ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಧಾರಣೆ ಇನ್ನಷ್ಟು ಏರಿಕೆಯಾಗುತ್ತದೆ ಎಂದು ಸುದ್ದಿಯಾಗುತ್ತಿದ್ದಂತೆಯೇ ಅಕ್ರಮವಾಗಿ ಅಡಿಕೆ ಆಮದು ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬರ್ಮಾ ಅಡಿಕೆ ಸಾಗಾಟದ ಇನ್ನೊಂದು ಪ್ರಕರಣ ಮಿಜೋರಾಂನಲ್ಲಿ ಅಸ್ಸಾಂ ರೈಫಲ್ಸ್ ಪತ್ತೆ ಮಾಡಿದೆ.…..ಮುಂದೆ ಓದಿ….
ಮಿಜೋರಾಂನ ಚಂಫೈ ಜಿಲ್ಲೆಯ ಚುಂಗ್ಟೆ ಪ್ರದೇಶದಲ್ಲಿ ಸುಮಾರು 9400 ಕಿಲೋಗ್ರಾಂಗಳಷ್ಟು ಬರ್ಮಾ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡರು. ಕಾರ್ಯಾಚರಣೆಯಲ್ಲಿ, ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ಭಾಗಿಯಾಗಿದ್ದವು. ಮಿಜೋರಾಂನ ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮವಾಗಿ ಅಡಿಕೆ ಸಹಿತ ಇತರ ವಸ್ತುಗಳ ಸಾಗಾಟ ನಡೆಯುತ್ತಿದೆ. ಇದರ ತಡೆಗೆ ಪ್ರಯತ್ನವಾಗುತ್ತಿದೆ. ಈಚೆಗೆ ಒಂದು ತಿಂಗಳಿನಿಂದ ಸಾಕಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟ ನಡೆಯುತ್ತಿದೆ.
ದೇಶೀಯ ಅಡಿಕೆಯ ಧಾರಣೆ 450 ರೂಪಾಯಿ ಗಡಿ ದಾಟುತ್ತಿದ್ದಂತೆಯೇ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟದ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ, ಈ ನಡುವೆ ಬರ್ಮಾ ಅಡಿಕೆ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ.