ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ | ಸಾವಿರಾರು ಮಂದಿ ಭಾಗಿ |

October 12, 2022
8:50 PM

ಪೈಗಂಬರ್ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬದ ಅಂಗವಾಗಿ ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಹುಬ್ಬುರಸೂಲ್- ಪ್ರವಾದಿ ಸಂದೇಶ ಕಾರ್ಯಕ್ರಮ ಗಾಂಧಿನಗರ ಪೆಟ್ರೋಲ್ ಬಂಕ್ ಮುಂಭಾಗದ ಸಭಾ ವೇದಿಕೆಯಲ್ಲಿ  ನಡೆಯಿತು.

Advertisement
Advertisement
Advertisement
ಸಂಜೆಮೊಗರ್ಪಣೆ ಮಾಂಬ್ಳಿ ದರ್ಗಾ ವಠಾರದಲ್ಲಿ ಪ್ರಾರ್ಥನೆಯ ಮೂಲಕ ಬ್ರಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸ್ಥಳೀಯ ಮಸ್ಜಿದ್ ಮುದರಿಸ್ ಹಾಫಿಲ್ ಸೌಕತ್ ಅಲಿ ಸಖಾಪಿ ಪ್ರಾರ್ಥನೆ ನೆರವೇರಿಸಿ ಪ್ರವಾದಿಯವರ ತತ್ವ ಆದರ್ಶ ಮತ್ತು ಸಿದ್ಧಾಂತಗಳನ್ನು ಅನುಸರಿಸಿಕೊಂಡು ಜೀವನ ನಡೆಸಲು ಕರೆ ನೀಡಿದರು.

Advertisement
ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷರಾದ ಹಾಜಿ ಜಿ ಇಬ್ರಾಹಿಂ ಸೀಫುಡ್ ಸಂಘಟಕರಿಗೆ ಧ್ವಜವನ್ನು ಹಸ್ತಾಂತರಿಸಿದ ಬಳಿಕ  ಜಾಥಾ ಪ್ರಾರಂಭಗೊಂಡಿತು. ಜಾಥದಲ್ಲಿ ತಾಲೂಕಿನ ವಿವಿದ ಭಾಗಗಳಿಂದ ಬಂದಿದ್ದ ನೂರಾರು ವಿಧ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ, ಮತ್ತು ಸ್ಕೌಟ್ ವಿಧ್ಯಾರ್ಥಿಗಳ ಪಥಸಂಚಲನ ಆಕರ್ಷಣೆಯಾಗಿತ್ತು. ಯುವಕರ ತಂಡವು ಪೈಗಂಬರ್ ಕೀರ್ತನೆಗಳನ್ನು ಹಾಡಿ ಮೆರಗು ನೀಡಿದರು. ಗಾಂಧಿನಗರ ಸತ್ತಾರ್ ಸಂಗಂ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಖ್ಯಾತ ಕವ್ವಾಲಿ , ಬುರ್ದಾ, ನಾಥ್ ಗಾಯನ ತಂಡದವರಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

ನಂತರ ನಡೆದ ಪ್ರವಾದಿ ಸಂದೇಶ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತವಾಗ್ಮಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪೈಗಂಬರ್‌ರವರ ಜೀವನ ಚರಿತ್ರೆಯ ಬಗ್ಗೆ ಮಾತಾಡಿದರು. ಹಿರಿಯ ಪಂಡಿತರು ಧಾರ್ಮಿಕ ನೇತಾರ ಅಸ್ಸಯ್ಯದ್ ಝಯಿನುಲ್ ಆಬಿದೀನ್ ತಂಗಳ್ ದುಗ್ಗಲಡ್ಕರವರು ದುವಾ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಇಸ್ಲಾಂಮಿನ ಮಹತ್ವ ಮತ್ತು ತತ್ವಗಳನ್ನು ಅನುಸರಿಸಿ ನಮ್ಮ ಯುವ ಜನಾಂಗ ಮುಂದುವರೆಯಬೇಕು , ಹಿಂಸೆ ಮತ್ತು ಕೊಲೆ ಮಾಡಲು ಇಸ್ಲಾಂ ಎಂದೂ ಹೇಳಲಿಲ್ಲ ಶಾಂತಿ ಸೌಹಾರ್ದತೆಯಿಂದ ಪರ ಮತ ಸಹಿಷ್ಣುತೆಯೊಂದಿಗೆ ಜೀವನ ನಡೆಸಬೇಕೆಂದರು.

Advertisement
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಯುವ ಶಕ್ತಿ ಈ ದೇಶದ ಶಕ್ತಿ, ಯುವಕರು ಯಾವುದೇ ಪ್ರಚೊದನೆಗೆ ಒಳಗಾಗದೆ ಶಾಂತಿಯಿಂದ ಇರಬೇಕು ,ಮಾಧಕ ದ್ರವ್ಯ ವ್ಯಸನಿಗಳಾಗಬಾರದು ಹಾಗು ಕೋಮು ಸಂಘರ್ಷಗಳಲ್ಲಿ ಭಾಗವಹಿಸಬಾರದುಎಂದರು.

ಹಾಜಿ ಮುಸ್ತಪ, ಜನತಾ ಕೆ.ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಸಮಾಜದ ಯುವಕರು ಆದರ್ಶ ಪ್ರಾಯರಾಗಬೇಕೆಂದು ಕರೆ ನೀಡಿದರು.

Advertisement
ವೇದಿಕೆಯಲ್ಲಿ ಮುಖಂಡರುಗಳಾದ ಪಿ.ಎ ಮಹಮ್ಮದ್, ಸಂಪಾಜೆ ಗ್ರಾಮ ಪಂಚಾಂಯತ್ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ , ಎಸ್ ಸಂಶುದ್ಧೀನ್ ಅರಂಬೂರು,ಅಡ್ವಕೇಟ್ ಪವಾಜ್ ಕನಕಮಜಲು, ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್ , ಸಿದ್ದೀಕ್ ಕಟ್ಟೆಕಾರ್ಸ್, ಶರೀಫ್ ಕಂಠಿ, ಸಿದ್ಧಿ ಕೊಕ್ಕೋ, ನವಾಜ್ ಪಂಡಿತ್, ಜುನೈದ್ ಎನ್ ಎ, ಮಶೂದ್ ಅಚ್ಚು ,ಹನೀಫ್ ಸಂಟ್ಯಾರ್ ಬೀಜದಕೊಚ್ಚಿ , ಮೂಸ ಕುನ್ನಿ ದುಗ್ಗಲಡ್ಕ, ಬಿಳಿಯರ್ ಹಮೀದ್ ಹಾಜಿ, ತಾಜ್ ಮಹಮ್ಮದ್ ಸಂಪಾಜೆ ,ಜಾಫರ್ ಬೋರುಗುಡ್ಡೆ, ನೌಷದ್ ಎಸ್ ಎಚ್, ರಶೀದ್ ಆರ್ ಆರ್, ಶಾಫಿ ಕಲ್ಲುಮುಟ್ಲು,ರಹೀಮ್ ಬೋರುಗುಡ್ಡೆ,ಮೊದಲಾದವರು ಉಪಸ್ಥಿತರಿದ್ದರು.

ಸಂಚಾಲಕ ಆರ್. ಕೆ ಮಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror