದಿವೆ. ಅಕ್ಕಿ ಮತ್ತು ಜೈವಿಕ ಬಲವರ್ಧಿತ ಗೋಧಿ, ಮತ್ತು ರಾಗಿ, ಜೋಳ ಮತ್ತು ಕಡಲೆ ಮೊದಲಾದ ತಳಿಗಳು ಇವೆ.
ಪ್ರಧಾನಿಗಳ ಭಾಷಣ..
Agriculture is a state subject and that is why, I will cherish my administrative experience in Gujarat that helped me get understand the nuances of the sector better.
AdvertisementOur collective efforts yielded great results. pic.twitter.com/AXNqwmLb9Z
— Narendra Modi (@narendramodi) September 28, 2021
Advertisement