#Coconut | ಹಿತ್ತಲಲ್ಲಿ 8 ತೆಂಗಿನ ಮರಗಳಿದ್ದರೆ ವರ್ಷಕ್ಕೆ ಲಕ್ಷ ಆದಾಯ….! | ಹೇಗೆ ಇದು ಸಾಧ್ಯ….? |

September 12, 2023
2:35 PM
ತೆಂಗು ಬೆಳೆಗಾರರಿಗೆ ಈಗ ಆದಾಯ ಹೆಚ್ಚಿಸಿಕೊಳ್ಳುವ ವ್ಯವಸ್ಥೆಯೊಂದು ಜಾರಿಯಾಗುತ್ತಿದೆ. ಕಲ್ಪರಸ ತೆಗೆಯುವ ಮೂಲಕ ತೆಂಗಿನ ಗುಣಮಟ್ಟದ ಪಾನೀಯ ತಯಾರಾಗುತ್ತದೆ. ಕೃಷಿಕರಿಗೂ ಆದಾಯ ಹೆಚ್ಚಿಸಿಕೊಳ್ಳುವ ವ್ಯವಸ್ಥೆ ರೂಪುಗೊಳ್ಳುತ್ತಿದೆ.

ಮನೆ ತೋಟದಲ್ಲಿ 8 ತೆಂಗಿನ ಮರಗಳಿದ್ದರೇ ಸ್ವಲ್ಪ ಹೆಚ್ಚಿನ ಆದಾಯ ಗಳಿಸಬಹುದು. ಈಗ ಹೆಚ್ಚು ಪ್ರಚಲಿತದಲ್ಲಿರುವುದು ತೆಂಗಿನ ಕಲ್ಪರಸ. ತೆಂಗಿನ ಉತ್ತಮ ಪಾನೀಯ ಇದಾಗಿದೆ. ರೈತರಿಗೆ ಉತ್ತಮ ಆದಾಯದ ನಿರೀಕ್ಷೆ ಇಲ್ಲಿದೆ. ಈಗಾಗಲೇ ಕಾಸರಗೋಡಿನ ಕೇಂದ್ರೀಯ ತೋಟದ ಬೆಳಗಳ ಸಂಶೋಧನಾ ಸಂಸ್ಥೆ (CPCRI) ಮಾರ್ಗದರ್ಶನದಲ್ಲಿ ಉಡುಪಿಯ ಭಾರತೀಯ ಕಿಸಾನ್‌ ಸಂಘದ ಮೂಲಕ ಉಡುಪಿಯಲ್ಲಿ ಕಲ್ಪರಸದ ಯೋಜನೆ ಜಾರಿಯಾಗುತ್ತಿದೆ.

Advertisement
Advertisement
Advertisement

ತೆಂಗಿನ ಮರಗಳಿಂದ ಕಲ್ಪರಸ ಎಂಬ ಆರೋಗ್ಯವರ್ಧಕ ಪಾನೀಯವನ್ನು ತಯಾರಿಸುವ ರಾಜ್ಯದ 2ನೇ ಘಟಕ ಉಡುಪಿಯ ಕುಂದಾಪುರ ಜಪ್ತಿ ಎಂಬಲ್ಲಿ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಕಲ್ಪರಸ ಯಶಸ್ವಿಯಾಗಿ ತಯಾರಿಸಲಾಗಿದೆ. ಏಪ್ರಿಲ್‌ ಮೊದಲ ವಾರದಿಂದ ಮಾರುಕಟ್ಟೆಯಲ್ಲಿ ಈ ಕಲ್ಪರಸ ಮಾರುಕಟ್ಟೆ ಪ್ರವೇಶಿಸಲಿದೆ.

