ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?

July 5, 2025
7:41 AM
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ ಒಳಗಡೆ ಅಡಿಕೆ ಮಾರುಕಟ್ಟೆಯಲ್ಲಿ ದಿಢೀರನೆ ಏರಿಳಿತ. ಇದೆರಡಕ್ಕೂ ಸಂಬಂಧ ಇದೆಯೇ ಎನ್ನುವ ಅನುಮಾನಗಳು ಈಗ ಬಲಗೊಳ್ಳುತ್ತಿದೆ. ಸುಮಾರು 6 ತಿಂಗಳ ವಿದ್ಯಮಾನಗಳನ್ನು ಗಮನಿಸಿದರೆ ಪ್ರತೀ ಬಾರಿಯ ಏರಿಳಿತದ ಸಂದರ್ಭ ಅಕ್ರಮ ಅಡಿಕೆ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.

ಅಸ್ಸಾಂ-ಮೇಘಾಲಯ ಗಡಿಯ ಬೊಕೊದಲ್ಲಿರುವ ಲ್ಯಾಂಪಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಬರ್ಮಾ ಅಡಿಕೆಯನ್ನು  ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ.

Advertisement

ಅಸ್ಸಾಂ- ಮೇಘಾಲಯ ಗಡಿಯಲ್ಲಿರುವ ಲ್ಯಾಂಪಿ ಮಾರ್ಗದ ಮೂಲಕ ಮೇಘಾಲಯದಿಂದ ಅಸ್ಸಾಂ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ  ವಾಹನದಲ್ಲಿ ಬರ್ಮಾ ಮೂಲದ ಅಡಿಕೆ ತುಂಬಿಸಿ  ಕಳ್ಳಸಾಗಣೆ ಮೂಲಕ ದೇಶಕ್ಕೆ ತರುವ ಪ್ರಯತ್ನ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಸ್ಟಮ್ಸ್ ಸುಂಕವನ್ನು ತಪ್ಪಿಸಲು ಗಡಿಗಳ ಮೂಲಕ ಕಳ್ಳಸಾಗಾಣಿಕೆಯಲ್ಲಿ ಸಾಗಾಟ ಮಾಡಲಾಗುತ್ತಿದೆ. ಕಳೆದ ಕೆಲವು ಸಮಯಗಳಿಂದ ಇಂತಹ ಘಟನೆ ನಡೆಯುತ್ತಲೇ ಇದೆ. ಅಡಿಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲೂ ಕಳ್ಳಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಅನುಮಾನಗಳು ಇವೆ ಎಂದು ಹೇಳಿಕೆಯಲ್ಲಿ ಅಸ್ಸಾಂ ಪೊಲೀಸರು ಹೇಳಿದ್ದಾರೆ.

ಪ್ರತೀ ಬಾರಿಯೂ ಅಡಿಕೆ ಕಳ್ಳಸಾಗಾಣಿಕೆಯು ಬೃಹತ್‌ ಪ್ರಮಾಣದಲ್ಲಿ ಸಾಗಾಟವಾಗುವ ವೇಳೆ ದೇಶದಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿತ ಕಂಡುಬರುತ್ತದೆ. ಅದು ಚಾಲಿ ಅಡಿಕೆ, ಕೆಂಪಡಿಕೆಯಲ್ಲಿ ಕೂಡಾ ಧಾರಣೆಯ ಏರಿಳಿತ ಕಂಡುಬರುತ್ತಿದೆ. ಧಾರಣೆ ಏರಿಕೆಯ ನಿರೀಕ್ಷೆ ಅಥವಾ ಧಾರಣೆ ಏರಿಕೆಯ ಸಾಧ್ಯತೆಯನ್ನು ಊಹಿಸುತ್ತಿರುವಾಗ ಕಳ್ಳಸಾಗಾಣಿಕೆಯ ಮೂಲಕ ಅಡಿಕೆ ದೇಶಕ್ಕೆ ಪ್ರವೇಶವಾದ ತಕ್ಷಣ ಧಾರಣೆ ಇಳಿಕೆ ಅಥವಾ ವ್ಯತ್ಯಾಸ ಕಂಡುಬರುತ್ತಿದೆ. ಕಳೆದ ಸುಮಾರು ಆರು ತಿಂಗಳ ವಿದ್ಯಮಾನಗಳನ್ನು ಗಮನಿಸಿದರೆ ಅಡಿಕೆ ಆಮದು ವಶಕ್ಕೆ ಪಡೆದ ಸುದ್ದಿಯ ಜೊತೆಗೇ ದೇಶದೊಳಗೆ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದಿದೆ. ಅಕ್ರಮ ಸಾಗಾಟ ಪ್ರಕರಣದಲ್ಲಿಯೂ ಎಲ್ಲಾ ಸಾಗಾಟವು ಪತ್ತೆಯಾಗದೆ, ಒಂದೆರಡು ಸಾಗಾಟವು ಮಾತ್ರವೇ ಪತ್ತೆಯಾಗುವ ಬಗ್ಗೆಯೂ ಈ ಹಿಂದೆ ಗಡಿಭದ್ರತಾ ಪಡೆಯ ತನಿಖೆಯ ವೇಳೆ ತಿಳಿದಿತ್ತು. ಅಕ್ರಮ ಸಾಗಾಟದ ಸುಮಾರು 10 ವಾಹನಗಳ  ರವಾನೆದಾರರು ಹಾಗೂ ಖರೀದಿದಾರರ ಪತ್ತೆಯೇ ಸಾಧ್ಯವಾಗಿರಲಿಲ್ಲ. ಈಚೆಗೆ ಇಂತಹದ್ದೇ ಪ್ರಕರಣದಲ್ಲಿ ರಾಜಕೀಯ ಮುಖಂಡನೊಬ್ಬನನ್ನು ಬಂಧಿಸಲಾಗಿತ್ತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ
ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ
July 11, 2025
7:11 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror