ಭಾರತೀಯ ಕೃಷಿ ಸಂಶೋಧನಾ ಮಂಡಳಿ – ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ 58ನೇ ವರ್ಷದ ಸಂಸ್ಥಾಪನಾ ದಿನ ಬೆಂಗಳೂರಿನಲ್ಲಿ ನಡೆಯಿತು. ಈ ಸಂಸ್ಥೆಯು ರೈತರಿಗೆ ಹಲವಾರು ತಂತ್ರಜ್ಞಾನಗಳನ್ನು ನೀಡಿದೆ. ಕೃಷಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಸಂಸ್ಥೆಯ ಶಿಕ್ಷಣ ಉಪ ನಿರ್ದೇಶಕ ಡಾ. ಆರ್. ಸಿ. ಅಗರ್ವಾಲ್ ಸಂಸ್ಥಾಪನಾ ದಿನದ ಅಂಗವಾಗಿ ಉಪನ್ಯಾಸ ನೀಡಿದರು. ಈ ವೇಳೆ ಪ್ರಗತಿಯ ವಿಷಯದಲ್ಲಿ ಸಂಸ್ಥೆಯು ಸಾಕಷ್ಟು ಒಳ್ಳೆಯ ಬೆಳವಣಿಗೆಗಳನ್ನು ಕಂಡಿದೆ. ಸಿಬ್ಬಂದಿ, ವಿದ್ಯಾರ್ಥಿಗಳು, ರೈತರ ಒಳಗೊಳ್ಳುವಿಕೆಯಿಂದ ಮಾತ್ರ ಸಂಸ್ಥೆಯೊಂದರ ಏಳಿಗೆ ಸಾಧ್ಯ ಎಂದರು.
ಉಪನ್ಯಾಸಕರಾದ ಆರ್. ಗೋಪಕುಮಾರ್, ತೋಟಗಾರಿಕೆ ಸಂಶೋಧನೆ ಸಂಸ್ಥೆಯಿಂದ ದೇಶದ ಆರ್ಥಿಕತೆಗೆ ಹಾಗೂ ವಿಶೇಷವಾಗಿ ರೈತರಿಗೆ ಅನುಕೂಲವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಕೃಷಿ ಪದ್ದತಿ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆ ಬೆಂಗಳೂರಿನ ನಿರ್ದೇಶಕ ಡಾ. ತುಷಾರ್ ಕಂಠಿ ಬೆಹೆರಾ, ತಂತ್ರಜ್ಞಾನದ ವಿಷಯದಲ್ಲಿ ಸಂಸ್ಥೆಯು ಸಾಟಿಯಿರದ ಸಾಧನೆ ಮಾಡಿದೆ. ವಿಜ್ಞಾನಿಗಳ, ರೈತರ ಶ್ರಮ ಹಾಗೂ ಕೊಡುಗೆ ಇದರಲ್ಲಿ ಅಪಾರ. ತೋಟಾಗಾರಿಕೆ ಉತ್ಪಾದನೆ ಹಾಗೂ ಉತ್ಪನ್ನಗಳ ಆಮದಿನಲ್ಲಿ ಸಂಸ್ಥೆ ಮುಂಚೂಣಿಯಲ್ಲಿರುವುದಾಗಿ ತಿಳಿಸಿದರು.