Advertisement

ಕಲ್ಪರಸಕ್ಕೆ ಅಮಲು ಇಲ್ಲ: ಕಲ್ಪರಸ ಎಂಬುದು ನೀರಾದ ಸಿಹಿರೂಪ. ಅದು ಹುಳಿಯಾದರೆ ಅಮಲು ಪದಾರ್ಥವಾಗುತ್ತದೆ. ಅದನ್ನು ತೆಂಗಿನ ಮರದಿಂದ ನೀರಾವನ್ನು ತೆಗೆದು ಬಾಟಲಿಗಳಲ್ಲಿ ತುಂಬಿ, ಹುಳಿಯಾಗದಂತೆ ತಾಪಮಾನ ನಿಯಂತ್ರಣ ವ್ಯವಸ್ಥೆಯಲ್ಲಿ ಮಾರುವುದೇ ಈ ಉಕಾಸ ಉತ್ಪಾದಕರ ಕಂಪೆನಿಯ ಯೋಜನೆಯಾಗಿದೆ. ಈ ಉತ್ಪಾದಕರ ಕಂಪೆನಿ ಸ್ಥಾಪನೆಗೆ ಭಾರತೀಯ ಕಿಸಾನ್‌ ಸಂಘದ ಪ್ರಾಯೋಜಕತ್ವದಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ 54 ತೆಂಗು ಬೆಳಗಾರರ ಸೊಸೈಟಿಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ 4820 ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರ ಮನೆಯ 8 ತೆಂಗಿನ ಮರಗಳಂತೆ ಒಟ್ಟು 38, 560 ಮರಗಳಿಂದ ಕಲ್ಪರಸ ಇಳಿಸಲಾಗುತ್ತದೆ.

Advertisement

ರೈತರಿಗೂ ಉತ್ತಮ ಆದಾಯ : ಈ ಕಂಪೆನಿಗೆ ಕಲ್ಪರಸ ಇಳಿಸಲು ರೈತರು 8 ಮರಗಳನ್ನು ನೀಡಿದರೆ ಕಂಪನಿ ವರ್ಷಕ್ಕೆ 1 ಲಕ್ಷ ರರೂಪಾಯಿ ನೀಡುತ್ತದೆ. ರೈತರೇ ಸ್ವತಃ ತರಬೇತಿ ಪಡೆದು ತಾವೇ ತಮ್ಮದೇ 8 ತೆಂಗಿನ ಮರಗಳಿಂದ ದಿನಕ್ಕೆ 2 ಬಾರಿ ಕಲ್ಪರಸವನ್ನು ಇಳಿಸಿದರೆ ಅಂತಹವರಿಗೆ ಕಂಪೆನಿ 2.40 ಲಕ್ಷ ರೂಪಾಯಿ ನೀಡುತ್ತದೆ. ಮರ ಏರುವುದಕ್ಕೆ ಏಣಿ, ಕಲ್ಪರಸವನ್ನು ಇಳಿಸುವ ವಿಶಿಷ್ಟರೀತಿಯಲ್ಲಿ ವಿನ್ಯಾಸಗೊಳಿಸಿರುವ ಪಾತ್ರೆ, ಅದನ್ನು ಸಂಗ್ರಹಿಸಿಡಲು ತಾಪಮಾನ ನಿಯಂತ್ರಿಕ ಬಾಕ್ಸ್‌ಗಳನ್ನು ಕಂಪನಿಯೇ ನೀಡುತ್ತದೆ.

ಬೋನಸ್‌ ಲಾಭವೂ ಇದೆ: ತೆಂಗಿನ ಮರಗಳನ್ನು ನೀಡುವ ರೈತರಿಗೆ ಆದಾಯ ಸಿಗುತ್ತದೆ. ಜೊತೆಗೆ ಕಲ್ಪರಸವನ್ನು ತೆಗೆದ ತೆಂಗಿನ ಮರದಲ್ಲಿ ಇಳುವರಿಯೂ ಶೇ. 50 ರಷ್ಟುಹೆಚ್ಚುತ್ತದೆ. ಇದು ರೈತರಿಗೆ ಬೋನಸ್‌ ಲಾಭ. ವರ್ಷದಾದ್ಯಂತ ಕಲ್ಪರಸ ತೆಗೆಯುವುದಕ್ಕೆ ಅವಕಾಶ ಇರುವುದರಿಂದ ನಿರಂತರ, ಸ್ಥಿರವಾದ ಆದಾಯ ಸಿಗುತ್ತದೆ. ರೈತನಿಗೆ ಮಾರುಕಟ್ಟೆಯ ತಲೆನೋವೂ ಇರುವುದಿಲ್ಲ. ತೆಂಗಿನ ಮರಗಳಿಗೆ ಮಂಗಗಳ ಕಾಟವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ  ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

