ಕಳೆದ ಹಲವು ವರ್ಷಗಳಿಂದ ವಿಶ್ವದಾದ್ಯಂತ ಹವಾಮಾನ ಬದಲಾವಣೆಯು ಗಂಭೀರವಾದ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಈ ಹವಾಮಾನ ಬದಲಾವಣೆಯು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚೀನಾದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಕೃಷಿ, ಗ್ರಾಮೀಣ ಮಾತ್ರವಲ್ಲ ನಗರ ಪ್ರದೇಶದಲ್ಲೂ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ.
ಕಾರ್ಮಿಕರ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಬದಲಾವಣೆಯ ಬಗ್ಗೆ ಚೀನಾ ಸಂಸ್ಥೆಯೊಂದು ಅಧ್ಯಯನ ನಡೆಸಿತ್ತು. ಕಾರ್ಮಿಕರ ಲಭ್ಯತೆ ಹಾಗೂ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಲಾಗಿತ್ತು. ಈ ಸಂದರ್ಭ ಕಾರ್ಮಿಕರ ಲಭ್ಯತೆ ಹಾಗೂ ಉದ್ಯೋಗದ ಮೇಲೆ ಹವಾಮಾನ ಬದಲಾವಣೆಯ ಪ್ರಮುಖ ಪಾತ್ರ ಕಂಡುಬಂದಿದೆ. ತೀವ್ರವಾದ ಬಿಸಿಗಾಳಿ ಅಥವಾ ಭಾರೀ ಮಳೆಯ ಬಗ್ಗೆಯೂ ಚರ್ಚೆಯಾಗಿದೆ. 2014 ರಿಂದ 2020 ರವರೆಗಿನ ಚೀನಾದ ನಗರ ಮಟ್ಟದ ವಾರ್ಷಿಕ ಡೇಟಾವನ್ನು ಗಮನಿಸಲಾಗಿತ್ತು. ವಾತಾವರಣದ ಉಷ್ಣತೆ ಏರಿಕೆ ಕಂಡಾಗ ಸಂಸ್ಥೆಗಳ ಕಾರ್ಮಿಕರ ನೇಮಕಾತಿಯಲ್ಲಿ ಗಣನೀಯವಾಗಿ ಕಡಿಮೆ ಮಾಡಿಕೊಳ್ಳುತ್ತವೆ. ಭಾರೀ ಮಳೆಯ ಸಂದರ್ಭದಲ್ಲೂ ಕಾರ್ಮಿಕರ ನೇಮಕಾತಿ ಕಡಿಮೆಯಾಗಿತ್ತು. ಇದೆರಡೂ ಸಂದರ್ಭ ಕಂಪನಿಗಳ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದ್ದವು. ಇದೇ ವೇಳೆ ಕೃಷಿ ಹಾಗೂ ಗ್ರಾಮೀಣ ಕ್ಷೇತ್ರದಲ್ಲೂ ಇಂತಹದ್ದೇ ಪರಿಣಾಮಗಳನ್ನು ಕಂಡಿದೆ. ಬಿಸಿ ವಾತಾವರಣದಲ್ಲಿ ಕೃಷಿ ಚಟುವಟಿಕೆಗಳೂ ಕಡಿಮೆಯಾಗುತ್ತವೆ, ಭಾರೀ ಮಳೆಯಾದಾಗಲೂ ಕಡಿಮೆಯಾಗುತ್ತಿರುವುದು ಕಂಡುಬಂದಿದೆ.
ಕಂಪನಿಗಳು ಇಂತಹ ಹವಾಮಾನ ಬದಲಾವಣೆಗಳ ವೇಳೆ ಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಲು, ಸಂಸ್ಥೆಗಳು ಮಾನವ ಕಾರ್ಮಿಕರಿಗೆ ಬದಲಿಯಾಗಿ ಕೈಗಾರಿಕಾ ರೋಬೋಟ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತವೆ, ಇದರಿಂದಾಗಿ ಉತ್ಪಾದನಾ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಸಂಸ್ಥೆಗಳು ಹೆಚ್ಚು ಅನುಭವಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಒಲವು ತೋರುತ್ತವೆ ಮತ್ತು ಹೆಚ್ಚಿನ – ತಾಪಮಾನದ ಸಬ್ಸಿಡಿಗಳನ್ನು ನೀಡುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಕಾರ್ಮಿಕರಲ್ಲಿ ಇಳಿಕೆ ಕಂಡುಬರುತ್ತದೆ , ಅಭದ್ರತೆ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಅಂತಹ ಬದಲಾವಣೆಗಳು ತಕ್ಷಣವೇ ಕಂಡುಬರಲಿಲ್ಲ, ಕೆಲಸಗಳಲ್ಲಿ ಇಳಿಕೆ ಕಂಡುಬರುತ್ತವೆ.
ಹವಾಮಾನ ವೈಪರೀತ್ಯ ಪ್ರತೀ ವರ್ಷ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಉಳಿವಿಗೆ ಕೆಲವೊಂದು ಪಾಲಿಸಿಗಳನ್ನು ಕಾರ್ಮಿಕರಿಗಾಗಿ ಸರ್ಕಾರಗಳ ಮಾಡಬೇಕಾಗಬಹುದು ಎನ್ನುವುದು ಅಧ್ಯಯನದ ಬಳಿಕ ಹೊರಬಂದಿರುವ ಅಂಶ. ಸರ್ಕಾರಿ ಮಟ್ಟದಲ್ಲಿ, ಸ್ಥಳೀಯವಾಗಿ ಸೂಕ್ತವಾದ ಹಣಕಾಸಿನ ಸಬ್ಸಿಡಿಗಳನ್ನು ಒದಗಿಸಬೇಕು ಅಥವಾ ಉದ್ಯಮಗಳಿಗೆ, ಕೃಷಿ ಕಾರ್ಮಿಕರಿಗೆ ಮೀಸಲಾದ ಬೆಂಬಲ ನಿಧಿಗಳನ್ನು ಸ್ಥಾಪಿಸಬೇಕು. ಈ ಮೂಲಕ ಕಾರ್ಮಿಕ ಮಾರುಕಟ್ಟೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಪ್ರಯತ್ನ ನಡೆಯಬೇಕಾಗಬಹುದು ಎನ್ನುವುದು ಕಂಡುಬಂದಿರುವ ಅಂಶ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…