ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯದ ಮಟ್ಟ ಎಲ್ಲೆ ಮೀರಿದೆ. ಜಾಸ್ತಿಯಾಗುತ್ತಿರುವ ವಾಹನಗಳ ಸಂಖ್ಯೆ, ಕಾರ್ಖಾನೆಗಳು ಹೊರ ಉಗುಳುವ ಕೆಟ್ಟ ಹೊಗೆ, ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮರಗಿಡಗಳ ಸಂಖ್ಯೆ ಇವೆಲ್ಲಾ ಪರಿಸರದಲ್ಲಿ ವಾಯು ಮಾಲಿನ್ಯ ಜಾಸ್ತಿಯಾಗುವುದಕ್ಕೆ ಕಾರಣವಾಗಿದೆ. ಇದು ಮನುಷ್ಯನ ಜೀವಿತಾವಧಿಯನ್ನೇ ಕಸಿದುಕೊಳ್ಳುತ್ತಿದೆ. ಕೆಲವೊಂದು ಕ್ರಮಗಳ ಕಡೆಗೆ ಈಗಲೇ ಗಮನಹರಿಸಿದರೆ ಆರೋಗ್ಯ ಸುಧಾರಣೆ ಕಾಣಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಹೆಚ್ಚು ವರ್ಷ ಬದುಕಬೇಕು ಅಂತ ಯಾರಿಗೆ ತಾನೇ ಇರಲ್ಲ ಹೇಳಿ? ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಸಾರ್ವಜನಿಕರ ಆಯಸ್ಸು ಹೆಚ್ಚಿಸಲು ಪ್ರಮುಖ ಸಲಹೆಯೊಂದು ಇಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಜನರ ಆಯಸ್ಸು ಹೆಚ್ಚಿಸಲು ಮಹತ್ವದ ಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ವರದಿಯ ಪ್ರಕಾರ ಕರ್ನಾಟಕ ನಾಗರಿಕರ ಆಯಸ್ಸನ್ನು 2.4 ವರ್ಷ ಹೆಚ್ಚಿಸಬಹುದಾಗಿದೆ ಎಂದು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಗಮನಿಸಿಕೊಂಡು ಕಾರ್ಯಪ್ರವೃತ್ತವಾಗಿ PM2.5 ನಷ್ಟು ವಾಯು ಮಾಲಿನ್ಯ ಕಡಿಮೆ ಮಾಡಿದರೆ ವ್ಯಕ್ತಿಯ ಸರಾಸರಿ ಜೀವಿತಾವಧಿ 2.3 ವರ್ಷಗಳಷ್ಟು ಹೆಚ್ಚಾಗಬಹುದು. ಅಥವಾ ವಿಶ್ವಾದ್ಯಂತ ಒಟ್ಟು 17.8 ಶತಕೋಟಿ ಜೀವಿತಾವಧಿ ಹೆಚ್ಚಾಗುತ್ತದೆ.
ಜಾಗತಿಕವಾಗಿ ವಾಯುಮಾಲಿನ್ಯದ ಪ್ರಭಾವವು ಕೇವಲ ಆರು ದೇಶಗಳಲ್ಲಿ ಹೆಚ್ಚಾಗಿದೆ. ಅದರಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಚೀನಾ, ನೈಜೀರಿಯಾ ಮತ್ತು ಇಂಡೋನೇಷ್ಯಾ ಪ್ರಮುಖವಾಗಿದೆ. ಇಲ್ಲಿನ ಜನರು ಉಸಿರಾಡುವ ಗಾಳಿಯಿಂದಾಗಿ ತಮ್ಮ ಜೀವನದಲ್ಲಿ 1-6 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಶೋಧನಾ ವರದಿ ಹೇಳಿದೆ.
ಪ್ರಪಂಚದಾದ್ಯಂತ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಸವಾಲು ಇದೆ. ಆದರೆ ಚೀನಾದಂತಹ ದೇಶ ವಾಯುಮಾಲಿನ್ಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. 2013 ರಿಂದ ಮಾಲಿನ್ಯವನ್ನು ಶೇಕಡಾ 42.3 ರಷ್ಟು ಕಡಿಮೆ ಮಾಡಿದೆ.
ಭಾರತದಲ್ಲಿಯೂ ಗ್ರಾಮೀಣ ಭಾಗಗಳಿಂದಲೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…