ಸುಮಾರು ₹1 ಕೋಟಿ ಮೌಲ್ಯದ ಅಕ್ರಮವಾಗಿ ಸಂಗ್ರಹಿಸಿದ್ದ ಅಡಿಕೆ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಪ್ರಕರಣವು ಗುಜರಾತ್‌ನ ಕಚ್ ಜಿಲ್ಲೆಯ ಭಚೌ ತಾಲ್ಲೂಕಿನ ಅಢೋಯಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ವಿದೇಶದಿಂದ (ಇಂಡೋನೇಷ್ಯಾ ಮೂಲ) ಅಡಿಕೆ ಆಮದು ಮಾಡಿದ್ದ 26,650 ಕೆ.ಜಿ. ಅಡಿಕೆಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿತ್ತು. ಈ ಅಡಿಕೆಯನ್ನು ಕರ್ನಾಟಕದಿಂದ ಅಂಜಾರ್‌ಗೆ ಸಾಗಿಸಲಾಗುತ್ತಿದೆ ಎಂಬಂತೆ ನಕಲಿ ಇ-ವೇ ಬಿಲ್ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತರಲ್ಲಿ ಅಹಮದಾಬಾದ್ ಮತ್ತು ಗಾಂಧಿನಗರ ಮೂಲದ ಮೂವರು ಖರೀದಿದಾರರು, ಒಬ್ಬ ಲಾರಿ ಚಾಲಕ, ಇಬ್ಬರು ಮಧ್ಯವರ್ತಿಗಳು ಹಾಗೂ ಅಡಿಕೆ ಸಂಗ್ರಹಿಸಿದ್ದ ಮನೆಯ ಮಾಲೀಕರು ಸೇರಿದ್ದಾರೆ. ಪೊಲೀಸರು ಅಡಿಕೆಯೊಂದಿಗೆ ಮೂರು ವಾಹನಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಸೇರಿದಂತೆ ಸುಮಾರು ₹1.51 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಕಳೆದ 23 ವರ್ಷಗಳಿಂದ ಎಳ್ಳು–ಬೆಲ್ಲ…
ನಕಲಿ ಹಾಗೂ ಕಳಪೆ ಬೀಜಗಳ ಮಾರಾಟ ತಡೆಗೆ ನೂತನ ಬೀಜ ಕಾಯ್ದೆ–2026ನ್ನು ಬಜೆಟ್…
ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಮಕ್ಕಳು ಹಾಗೂ…
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯನ್ನು ಸಚಿವ ಕೃಷ್ಣಭೈರೇಗೌಡ…
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ಸಂಯುಕ್ತ…