ಅಡಿಕೆ ಬೆಳೆಗಾರರಿಗೆ ಕೊಯ್ಲು- ರೋಗ ನಿರ್ವಹಣೆಯಲ್ಲೂ ರೈತರ ಜೊತೆ ಹೆಜ್ಜೆ ಹಾಕಿದ ಸಿಪಿಸಿಆರ್‌ಐ |

March 19, 2022
7:00 AM

ಈಚೆಗೆ ಅಡಿಕೆ ಬೆಳೆಗಾರರಿಗೆ ಆಸಕ್ತಿ ಮೂಡಿಸಿದ್ದು ಹಾಗೂ ಬೆಳೆಗಾರರಿಗೆ ಭರವಸೆ ಮೂಡಿಸಿದ ಕಾರ್ಯಗಳಲ್ಲಿ  ಪೈಬರ್‌ ದೋಟಿ ಪ್ರಮುಖವಾದ್ದು. ಇದೀಗ ಕೇಂದ್ರ ಸರ್ಕಾರದ ಸಿಪಿಸಿಆರ್‌ಐ ಸಂಸ್ಥೆಯೂ ರೈತರ ಜೊತೆಗೆ ಹೆಜ್ಜೆ ಹಾಕಿ ದೋಟಿ ಶಿಬಿರ ಆಯೋಜನೆ ಮಾಡಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಸದ್ಭಳಕೆ ಮಾಡಿದೆ. ಇದಕ್ಕೊಂದು ಉದಾಹರಣೆ ಫೈಬರ್‌ ದೋಟಿ ಶಿಬಿರ. ಇಷ್ಟೇ ಅಲ್ಲ ರೋಗ ನಿರ್ವಹಣೆ ಬಗ್ಗೆಯೂ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ.

Advertisement
Advertisement
Advertisement

Advertisement

ಈಚೆಗೆ ಫೈಬರ್‌ ದೋಟಿ ಮೂಲಕ ಅಡಿಕೆ ಕೊಯ್ಲು, ಸಿಂಪಡಣೆಯ ಬಗ್ಗೆ ಶಿರಸಿಯ ಮೂರುರು ಕಲ್ಲಬ್ಬೆಯಲ್ಲಿ ಯಶಸ್ವಿಯಾಗಿ ಅಡಿಕೆ ಬೆಳೆಗಾರರು ತಂಡ ಮಾಡಿ ಅಡಿಕೆ ಕೃಷಿಕರ ಬಹುದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಿರುವ ಬಗ್ಗೆ ಅಡಿಕೆ ಪತ್ರಿಕೆ ಸಮಗ್ರವಾದ ವರದಿ ಮಾಡಿತ್ತು. ಅದಾದ ಬಳಿಕ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಆಸಕ್ತಿ ವಹಿಸಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಸಹಕಾರದೊಂದಿಗೆ ಸಿಪಿಸಿಆರ್‌ ಐ ವಠಾರದಲ್ಲಿ ಫೈಬರ್‌ ದೋಟಿ ಶಿಬಿರ ನಡೆದಿತ್ತು. ಮೂರು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ  ಮೂರುರು ಕಲ್ಲಬ್ಬೆಯಿಂದಲ ಆಗಮಿಸಿದ ತರಬೇತುದಾರರು ತರಬೇತಿ ನೀಡಿದ್ದರು. ಅದಾದ ಬಳಿಕ ಸಹಕಾರಿ ಸಂಘಗಳ ಮೂಲಕ ವಿವಿದೆಡೆ ತರಬೇತಿ ಶಿಬಿರ ನಡೆದಿತ್ತು. ಇದೀಗ ಕೇಂದ್ರ ಸರ್ಕಾರದ ಸಂಸ್ಥೆ, ಅಡಿಕೆ ಬೆಳೆಗಾರರ ಹಿತಕ್ಕಾಗಿಯೇ ಇರುವ ಸಿಪಿಸಿಆರ್‌ಐ ವಿಟ್ಲದಲ್ಲಿ ಸರಕಾರಿ ಸಂಸ್ಥೆಯ ಪ್ರಥಮ  ದೋಟಿ ಶಿಬಿರ ನಡೆಸುವ ಮೂಲಕ ಗಮನ ಸೆಳೆದಿದೆ.ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್‌ ಭಟ್‌ ಮೈಕ್‌ ಹಾಗೂ ಬಾಬು ಅವರು ತರಬೇತಿ ನೀಡಿದ್ದರು.

Advertisement

ದೋಟಿ ಕೌಶಲ್ಯ ತರಬೇತಿ ಅಡಿಕೆ ಕೃಷಿಕರ  ತಕ್ಷಣದ ಅಗತ್ಯ. ಇದನ್ನು ಮನಗಂಡು ಕೇಂದ್ರ ಸರಕಾರದ ಐಸಿಎಆರ್ ಸಂಸ್ಥೆ, ವಿಟ್ಲ ಸಿಪಿಸಿಆರ್ ಐ ವಿಟ್ಲದಲ್ಲಿ ನಾಲ್ಕು ದಿನಗಳ ತರಬೇತಿ ಶಿಬಿರ ನಡೆಸಿ ಇದೀಗ ಸಮಾರೋಪ ಹಂತದಲ್ಲಿದೆ. ಇದರಲ್ಲಿ ಸಾಮಾಜಿಕವಾಗಿ ಹಿಂದುಳಿದ 13 ಮಂದಿ ತರುಣರು ಈ ಶಿಬಿರದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಅಡಿಕೆ ಕೊಯ್ಲು, ಸಿಂಪಡಣೆ ಮಾತ್ರವಲ್ಲದೆ ತೆಂಗು ಕೊಯ್ಲು, ಅಡಿಕೆಯ ಸಿಂಗಾರ ಒಣಗುವ ರೋಗ – ಎಲೆ ಚುಕ್ಕಿ ರೋಗ ನಿರ್ವಹಣೆ ಹಾಗೂ ಅಡಿಕೆ ಬೆಳೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ.

’ಆತ್ಮ’(ATMA- ಅಟ್ರಾಕ್ಟಿಂಗ್ ಆಂಡ್ ರಿಟೈನಿಂಗ್ ಯೂತ್ ಇನ್ ಅಗ್ರಿಕಲ್ಚರ್ ) ಯೋಜನೆಯಡಿ ಕೃಷಿ ಇಲಾಖೆ ಮತ್ತು ಅಡಿಕೆ ಜಿಲ್ಲೆಯ ಎಲ್ಲಾ ಸರ್ಕಾರಿ ಸಂಸ್ಥೆಗಳೂ ಇಂತಹ ತರಬೇತಿ ನಡೆಸಬಹುದು. ಸರಕಾರಿ ಮಟ್ಟದಲ್ಲಿ ಹೀಗೊಂದು ಅತ್ಯವಶ್ಯಕ ತರಬೇತಿಯನ್ನು ಬಹುಬೇಗನೆ ಸಂಘಟಿಸಿ ನಡೆಸಿ ಉಳಿದ ಸರಕಾರಿ ಸಂಸ್ಥೆಗಳಿಗೆ ಸಿಪಿಸಿಆರ್ ಐ ಮಾರ್ಗದರ್ಶಕವಾಗಿದೆ.

Advertisement

ಈ ಶಿಬಿರದ ಯಶಸ್ಸಿನ ರುವಾರಿಗಳಲ್ಲಿ ಒಬ್ಬರಾದ ಸಿಪಿಸಿ ಆರ್ ಐ ವಿಜ್ಞಾನಿ ಡಾ.ಭವಿಷ್ಯ ಅವರು ಹೇಳುವಂತೆ, ಈ ತಂಡದಲ್ಲಿ  ಪದವೀಧರರು, ಎಳೆಯರು, ಮರ ಏರಿ ಅಡಿಕೆ ಕೊಯ್ಲು, ಕಳೆ ಕತ್ತರಿಸುವ ಕೆಲಸ ಮಾಡುತ್ತಿರುವವರೂ ಇದ್ದಾರೆ. ಎಲ್ಲರಿಗೂ ಕಲಿಯಬೇಕೆಂಬ ಉತ್ಸಾಹವಿದೆ. ತುಂಬ ಮುತುವರ್ಜಿಯಿಂದ ಕಲಿಯುತ್ತಿದ್ದಾರೆ” ಎನ್ನುತ್ತಾರೆ.

Advertisement

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror