ಅಡಿಕೆ ಕಳ್ಳಸಾಗಾಣಿಕೆ ಇನ್ನೂ ನಿಂತಿಲ್ಲ. ಬರ್ಮಾ ಅಡಿಕೆ ನಿರಂತರವಾಗಿ ಭಾರತದೊಳಕ್ಕೆ ಬರುತ್ತಲೇ ಇದೆ. ಗಣೇಶ ಚತುರ್ಥಿಯ ಸಡಗರದ ನಡುವೆಯೂ ಬರ್ಮಾ ಅಡಿಕೆ ಕಳ್ಳದಾರಿಯ ಮೂಲಕ ಭಾರತಕ್ಕೆ ಬರುತ್ತಿದ್ದಾಗ ಅಸ್ಸಾಂ ಪೊಲೀಸರು ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಪತ್ತೆ ಮಾಡಿದ್ದಾರೆ. 180 ಚೀಲ ಅಡಿಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಹಬೀಬುರ್ ಲಸ್ಕರ್ ಎಂದು ಗುರುತಿಸಲಾಗಿದೆ.
ಇಂಡೋ-ಮ್ಯಾನ್ಮಾರ್ ಗಡಿಯಿಂದ ಮಿಜೋರಾಂ ಮತ್ತು ಮಣಿಪುರದ ಮೂಲಕ ಬರ್ಮಾ ಅಡಿಕೆ ಸಾಗಾಟಕ್ಕೆ ಪ್ರಯತ್ನ ನಡೆಸಲಾಗುತ್ತಿತ್ತು. ಸೆಪ್ಟೆಂಬರ್ 10 ರಂದು, ಹೈಲಕಂಡಿ ಜಿಲ್ಲೆಯ ಪೊಲೀಸರು ಅಡಿಕೆ ಸಾಗಾಟ ಪ್ರಕರಣವನ್ನು ದಾಖಲಿಸಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel