ಕೆಆರ್‌ಎಸ್‌ ನೀರಿಗೆ ಅಕ್ರಮವಾಗಿ ಮೋಟಾರ್‌ ಪಂಪ್‌ ಅಳವಡಿಕೆ | ಮೋಟಾರ್‌ ಕರೆಂಟ್ ಕಟ್ ಮಾಡಿ, ಪಂಪ್ ವಶಕ್ಕೆ ಪಡೆದ ಅಧಿಕಾರಿಗಳು |

March 1, 2024
1:08 PM

ದಿನಕಳೆದಂತೆ ನೀರಿಗೆ ಹಾಹಾಕಾರ(Water scarcity) ಆರಂಭವಾಗಿದೆ. ಅದರಲ್ಲೂ ಈ ಬಾರಿ ಕಾವೇರಿ ಜಲಾನಯನ(Cuavery belt) ಪ್ರದೇಶದಲ್ಲಿ ಮುಂಗಾರು(Mansoon rain) ಕೈಕೊಟ್ಟಿದೆ. ಕೆಆರ್‌ಎಸ್‌ ಡ್ಯಾಂ(KRS Dam) ನೀರು ನಂಬಿ ಬದುಕುವ ಮಂಡ್ಯ ರೈತರು(Farmer) ಹಾಗೂ ಬೆಂಗಳೂರು(Bengaluru), ಮೈಸೂರು(Mysore) ಜನತೆಗೆ ಈ ಬಾರಿ ನೀರಿನ ಅಭಾವ ಕಾಡಲಿದೆ. ಮೊದಲೇ KRS ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತದೆ. ಈ ಮಧ್ಯೆ ಕಾವೇರಿ ಒಡಲಿಗೆ ಪ್ರಭಾವಿಗಳಿಂದ ಕನ್ನ ಹಾಕಲಾಗುತ್ತಿದೆ. ಅಕ್ರಮವಾಗಿ ಕೆಆರ್ ಎಸ್ ಡ್ಯಾಂಗೆ ಮೋಟಾರ್(Pump) ಅಳವಡಿಸಿ ನೀರು ಎತ್ತಲಾಗುತ್ತಿದೆ.

Advertisement
Advertisement

ಖಾಸಗಿ ವಾಹಿನಿ ವರದಿ ಮಾಡಿದ ಬೆನ್ನಲ್ಲೇ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್ ಸ್ಥಳಕ್ಕೆ ಭೇಟಿ ನೀಡಿ ನೀಡಿ ಕಾವೇರಿ ನೀರಿಗೆ ಹಾಕಿದ್ದ ಮೋಟಾರ್‌ ಗೆ ಹಾಕಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಳಿಕ ಕೆಇಬಿ ಅಧಿಕಾರಿಗಳು ವಿದ್ಯುತ್ ವೈಯರ್ ವಶಪಡಿಸಿಕೊಂಡರು. ನೀರಿನಲ್ಲಿದ್ದ ಮೋಟಾರ್ ಅನ್ನು ಹೊರ ತೆಗೆದು ಪೈಪ್‍ಗಳನ್ನು ಕೂಡ ವಶಕ್ಕೆ ಪಡೆದುಕೊಂಡರು.

Advertisement

ಏನಿದು ಪ್ರಕರಣ..?: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಹಿನ್ನೀರಿಗೆ ಹೊಂದಿಕೊಂಡಂತೆ ಎರಡು ಫಾರ್ಮ್ ಹೌಸ್‍ಗಳಿವೆ. ಈ ಫಾರ್ಮ್ ಹೌಸ್‍ಗೆ ಅಕ್ರಮವಾಗಿ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಸುಮಾರು 200 ಮೀಟರ್ ಪೈಪ್ ಅಳವಡಿಸಿಕೊಂಡು ಡ್ಯಾಂ ಭದ್ರತಾ ಪಡೆ ಸಿಬ್ಬಂದಿ ಕಣ್ತಪ್ಪಿಸಿ ಅಕ್ರಮ ಎಸಗಲಾಗುತ್ತಿತ್ತು. ಕುಡಿಯುವ ನೀರಿಗೆ ಸಮಸ್ಯೆ ಇದ್ದರೂ ಕದ್ದು ಫಾರ್ಮ್ ಹೌಸ್ ಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಮೂಲಕ ಪ್ರಭಾವಿಗಳು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದರು. ಈ ಬಗ್ಗೆ ಸ್ಥಳಿಯರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಫಾರ್ಮ್ ಹೌಸ್ ಮಾಲೀಕರ ಪ್ರಭಾವಕ್ಕೆ ಮಣಿದು ಕಣ್ಮುಚ್ಚಿ ಕುಳಿತದ್ದಾರೆಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಕ್ರಮವಾಗಿ ಡ್ಯಾಂಗೆ ಮೋಟಾರ್ ಅಳವಡಿಸಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಅಲ್ಲದೇ ಈ ಸಂಬಂಧ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.

Advertisement

– ಅಂತರ್ಜಾಲ ಮಾಹಿತಿ

KRS water level is falling day by day. In the meantime, the Kaveri River is being robbed by influential people. Illegally installing KRS Dange Motor Pump and lifting water. Officials of the Irrigation Corporation rushed to the spot after the private TV reported. AEE Kishore of Kaveri Irrigation Corporation visited the place and cut off the electricity connected to the motor which was connected to Kaveri water.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror