ಹಳೆಯದಾದ ದೇವರ ಫೋಟೋ ಬೇಡವೆಂದಾದರೆ ಅಶ್ವತ್ಥ ಮರದಡಿ ಇಡದಿರಿ..! | ಹಾಗಾದ್ರೆ ಏನು ಮಾಡಬೇಕು..? |

November 11, 2023
12:13 PM
ವರ್ಷಗಳ ಕಾಲ ಪೂಜಿಸಿದಂತಹ ದೇವರ ಫೋಟೋವನ್ನು ಸೂಕ್ತವಾದ ರೀತಿಯಲ್ಲಿ ಕಾಣಬೇಕು. ಎಲ್ಲೆಂದರಲ್ಲಿ ಎಸೆಯಬಾರದು.

ದೇವರ ಫೋಟೋವನ್ನು(God Photo) ಸಿಕ್ಕಸಿಕ್ಕಲ್ಲಿ ಬಿಸಾಡಿದರೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಕೆಲವರು ಹೆದರಿಸುವಾಗ, ಏನು ಮಾಡುವುದಪ್ಪಾ ಎನ್ನುವ ದೊಡ್ಡ ಸಂದೇಹ ಕಾಡುತ್ತದೆ. ಕೆಲವರು ದೇವರ ಫೋಟೋಗಳನ್ನು ದೇವಸ್ಥಾನದಲ್ಲಿರುವ ಅಶ್ವತ್ಥ ವೃಕ್ಷದ(pipal tree) ಕೆಳಗೆ ಇಡುತ್ತಾರೆ. ಯಾವುದೇ ಮರವಿರಲಿ ಅದರ ಕೆಳಗೆ ಊನವಾದ ದೇವರ ಫೋಟೋ, ಭಿನ್ನವಾದ ದೇವರ ಫೋಟೋ ಇಟ್ಟುಬಿಡುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ.

Advertisement
Advertisement
Advertisement

ವರ್ಷಗಳ ಕಾಲ ಪೂಜಿಸಿದಂತಹ ದೇವರ ಫೋಟೋವನ್ನು ಸೂಕ್ತವಾದ ರೀತಿಯಲ್ಲಿ ಗೌರವದಿಂದ ಹರಿಯುವ ನೀರಿನಲ್ಲಿ(Flowing Water) ಬಿಡಬೇಕು. ಕಸ ಕಡ್ಡಿ ತುಂಬಿಕೊಂಡಿರುವ ನೀರು ಅಥವಾ ಪ್ರವಾಹದ ನೀರಿನಲ್ಲಿ ಬಿಡದೇ ಶುದ್ಧವಾಗಿ ಹರಿಯುವ ನದಿಯ ನೀರು, ಜಲಪಾತದ ನೀರಿನಲ್ಲಿ ಬಿಡಬೇಕು. ನೀರಿನಲ್ಲಿ ಬಿಡುವ ಮುನ್ನ ಫೋಟೋ ಫ್ರೇಂ, ಗಾಜಿನ ಕನ್ನಡಿ ಇದ್ದಲ್ಲಿ ಅದನ್ನು ತೆಗೆದು ನೀರಿನಲ್ಲಿ ಬಿಡಬೇಕು, ಇಲ್ಲವಾದಲ್ಲಿ ಗಾಜಿನಿಂದ ಇತರರಿಗೆ ಗಾಯವಾಗಬಹುದು. ನದಿಯ ನೀರಿನಲ್ಲಿ ಬಿಡಲಾಗದಿದ್ದಲ್ಲಿ ಅಗ್ನಿಯಲ್ಲೂ(Fire) ಸುಡಬಹುದು. ಸುಡುವಾಗ ಮರದ ಕೆಳಗೆ ಸುಟ್ಟರೆ ಒಳ್ಳೆಯದು.

Advertisement

ತೀರ್ಥಯಾತ್ರೆ ಅಥವಾ ದೇವಸ್ಥಾನಗಳಿಗೆ(Pilgrimage and temple) ಹೋದಾಗ ಫೋಟೋವನ್ನು ಕೊಂಡರೆ, ಅದನ್ನು ಇತರರಿಗೆ ಕೊಡಬೇಕೆಂಬ ಮನಸ್ಸಿದ್ದಲ್ಲಿ ಅವರಿಗೆ ಅದು ನಿಜವಾಗಿಯೂ ಬೇಕೇ ಎನ್ನುವುದನ್ನು ತಿಳಿದುಕೊಂಡು ನೀಡಬೇಕು. ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ ನೀಡುವುದು ಒಳ್ಳೆಯದು. ಮುಖ್ಯವಾಗಿ ಅವರಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿದ್ದಲ್ಲಿ ಮಾತ್ರ ನೀಡಿ. ದೇವರ ಫೋಟೋವನ್ನು ಇತರರಿಗೆ ನೀಡಿದರೆ ತೆಗೆದುಕೊಂಡವರು ಅದಕ್ಕೆ ಸೂಕ್ತ ಪೂಜೆಯನ್ನು ಸಲ್ಲಿವುದು ಮುಖ್ಯ.

ಮನೆಯಲ್ಲಿ ಒಂದೇ ರೀತಿಯ ದೇವರ ಫೋಟೋ ಅಥವಾ ಹಳೆಯ ಫೋಟೋ ನಿಮಗೆ ಬೇಡವೆಂದಾದಲ್ಲಿ ದೇವಸ್ಥಾನದಲ್ಲಿ ಇಟ್ಟುಕೊಳ್ಳುವುದಾದರೆ ನೀಡಬಹುದು. ಇದನ್ನು ಹೊರತು ಪಡಿಸಿ ಮನಸು ಬಂದ ಕಡೆ ಬಿಸಾಕಿದರೆ ದೇವರಿಗೆ ಅಗೌರವ ನೀಡಿದಂತಾಗುವುದು. ದೇವರ ಮೂರ್ತಿಗಳು ಒಡೆದುಹೋಗಿದ್ದಲ್ಲಿ, ಬಿರುಕುಬಿಟ್ಟಿದ್ದಲ್ಲಿ ಅದನ್ನೂ ಹರಿವ ನೀರಿನಲ್ಲಿ ಬಿಡಬಹುದು. ಆದರೆ ಮಾಲಿನ್ಯ ಉಂಟು ಮಾಡುವ ಮೂರ್ತಿಗಳನ್ನು ನೀರಿನಲ್ಲಿ ಬಿಡಬಾರದು.

Advertisement

– ವಾಟ್ಸ್‌ ಅಪ್‌ ಮಾಹಿತಿ

Under the tree they leave a photo of a deformed God, a photo of a different God. But it is not good to do so. A photo of a deity worshiped for years should be left in flowing water with due respect. The clean flowing river water should be discharged into the water of the waterfall rather than the water full of garbage or the flood water.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror