2023 ರಲ್ಲಿ 156 ಕೋಟಿ ರೂಪಾಯಿ ಮೌಲ್ಯದ 4428 ಟನ್ ಅಡಿಕೆ ಕಳ್ಳಸಾಗಣಿಕೆ ವಶಕ್ಕೆ | ಈಗಲೂ ಅಡಿಕೆ ಕಳ್ಳಸಾಗಾಣಿಕೆಗೆ ತಡೆಯಾಗಿಲ್ಲ…! |

February 5, 2024
12:45 PM
ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. 2023 ರಲ್ಲಿ ತಡೆ ಹಿಡಿದ ಕಳ್ಳಸಾಗಾಣಿಕೆ ಅಡಿಕೆಯ ಬಗ್ಗೆ ಅಸ್ಸಾಂ ರೈಫಲ್ಸ್‌ ಮಾಹಿತಿ ನೀಡಿದೆ.

ಅಸ್ಸಾಂ ರೈಫಲ್ಸ್ 2023 ರ ಜನವರಿಯಿಂದ ಡಿಸೆಂಬರ್ ವರೆಗೆ  156 ಕೋಟಿ ರೂಪಾಯಿ ಮೌಲ್ಯದ 4428.314 ಟನ್ ಅಡಿಕೆ ಕಳ್ಳಸಾಗಣೆಯನ್ನು ತಡೆದಿದೆ. ಈಶಾನ್ಯದ ಮಣಿಪುರ, ನಾಗಾಲ್ಯಾಂಡ್ ಮತ್ತು ಮಿಜೋರಾಂ, ನೆರೆಯ ಮ್ಯಾನ್ಮಾರ್‌ನಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಅಡಿಕೆಯನ್ನು  ಅಸ್ಸಾಂ ರೈಫಲ್ಸ್‌  ವಶಪಡಿಸಿಕೊಂಡಿದೆ.ಮುಂದೆ ಓದಿ

Advertisement

ಅಸ್ಸಾಂ ರೈಫಲ್ಸ್  ಮಾಹಿತಿಯ ಪ್ರಕಾರ, 2712.704 ಟನ್ ಅಕ್ರಮ ಅಡಿಕೆ, ಮಣಿಪುರದಲ್ಲಿ 1032.96 ಟನ್, ನಾಗಾಲ್ಯಾಂಡ್‌ನಲ್ಲಿ  682.65 ಟನ್ ಅಡಿಕೆ ವಶಪಡಿಸಿಕೊಂಡಿದೆ. ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಿದೆ.ಮುಂದೆ ಓದಿ

ಶುಕ್ರವಾರ ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಮತ್ತೊಂದು  ಅಡಿಕೆ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದೆ. ಶಂಕಲೋಕ್ ಪ್ರದೇಶದಲ್ಲಿ ಅಕ್ರಮ ಅಡಿಕೆ ಸಾಗಾಣಿಕೆ ಮತ್ತು ಫೈಕೋಹ್ ಮತ್ತು ಗ್ರಿಹಾಂಗ್ ಗ್ರಾಮವನ್ನು ಸಂಪರ್ಕಿಸುವ ಜಂಗಲ್ ಟ್ರ್ಯಾಕ್‌ನಲ್ಲಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಅಸ್ಸಾಂ ರೈಫಲ್ಸ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಭಾರತೀಯ ನೋಂದಣಿ ಸಂಖ್ಯೆಯನ್ನು ಹೊಂದಿರುವ ಒಟ್ಟು ಒಂಬತ್ತು ಟ್ರಕ್‌ಗಳನ್ನು ತಡೆದಿದ್ದಾರೆ.ಮುಂದೆ ಓದಿ

ಮ್ಯಾನ್ಮಾರ್‌ನೊಂದಿಗೆ 1,643-ಕಿಲೋಮೀಟರ್ ಉದ್ದದ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುವ ಈಶಾನ್ಯ ರಾಜ್ಯಗಳಲ್ಲಿ ಅಡಿಕೆ ಕಳ್ಳಸಾಗಣೆ ಸಾಕಷ್ಟು ವ್ಯಾಪಕವಾಗಿದೆ. ಮಣಿಪುರವು ಮ್ಯಾನ್ಮಾರ್‌ನೊಂದಿಗೆ 398 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡರೆ, ಮಿಜೋರಾಂ 510 ಕಿಲೋಮೀಟರ್, ಅರುಣಾಚಲ ಪ್ರದೇಶ 520 ಕಿಲೋಮೀಟರ್ ಮತ್ತು ನಾಗಾಲ್ಯಾಂಡ್ 215 ಕಿಲೋಮೀಟರ್ ಹಂಚಿಕೊಂಡಿದೆ. ಕಳ್ಳಸಾಗಾಣಿಕೆ ಅಡಿಕೆಗಳು ಈ ಗಡಿಗಳ ಮೂಲಕ ಭಾರತಕ್ಕೆ ಬರುತ್ತಿವೆ. ನಂತರ ದೇಶದ ವಿವಿಧ ಭಾಗಗಳಿಗೆ ಸಾಗಿಸಲ್ಪಡುತ್ತವೆ. 2021 ರಲ್ಲಿ, ನೆರೆಯ ದೇಶಗಳಿಂದ ಅಡಿಕೆ ಕಳ್ಳಸಾಗಣೆ ಕುರಿತು ಭಾರತದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿತ್ತು.ಮುಂದೆ ಓದಿ

ಇದೆಲ್ಲದರ ನಡುವೆಯೂ ಶುಕ್ರವಾರ  ಮಣಿಪುರದಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಅಡಿಕೆ ಹಾಗೂ 13 ಕಳ್ಳಸಾಗಣೆದಾರರ ಬಂಧಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ 1337 ಚೀಲ ಅಡಿಕೆಯನ್ನ ವಶಕ್ಕೆ ಪಡೆದಿದೆ. ಒಟ್ಟು ಹದಿಮೂರು ಟ್ರಕ್‌ಗಳನ್ನು ಅಗತ್ಯ ದಾಖಲೆಗಳ ಕೊರತೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ ತಿಳಿಸಿದೆ.

Source : ABP news and Assam Rifles

Assam Rifles intercepted smuggling of 4428.314 tonnes of Arecanut worth Rs 156 crore from January to December 2023.The Assam Rifles has seized arecanut being smuggled into India from neighboring Myanmar through the northeastern states of Manipur, Nagaland and Mizoram.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ
April 23, 2025
3:13 PM
by: ಸಾಯಿಶೇಖರ್ ಕರಿಕಳ
ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ | ಅಂಚೆ ಇಲಾಖೆಯಿಂದ 6 ವರ್ಷಗಳಿಂದ ಯಶಸ್ವಿ | ದೆಹಲಿಯವರೆಗೂ ಮಾವಿನಹಣ್ಣು ರವಾನೆ |
April 23, 2025
11:24 AM
by: ದ ರೂರಲ್ ಮಿರರ್.ಕಾಂ
ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!
April 23, 2025
8:13 AM
by: ದ ರೂರಲ್ ಮಿರರ್.ಕಾಂ
ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group