Advertisement

ಎಳನೀರಿಗಿಂತ 3 ಪಟ್ಟು ಪೌಷ್ಟಿಕ :‌ ತಿಳಿ ಚಿನ್ನದ ಬಣ್ಣವನ್ನು ಹೊಂದಿರುವ ಈ ಕಲ್ಪರಸವನ್ನು 1 ರಿಂದ 4 ಡಿಗ್ರಿ ತಾಪಮಾನದಲ್ಲಿ ಈ ಕಲ್ಪರಸವನ್ನು ಎಷ್ಟುದಿನಗಳವರೆಗೂ ಸಂಗ್ರಹಿಸಿಡಬಹುದು. ಇದು ಎಳನೀರಿಗಿಂತಲೂ ಹೆಚ್ಚು ಸ್ವಾದಿಷ್ಟವಾಗಿದೆ. ಮಾತ್ರವಲ್ಲ 3 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕೊಲೆಸ್ಟರಾಲ್‌ ನಿಯಂತ್ರಿಸುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಕಿಡ್ನಿ ಸ್ಟೋನ್‌ ಗಳನ್ನು ನಿವಾರಿಸುತ್ತದೆ. ಚರ್ಮ, ಕಣ್ಣು, ಲೀವರ್‌ ಆರೋಗ್ಯ ಹೆಚ್ಚಿಸುತ್ತದೆ. ದೇಹಕ್ಕೆ ಹೇಳಿದ ಪ್ರಮಾಣದಲ್ಲಿ ವಿಟಮಿನ್‌ ನೀಡುತ್ತದೆ. ಮಧುಮೇಹಿಗಳೂ ಕಲ್ಪರಸವನ್ನು ನಿರಾತಂಕವಾಗಿ ಕುಡಿಯಬಹುದು ಎಂದು ಕೇಂದ್ರೀಯ ಸಂಶೋಧನಾ ಸಂಸ್ಥೆ ತನ್ನ ಸಂಶೋಧನೆಯಿಂದ ದೃಢಪಡಿಸಿದೆ.

ಕಲ್ಪರಸ ತಂತ್ರಜ್ಞರು ಇದು ಗ್ರೀನ್‌ಕಾಲ್‌ ಜಾಬ್‌: ಉಕಾಸ ಕಂಪೆನಿಯಿಂದ ತೆಂಗಿನ ಮರ ಏರಿ ಕಲ್ಪರಸವನ್ನು ಇಳಿಸುವ ತಂತ್ರಜ್ಞಾನದ ಬಗ್ಗೆ 500 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಮುಂದೆ 5 ವರ್ಷಗಳಲ್ಲಿ 2, 500 ಮಂದಿ ಕಲ್ಪರಸ ತಂತ್ರಜ್ಞರನ್ನು ತರಬೇತುಗೊಳಿಸಿ ಅವರಿಗೆ ಹಸಿರು ಕಾಲರ್‌ ರೀತಿಯ ಉದ್ಯೋಗದ ಭದ್ರತೆ ನೀಡಲಾಗುತ್ತದೆ. ಈ ತಂತ್ರಜ್ಞರು ದಿನಕ್ಕೆ 2 ಬಾರಿ ರೈತರ ಮನೆಗೆ ಹೋಗಿ ಕಲ್ಪರಸವನ್ನು ಇಳಿಸಿ ಕಂಪೆನಿಗೆ ಪೂರೈಕೆ ಮಾಡುತ್ತಾರೆ. ಅಲ್ಲಿಂದ ಅದು ಸಂಸ್ಕರಣೆಗೊಂಡು ಬಾಟಲಿಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ ಎಂದು ಭಾಕಿಸಂ  ಕಾರ್ಯದರ್ಶಿ ಸತ್ಯನಾರಾಯಣ ಉಡುಪ  ಹೇಳುತ್ತಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror