ಅಡಿಕೆ ಆಮದು ಚರ್ಚೆಯಾಗುತ್ತಿದ್ದಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಪತ್ತೆ | ಅಸ್ಸಾಂ ಗಡಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |

September 28, 2024
7:27 PM

ಅಡಿಕೆ ಆಮದು ಚರ್ಚೆಯಾಗುತ್ತಿರುವಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯ ಇನ್ನೊಂದು ಪ್ರಕರಣ ಅಸ್ಸಾಂನಲ್ಲಿ ಪತ್ತೆಯಾಗಿದೆ. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ. …..ಮುಂದೆ ಓದಿ….

Advertisement
Advertisement

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ್ ಜಿಲ್ಲೆಯಹಲ್ವಾಟಿಂಗ್ ಪೊಲೀಸ್ ಠಾಣೆ ಬಳಿ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಕಳ್ಳಸಾಗಣೆಯ ಮೂಲಕ ಸಾಗಾಟ ಮಾಡುತ್ತಿದ್ದ ಎರಡು ಟ್ರಕ್‌ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಈಶಾನ್ಯ ರಾಜ್ಯಗಳ ಮಾಧ್ಯಮಗಳು ವರದಿ ಮಾಡಿದೆ.

ಅಸ್ಸಾಂ ಹಾಗೂ ನಾಗಾಲ್ಯಾಂಡ್ ಗಡಿಯ ಮೂಲಕ ಅಕ್ರಮವಾಗಿ ಅಡಿಕೆ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಎರಡು ಟ್ರಕ್‌ ವಶಪಡಿಸಿಕೊಂಡಿದ್ದಾರೆ.  ಇದಕ್ಕೂ ಮೊದಲು ಹಲವು ವಾಹನಗಳು ಸಾಗಿವೆ ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ. ಗಡಿಭಾಗದ  ಹಲ್ವಾಟಿಂಗ್ ಪೊಲೀಸ್ ಠಾಣೆಯಲ್ಲಿ ಭದ್ರತಾ ಕ್ರಮಗಳಲ್ಲಿ ವೈಫಲ್ಯದ ಬಗ್ಗೆಯೂ ಇದೇ ವೇಳೆ ಚರ್ಚೆಯಾಗಿದೆ.

ಬರ್ಮಾ ಅಡಿಕೆಯು ಕಳ್ಳಸಾಗಣೆಯು ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಗಾಟವಾಗುತ್ತಿದೆ.  ಹೀಗಾಗಿ ಗಡಿಭಾಗದಲ್ಲಿ ಮೇಲ್ವಿಚಾರಣೆ, ತಪಾಸಣೆಯ ಬಗ್ಗೆ ಸ್ಥಳೀಯರು ಕೂಡಾ ಇದೀಗ ಆರೋಪ ಮಾಡಲು ಆರಂಭಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆಗಳು ನಡೆಯುತ್ತಿವೆ. ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿಯಾದವರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಬರ್ಮಾ ಅಡಿಕೆ ಕಳ್ಳಸಾಗಾಣಿಕೆದಾರರು ಅಸ್ಸಾಂ ಸೇರಿದಂತೆ ಆಸುಪಾಸಿನ ರಾಜ್ಯಗಳ ಅದರಲ್ಲೂ ಗಡಿಭಾಗದ ಅಡಿಕೆ ಕೃಷಿಕರು ಹಾಗೂ ವ್ಯಾಪಾರಿಗಳೊಂದಿಗೆ ಸಂಪರ್ಕ ಇರಿಸಿಕೊಂಡು ಗಡಿಭಾಗದಿಂದ ನೇರವಾಗಿ ರೈತರ ಗೋಡೌನ್‌ ಅಥವಾ ವ್ಯಾಪಾರಿಗಳ ಗೋಡೌನ್‌ಗೆ ಸಾಗಿಸಿ ಅಲ್ಲಿಂದ ನಂತರ ಮುಂದೆ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತನಿಖೆಯ ವೇಳೆ ತಿಳಿಸಿದೆ. ಸ್ಥಳೀಯ ಅಡಿಕೆ ಬೆಳೆಗಾರರು ಹಾಗೂ ಕೆಲವು ಸಂಸ್ಥೆಗಳು ಈ ಕ್ರಮವನ್ನು ಈ ಹಿಂದೆಯೇ ಖಂಡಿಸಿದ್ದರು. ಕೆಲವು ಸಮಯಗಳ ಹಿಂದೆ ಪ್ರತಿಭಟನೆ , ಲಾರಿಗೆ ಬೆಂಕಿಯನ್ನೂ ಹಚ್ಚಿದ್ದರು. ಇದೀಗ ಮತ್ತೆ ಕಳ್ಳಸಾಗಾಣಿಕೆಯ ಜಾಲ ಸಕ್ರಿಯವಾಗಿದೆ.

Advertisement

Amguri police seized two super-propelled trucks carrying smuggled Arecanut worth over Rs 2 crore near Halwating police station on the Assam-Nagaland border in Sivasagar district.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು
May 22, 2025
6:45 AM
by: ದ ರೂರಲ್ ಮಿರರ್.ಕಾಂ
ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group